ರೈತರ ಅಭಿವೃದ್ಧಿಗೆ ಮತ್ತೊಮ್ಮೆ ಬಿಜೆಪಿಗೆ ಬೆಂಬಲ ನೀಡಿ

KannadaprabhaNewsNetwork |  
Published : Apr 26, 2024, 01:02 AM IST
ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜಿಪಿ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ ಪರ ಗದಗ ನಗರದ ವಿವಿಧ ವಾರ್ಡ್‌ಗಳಲ್ಲಿ ಶಾಸಕ ಸಿ.ಸಿ. ಪಾಟೀಲ ಮತ ಯಾಚನೆ ಮಾಡಿದರು. | Kannada Prabha

ಸಾರಾಂಶ

ಒಂದು ರಾಜ್ಯ ಮತ್ತು ದೇಶ ಸುಭದ್ರವಾಗಿರಬೇಕಾದರೆ ಜನತೆಗೆ ಸಮೃದ್ಧ ಜೀವನ ನಡೆಸುವ ವಾತಾವರಣ ನಿರ್ಮಾಣ ಮಾಡುವ ಕೆಲಸವಾಗಬೇಕು

ಗದಗ: ರೈತರ ಅಭಿವೃದ್ಧಿಗೆ, ಮೋದಿ ಅವರ ಕೈ ಬಲಪಡಿಸಲು ಬಸವರಾಜ ಬೋಮ್ಮಾಯಿ ಅವರಿಗೆ ಹೆಚ್ಚು ಮತಗಳನ್ನು ನೀಡಿ ಲೋಕಸಭೆಗೆ ಕಳಿಸೋಣ ಎಂದು ಶಾಸಕ ಸಿ.ಸಿ. ಪಾಟೀಲ ಮನವಿ ಮಾಡಿದರು.

ನಗರದ ವಿವಿಧ ವಾರ್ಡಗಳಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜಿಪಿ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ ಪರ ಅವರು ಮತ ಯಾಚನೆ ಮಾಡಿದರು. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಸರ್ಕಾದ ಸಮಯದಲ್ಲಿ ರೈತರಿಗೆ ಕೇಂದ್ರ ಸರ್ಕಾರದಿಂದ ₹೬ ಸಾವಿರ, ರಾಜ್ಯ ಸರ್ಕಾರದಿಂದ ₹೪ ಸಾವಿರ ಖಾತೆಗೆ ನೇರವಾಗಿ ಸಂದಾಯವಾಗುತ್ತಿತ್ತು. ಅದನ್ನು ಇಂದಿನ ಕಾಂಗ್ರೆಸ್ ಸರ್ಕಾರ ನಿಲ್ಲಿಸಿದೆ ಎಂದು ಹೇಳಿದರು.

ವಿಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಒಂದು ರಾಜ್ಯ ಮತ್ತು ದೇಶ ಸುಭದ್ರವಾಗಿರಬೇಕಾದರೆ ಜನತೆಗೆ ಸಮೃದ್ಧ ಜೀವನ ನಡೆಸುವ ವಾತಾವರಣ ನಿರ್ಮಾಣ ಮಾಡುವ ಕೆಲಸವಾಗಬೇಕು. ಅದು ಕೇವಲ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ. ಅದಕ್ಕೆ ಈ ೧೦ ವರ್ಷಗಳಲ್ಲಿ ದೇಶವನ್ನು ಆರ್ಥಿಕವಾಗಿ ೧೨ನೇ ಸ್ಥಾನದಿಂದ ೫ನೇ ಸ್ಥಾನಕ್ಕೆ ತಂದು ದೇಶದ ಅರ್ಥ ವ್ಯವಸ್ಥೆಯನ್ನು ಸುಧಾರಿಸಿದೆ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರಡಗಿ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ರವಿ ಬಿದರೂರ, ಅಶೋಕ ಸಂಕಣ್ಣವರ, ಫಕ್ಕೀರೇಶ ರಟ್ಟಿಹಳ್ಳಿ, ನಗರಸಭೆ ಸದಸ್ಯ ಅನಿಲ್ ಅಬ್ಬಿಗೇರಿ, ಸಂತೋಷ್ ಅಕ್ಕಿ, ಬಸವರಾಜ ಕೊರ್ಲಹಳ್ಳಿ, ಶೇಖರ್ ಗೌಡ ಪಾಟೀಲ, ಅಶೋಕ್ ಶಂಕಣ್ಣವರ, ಪ್ರದೀಪ ಅಡಗಟ್ಟಿ, ಶರಣಪ್ಪ ಕುರಡಗಿ, ಎಂ.ಎಂ. ಹಿರೇಮಠ, ದತ್ತಣ್ಣ ಜೋಶಿ, ರಾಜು ಹೊಂಗಲ, ಶ್ರೀನಿವಾಸ ಹುಬ್ಬಳ್ಳಿ, ಕೆ.ಪಿ. ಕೋಟಿಗೌಡರ, ಶಶಿಧರ ದಿಂಡೂರ, ಹಿರಿಯರಾದ ಕಾಂತಿಲಾಲ ಬನ್ಸಾಲಿ, ತೋಟುಸಾ ಬಾಂಡಗೆ, ಬಿ.ಎಚ್. ಲದ್ವಾ, ಜಗನಾಥಸಾ ಬಾಂಡಗೆ, ಸಂಗಮೇಶ ದುಂದೂರ ಹಾಗೂ ಕಾರ್ಯಕರ್ತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ