ಕನ್ನಡಪ್ರಭ ವಾರ್ತೆ ಐಗಳಿ 50 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ದೇಶವನ್ನು ಜಾತ್ಯಾತೀತ ಮನೋಭಾವದಿಂದ ಕಟ್ಟಿದೆ. ಹೀಗಾಗಿ ದೀನದಲಿತರು, ನಿರ್ಗತಿಗರಿಗೆ ಆಸರೆಯಾಗಿ ನೆಮ್ಮದಿ ಬದುಕು ಸಾಗಿಸಲು ಕಾಂಗ್ರೆಸ್ ಪಕ್ಷವನ್ನು ದೇಶದಲ್ಲಿ ಅಧಿಕಾರಕ್ಕೆ ತರಲು ಸಹೋದರಿ ಪ್ರಿಯಾಂಕಾ ಜಾರಕಿಹೊಳಿಯವರನ್ನು ಸಂಸದೆಯನ್ನಾಗಿ ಆಯ್ಕೆ ಮಾಡಬೇಕು ಎಂದು ಯುವ ಮುಖಂಡ ರಾಹುಲ ಜಾರಕಿಹೊಳಿ ಮನವಿ ಮಾಡಿದರು.
ಕೆಪಿಸಿಸಿ ಸದಸ್ಯ ಶಾಮರಾವ್ ಪೂಜಾರಿ ಮಾತನಾಡಿ, ಈ ಚುನಾವಣೆ ಸುಳ್ಳು ಮತ್ತು ಸತ್ಯದ ಮಧ್ಯ ನಡೆಯುತ್ತಿದೆ. 303 ಬಿಜೆಪಿ ಸಂಸದರು ದತ್ತು ಪಡೆದ ನಗರಗಳು ಎಲ್ಲಿಯೂ ಅಭಿವೃದ್ಧಿಯಾಗಿಲ್ಲ. ಬರೀ ಅದನ್ನು ಮಾಡಿದಿವಿ, ಇದನ್ನು ಮಾಡಿದಿವಿ ಎಂದು ಬಾಯಿ ಮಾತೆ ಆಗಿವೆ, ಹೊರತು ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಪಾರ್ಲಿಮೆಂಟ್ ಇರುವ ದೆಹಲಿಯಲ್ಲಿಯೇ ಬಿಜೆಪಿ ಬೇಡವಾಗಿದೆ. ಕಾಂಗ್ರೆಸ್ ಈಡೇರಿಸಿದ 5 ಗ್ಯಾರಂಟಿಗಳಂತೆ ದೇಶದಲ್ಲಿ ಕೂಡ ಗ್ಯಾರಂಟಿಗಳು ಜಾರಿ ಬರಲು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ವಿನಂತಿಸಿದರು.
ಮುಖಂಡ ಚಿದಾನಂದ ಸವದಿ ಮಾತನಾಡಿ, ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆಯವರು ಬರಿ ನಿಪ್ಪಾಣಿ ಮತ್ತು ಚಿಕ್ಕೋಡಿ ಕ್ಷೇತ್ರಕ್ಕೆ ಮಾತ್ರ ಸಿಮಿತವಾಗಿದ್ದಾರೆ. ಉಳಿದ ವಿಧಾನಸಭಾ ಕ್ಷೇತ್ರದ ಹಳ್ಳಿಗಳು ಬೇಡವಾಗಿವೆ. ಅಂತವರನ್ನು ಈ ಬಾರಿ ಸೋಲಿಸಿ ಪ್ರಿಯಾಂಕಾ ಜಾರಕಿಹೊಳಿಯನ್ನು ಆಯ್ಕೆಗೊಳಿಸಬೇಕು ಎಂದು ಮನವಿ ಮಾಡಿದರು.ಉದ್ಯಮಿ ಸದಾಶಿವ ಬುಟಾಳಿ, ವಿನಾಯಕ ದೇಸಾಯಿ ಮಾತನಾಡಿದರು. ಡಾ.ಸವಿತಾ ಪೂಜಾರಿ, ಮುಖಂಡರಾದ ತೆಲಸಂಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಮೋಘಸಿದ್ಧ ಖೋಬ್ರಿ, ರಾವಸಾಬ್ ಐಹೊಳಿ, ರಮೇಶ ಸಿಂದಗಿ, ಅರ್ಜುನ ಪೂಜಾರಿ, ಶಿವರುದ್ದಪ್ಪ ಗೂಳಪ್ಪನವರ, ಈಸಾಕ್ ನದಾಫ್, ಅನಿಲ ಸುಣಡೊಳಿ, ಅಣ್ಣಪ್ಪ ಖೋತ, ರಮೇಶ ಅಂಬಾಜಿ, ಅಶೋಕ ಮಗದುಮ್, ಅಪ್ಪುಗೌಡ ನೇಮಗೌಡ ಸೇರಿದಂತೆ ಹಲವರು ಇದ್ದರು.ಬಾಕ್ಸ್...
ಪ್ರಿಯಾಂಕಾ ಜಾರಕಿಹೊಳಿಯವರು ಕೊರೋನಾ ಸಂದರ್ಭದಲ್ಲಿ ಅಥಣಿ ಕ್ಷೇತ್ರಕ್ಕೆ ಸ್ಯಾನಿಟೈಸರ್, ಮಾಸ್ಕ್, ಆಕ್ಸಿಜನ್ ಪೂರೈಸುವ ಕೆಲಸವನ್ನು ಮಾಡಿದ್ದಾರೆ. ಪ್ರವಾಹ ಬಂದಾಗ ಪ್ರವಾಹ ಪಿಡಿತ ಜನರಿಗೆ ಸಹಾಯ ಮಾಡಿದ ಪ್ರಿಯಾಂಕಾ ಅವರನ್ನು ಈ ಬಾರಿ ಆಯ್ಕೆಗೊಳಿಸೋಣ. ಇದಕ್ಕೆ ತಾವೆಲ್ಲರೂ ಕೈ ಜೋಡಿಸಬೇಕು.-ಗಜಾನನ ಮಂಗಸೂಳಿ, ಕಾಂಗ್ರೆಸ್ ಮುಖಂಡರು.