ಕನ್ನಡಪ್ರಭ ವಾರ್ತೆ ಇಂಡಿ
ತಾಲೂಕಿನ ಅಂಜುಟಗಿ ಗ್ರಾಮದಲ್ಲಿ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಂಸದ ರಮೇಶ ಜಿಗಜಿಣಗಿ ಅವರು ಆಲಮಟ್ಟಿ ಅಣೆಕಟ್ಟು ಎತ್ತರ 524 ಮೀ ಮಾಡಲಿಲ್ಲ. ಜಿಲ್ಲೆ, ತಾಲೂಕಿಗೆ ಕೃಷಿಗಾಗಿ ಇಲ್ಲಿಯ ಸಂಸದರು ನಿಯೋಗ ತೆಗೆದುಕೊಂಡು ಮೋದಿ ಭೇಟಿಯಾಗಲಿಲ್ಲ. ಒಮ್ಮೆಯೂ ಇಲ್ಲಿಯ ನೀರಾವರಿ ಕುರಿತು ಲೋಕಸಭೆಯಲ್ಲಿ ಧ್ವನಿ ಎತ್ತಲಿಲ್ಲ. ಹೀಗಿದ್ದಾಗ ಬಿಜೆಪಿ ಮುಖಂಡರು ಯಾವ ಮುಖವನ್ನಿಟ್ಟುಕೊಂಡು ಮತ ಕೇಳಲು ಬರುತ್ತಾರೆ? ಆದರೆ ನಾವು ಖಾಲಿ ಕೈಯಲ್ಲಿ ಬಂದಿಲ್ಲ. ಕಳೆದ ವಿಧಾನಸಭೆಯ ಚುನಾವಣೆ ವೇಳೆ ಐದು ಗ್ಯಾರಂಟಿ ಭರವಸೆ ಈಡೇರಿಸಿದ್ದೇವೆ. ಕಾಂಗ್ರೆಸ್ ಪಕ್ಷ ಕೊಟ್ಟಿರುವ ಯೋಜನೆಗಳನ್ನು ಮುಂದಿಟ್ಟುಕೊಂಡು ನಿಮ್ಮ ಬಳಿ ಬಂದಿದೆ. ವಿಜಯಪುರ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರಿಗೆ ಮತ ನೀಡಿ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜು ಅಲಗೂರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ನಿರಂತರವಾಗಿ ಕರ್ನಾಟಕ ರಾಜ್ಯದ ವಿರುದ್ಧ ದ್ವೇಷ ಸಾಧಿಸುತ್ತ ಬಂದಿದ್ದಾರೆ. ಈ ಬಾರಿ ರಾಜ್ಯದಲ್ಲಿ ತೀವ್ರ ಬರಗಾಲವಿದ್ದು, ರಾಜ್ಯ ಸರಕಾರ ಎನ್‌ಡಿಆರ್‌ಎಫ್ ಅಡಿ ₹18 ಸಾವಿರ ಕೋಟಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿತ್ತು . ಆದರೆ ಕೇಂದ್ರದ ಮೋದಿ ಸರಕಾರ ಪರಿಹಾರ ನೀಡದೇ ರಾಜ್ಯದ ರೈತರಿಗೆ ವಂಚನೆ ಮಾಡಿದೆ. ರಾಜ್ಯ ಸರ್ಕಾರ ಮೋದಿ ಅವರ ಬಳಿ ಭಿಕ್ಷೆ ಬೇಡುತ್ತಿಲ್ಲ. ರಾಜ್ಯದಿಂದ ಕೇಂದ್ರಕ್ಕೆ ಕೊಟ್ಟಿರುವ ತೆರಿಗೆ ಹಣವನ್ನು ಹಕ್ಕಿನಿಂದ ಕೇಳುತ್ತಿದ್ದಾರೆ ಎಂದ ಅವರು, ತಾನು ಆಯ್ಕೆಯಾದರೆ ಇಲ್ಲಿಯ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಲೋಕಸಭೆಯಲ್ಲಿ ಧ್ವನಿ ಎತ್ತುವೆ ಎಂದರು.ಜಿಲ್ಲಾ ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಇಲಿಯಾಸ ಬೋರಾಮಣಿ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಎಂ.ಆರ್.ಪಾಟೀಲ, ಜೆಟ್ಟೆಪ್ಪ ರವಳಿ, ಭೀಮಣ್ಣ ಕವಲಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೋಮಿನ ಮಾತನಾಡಿದರು. ವೇದಿಕೆ ಮೇಲೆ ಗುರಣಗೌಡ ಪಾಟೀಲ, ಶ್ರೀಮಂತ ಇಂಡಿ, ಕಲ್ಲನಗೌಡ ಬಿರಾದಾರ, ಸದಾಶಿವ ಪ್ಯಾಟಿ, ಅಶೋಕ ಬಿರಾದಾರ, ಭೀರಪ್ಪ ನಾವದಗಿ, ಸಂಜೀವ ಚವ್ಹಾಣ, ಕೆಂಪೇಗೌಡ ಪರಗೊಂಡ, ಮಡೆಪ್ಪಗೌಡ ಬಿರಾದಾರ, ನೀಲಕಂಠ ರೂಗಿ, ಕೃಷ್ಣ ಅಚ್ಛಗರ, ಹುಚ್ಚಪ್ಪ ತಳವಾರ ಮೊದಲಾದವರು ಇದ್ದರು.