ಚನ್ನಪಟ್ಟಣ: ಈ ಬಾರಿಯ ಲೋಕಸಭಾ ಚುನಾವಣೆ ಬಹಳ ಮಹತ್ವ ಪಡೆದುಕೊಂಡಿದೆ. ಇದು ಎಂಎಲ್‌ಎ, ಎಂಎಲ್‌ಸಿ ಚುನಾವಣೆಯಲ್ಲ, ದೇಶದ ಭವಿಷ್ಯ ರೂಪಿಸವ ಚುನಾವಣೆಯಾಗಿದೆ. ದೇಶದಲ್ಲಿ ಸಂವಿಧಾನದ ಉಳಿಯಬೇಕಾದರೆ, ಪ್ರಜಾಪ್ರಭುತ್ವ ಉಳಿವಿಗೆ ಕಾಂಗ್ರೆಸ್ ಗೆಲುವು ಸಾಧಿಸಬೇಕಿದ್ದು, ಈ ನಿಟ್ಟಿನಲ್ಲಿ ಈ ಬಾರಿಯ ಚುನಾವಣೆಯಲ್ಲಿ ಎಲ್ಲರೂ ಕಾಂಗ್ರೆಸ್ ಅನ್ನು ಬೆಂಬಲಿಸಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದರು.
ಸಂವಿಧಾನ ಬದಲಿಸಲು ೪೦೦ ಪಾರ್!: ನರೇಂದ್ರ ಮೋದಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 400 ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತೇವೆ ಎನ್ನುತ್ತಾರೆ. ಸಂವಿಧಾನ ಬದಲಾವಣೆಗೆ ೩ನೇ ಒಂದು ಭಾಗದ ಬಹುಮತದ ಅಗತ್ಯವಿದ್ದು, ಈ ಹಿನ್ನೆಲೆಯಲ್ಲಿ 400 ಕ್ಷೇತ್ರದಲ್ಲಿ ಗೆಲುವು ಸಾಧಿಸಬೇಕು ಎನ್ನುತ್ತಿದ್ದಾರೆ. ಒಂದು ಕಡೆ ಮೋದಿ ಸಂವಿಧಾನ ಬದಲಾವಣೆ ಇಲ್ಲ ಎನ್ನುತ್ತಾರೆ. ಇನ್ನೊಂದು ಕಡೆ ಅವರದೇ ಪಕ್ಷದವರು ಸಂವಿಧಾನದ ಬದಲಾವಣೆ ಕುರಿತು ಮಾತನಾಡುತ್ತಾರೆ. ಸಂವಿಧಾನ ಬದಲಾವಣೆ ಮಾಡುವುದಿಲ್ಲ ಎಂದ ಮೇಲೆ ಆ ಹೇಳಿಕೆ ನೀಡುವವರನ್ನು ಪಕ್ಷದಿಂದ ಉಚ್ಛಾಟನೆ ಏಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಅಂಬೇಡ್ಕರ್ ಪೋಟೋ ಇದೆಯೇ?:ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರಿನ ಮೇಲೆ ಮೋದಿ ಸಾಕಷ್ಟು ಭಾಷಣ ಮಾಡುತ್ತಾರೆ. ಆದರೆ ಆರ್‌ಎಸ್‌ಎಸ್ ಕಚೇರಿಯಲ್ಲಿ ಅಂಬೇಡ್ಕರ್ ಪೋಟೊ ಇದ್ಯಾ. ಆರ್‌ಎಸ್‌ಎಸ್ ಕಚೇರಿ ಮೇಲೆ ಎಂದಾದರೂ ತ್ರಿವರ್ಣ ಧ್ವಜ ಹಾರಿಸಿದ್ದಾರಾ.? ದೇಶದ ಮೇಲೆ ಯಾರಿಗೆ ಹೆಚ್ಚು ಪ್ರೀತಿ ಇದೆ ಅಂತ ಇದರಿಂದ ಗೊತ್ತಾಗುತ್ತೆ. ಇವರು ನಮಗೆ ದೇಶಪ್ರೇಮದ ಪಾಠ ಮಾಡ್ತಾರೆ ಎಂದು ಕಿಡಿಕಾರಿದರು.
ರೈತರ ಸಮಾಧಿ ಮಾಡಿದರು:
ದರ ಏರಿಕೆ ಕುರಿತು ಮಾತನಾಡಲ್ಲ:
ಎಲ್ಲಿದೆ ಅಚ್ಚೆ ದಿನ್:
ಇವರು ದೇಶವನ್ನು ಅಭಿವೃದ್ಧಿ ಮಾಡುತ್ತಿಲ್ಲ. ದೇಶವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಜಾತಿಗಳ ಮಧ್ಯೆ ಜಗಳ ತಂದಿಡುತ್ತಿದ್ದಾರೆ. ಹಿಂದು ಮುಸ್ಲಿಮರ ನಡುವೆ ಜಗಳ, ಜಾತಿ ಜಾತಿಗಳ ನಡುವೆ ಜಗಳ ತಂದಿಟ್ಟರು. ಕಾಂಗ್ರೆಸ್‌ನವರಿಗೆ ರಾಮಮಂದಿರಕ್ಕೆ ಆಹ್ವಾನ ಮಾಡಿದ್ವಿ ಅಂದ್ರು. ನನಗೂ ಆಹ್ವಾನ ಪತ್ರಿಕೆ ಕೊಟ್ರು. ನನಗೆ ಯಾಕೆ ಆಹ್ವಾನ ಕೊಟ್ಟರು ಏಕೆಂದರೆ ನಾನು ವಿಪಕ್ಷ ನಾಯಕ. ನನಗೆ ಯಾವಾಗ ಬೇಕೋ ಆವಾಗ ಹೋಗ್ತೇನೆ. ಆದ್ರೆ ಬಿಜೆಪಿಯವರು ಕಾಂಗ್ರೆಸ್‌ನವರು ಬರ್ತಿಲ್ಲ ಅಂತ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪುಟ್ಟಣ, ಎಐಸಿಸಿ ಕಾರ್ಯದರ್ಶಿ ಪ್ರಣವ್ ರಾವ್, ಸುಧಾಮದಾಸ್, ಮಾಜಿ ಶಾಸಕರಾದ ಎಂ.ಸಿ ಅಶ್ವತ್ಥ, ಸಾದತ್ ಅಲಿಖಾನ್, ಎಚ್.ಎಂ.ರೇವಣ್ಣ, ಬಿಎಂಎಸಿಎಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್, ಕೆಪಿಸಿಸಿ ಕಾರ್ಯದರ್ಶಿ ದುಂತೂರು ವಿಶ್ವನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಆರ್. ಪ್ರಮೋದ್, ಸುನೀಲ್ ಇತರರಿದ್ದರು.
ರಾಷ್ಟ್ರಪತಿ ದ್ರೌಪತಿಮುರ್ಮು ಅವರನ್ನೇಕೆ ಕರೆದಿಲ್ಲ
ರಾಜ್ಯದಲ್ಲಿ ಐದು ಗ್ಯಾರಂಟಿ ಯಶಸ್ವಿಯಾಗಿವೆ. ಈಗ ಮುಂದೆ ಮಹಿಳೆಯರಿಗೆ ಮಹಾಲಕ್ಷ್ಮಿ ಸ್ಕೀಂ ತರ್ತಿದ್ದೇವೆ. ವರ್ಷಕ್ಕೆ ಮಹಿಳೆಯರಿಗೆ ೧ಲಕ್ಷ ಹಣ ನೀಡುವ ಯೋಜನೆ ತರ್ತಿದ್ದೇವೆ. ದೇಶದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಚಿಂತನೆ ಮಾಡಿದೆ. ನಾವು ಮೋದಿ ವಿರುದ್ಧ ಇಲ್ಲ, ಮೋದಿ ಐಡಿಯಾಲಜಿ ವಿರುದ್ಧ ಇದ್ದೇವೆ. ಆರ್ ಎಸ್‌ಎಸ್ ತತ್ವದ ವಿರುದ್ಧ ಇದ್ದೇವೆ ಎಂದರು.
ಮಾತೆತ್ತಿದ್ರೆ ಮೋದಿ ಗ್ಯಾರಂಟಿ ಅಂತೀರಿ. ಎಲ್ಲ ವಿಚಾರಕ್ಕೂ ನಮ್ಮ ಬಿಜೆಪಿ ಮಾಡಿದೆ ಎನ್ನುವುದಿಲ್ಲ. ನಾನು ಮಾಡಿದೆ ಎನ್ನುತ್ತಾರೆ. ಎಲ್ಲದಕ್ಕೂ ಮೋದಿ, ಮೋದಿ ಅಂತಿರೀ. ಅದಕ್ಕಾಗಿ ನಾವು ಮೋದಿ ಹೆಸರನ್ನ ತೆಗೆದುಕೊಂಡು ಮಾತನಾಡ್ತೇವೆ. ಮೋದಿ ಎಂಬ ವೈಯಕ್ತಿಕ ವ್ಯಕ್ತಿ ಬಗ್ಗೆ ನಮಗೆ ಅಸಮಾಧಾನ ಇಲ್ಲ. ನಮಗೆ ಮೋದಿ ತತ್ವದ ಮೇಲೆ ಅಸಮಾಧಾನ ಇದೆ ಎಂದರು.ಬಾಕ್ಸ್.............
ಪ್ರಣಾಳಿಕೆ ಕುರಿತು ಚರ್ಚೆಗೆ ಬನ್ನಿ: ಖರ್ಗೆ ಸವಾಲುಕಾಂಗ್ರೆಸ್ ಪ್ರಣಾಳಿಕೆಯನ್ನು ಮೋದಿ ಮುಸ್ಲೀಂ ಲೀಗ್ ಪ್ರಣಾಳಿಕೆ ಎನ್ನುತ್ತಾರೆ. ನಮ್ಮ ಪ್ರಣಾಳಿಕೆ ಹಾಗೂ ನಿಮ್ಮ ಪ್ರಣಾಳಿಕೆ ಕುರಿತು ಚರ್ಚೆ ಮಾಡೋಣ ಬನ್ನಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಸವಾಲು ಹಾಕಿದರು.
ಎಲ್ಲಾ ಕಡೆ ಬಿಜೆಪಿ ಸೋಲುವ ವಾತಾವರಣ ಇದೆ. ಹಾಗಾಗಿ ಮೋದಿ ಬಾಯಿಗೆ ಬಂದ ಹಾಗೆ ಮಾತನಾಡ್ತಿದ್ದಾರೆ. ಯುವಕರಿಗೆ ನೌಕರಿ, ನಾರಿ ಶಕ್ತಿ ಯೋಜನೆ, ಮಹಿಳೆಯರಿಗೆ ೧ ಲಕ್ಷ, ರೈತರಿಗೆ ನ್ಯಾಯ ಬೆಲೆ ನೀಡುತ್ತೇವೆ ಎಂದರೆ ಅದು ಮುಸ್ಲಿಂ ಲೀಗ್ ಪ್ರಣಾಳಿಕೆಯಾಗುತ್ತದಾ? ನಿಮ್ಮ ಬಂಗಾರ ತೆಗೆದುಕೊಂಡು ಅವರಿಗೆ ನೀಡುತ್ತಾರೆ ಎನ್ನುತ್ತಾರೆ. ಒಬ್ಬ ಪ್ರಧಾನಿಯಾದವರು ತಿಳಿವಳಿಕೆ ಇಟ್ಟುಕೊಂಡು ಮಾತನಾಡಬೇಕು. ಈ ರೀತಿ ಅಜ್ಞಾನದಿಂದ ಮಾತನಾಡಬಾರದು ಎಂದು ಕಿಡಿಕಾರಿದರು.