ಮಳಿಗೆಗಳ ಮುಚ್ಚಿ ಕೊಪ್ಪ ಬಂದ್‌ಗೆ ಬೆಂಬಲ

KannadaprabhaNewsNetwork |  
Published : Sep 12, 2025, 01:00 AM IST
ಯಶಸ್ವಿ ಕೊಪ್ಪ ಬಂದ್, ಸ್ವಯಂಪ್ರೇರಿತರಾಗಿ ಬೆಂಬಲ ಸೂಚಿಸಿದ ಗ್ರಾಹಕರು | Kannada Prabha

ಸಾರಾಂಶ

ಶಮಿತ ಸಾವಿನ ಅನುಮಾನಗಳ ಕುರಿತು ಗುರುವಾರ ನಡೆದ ಕೊಪ್ಪ ಬಂದ್ ಸಂಪೂರ್ಣ ಯಶಸ್ವಿಯಾಯಿತು. ಈ ಹಿಂದೆ 4 ಬಾರಿ ನಡೆದ ಪ್ರತಿಭಟನೆಯು ಯಶಸ್ವಿಯಾಗಿತ್ತು. ೫ನೇ ಬಾರಿಯ ಪ್ರತಿಭಟನೆಯೂ ಯಶಸ್ವಿಯಾಗಿದೆ.

ಕನ್ನಡಪ್ರಭ ವಾರ್ತೆ ಕೊಪ್ಪ

ಶಮಿತ ಸಾವಿನ ಅನುಮಾನಗಳ ಕುರಿತು ಗುರುವಾರ ನಡೆದ ಕೊಪ್ಪ ಬಂದ್ ಸಂಪೂರ್ಣ ಯಶಸ್ವಿಯಾಯಿತು. ಈ ಹಿಂದೆ 4 ಬಾರಿ ನಡೆದ ಪ್ರತಿಭಟನೆಯು ಯಶಸ್ವಿಯಾಗಿತ್ತು. ೫ನೇ ಬಾರಿಯ ಪ್ರತಿಭಟನೆಯೂ ಯಶಸ್ವಿಯಾಗಿದೆ.

ಎಲ್ಲಾ ಗ್ರಾಹಕರು ಅಂಗಡಿ ಮುಗ್ಗಟ್ಟುಗಳನ್ನು ಸ್ವಯಂಪ್ರೇರಿತರಾಗಿ ಮುಚ್ಚಿದ್ದರು. ನಾಗರಿಕ ಹಿತರಕ್ಷಣಾ ವೇದಿಕೆ ಕೊಪ್ಪ, ಶಮಿತ ಪೋಷಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬಿಜೆಪಿ ಮುಖಂಡ ಡಿ.ಎನ್. ಜೀವರಾಜ್ ಮಾತನಾಡಿ, ಪೊಲೀಸರು ತಹಸೀಲ್ದಾರರಿಗೆ ನೀಡಿದ ಬಿ.ರಿಪೋರ್ಟಲ್ಲಿ ಹಲವಾರು ಅನುಮಾನಗಳು ಎದ್ದು ಕಾಣುತ್ತಿವೆ. ತನಿಖೆಯ ವೇಳೆ ಡೆತ್‌ನೋಟ್ ಯಾವುದೂ ಇಲ್ಲ ಎನ್ನುತ್ತಿದ್ದ ಅಧಿಕಾರಿಗಳು ಇದೀಗ ಅನಾಮಿಕ ಪತ್ರವೊಂದನ್ನು ಡೆತ್‌ನೋಟ್ ರೀತಿಯಲ್ಲಿ ಇಟ್ಟಿದ್ದಾರೆ. ಇದರಲ್ಲಿ ಹಲವಾರು ಅನುಮಾನಗಳಿದ್ದು ಸೂಕ್ತ ತನಿಖೆಗೆ ಒಳಪಡಿಸಬೇಕು ಎಂದು ಜೀವರಾಜ್ ಪ್ರತಿಭಟನಾಕಾರರನ್ನು ಆಗ್ರಹಿಸಿದರು.

ಆತ್ಮಹತ್ಯೆ ಮಾಡಿಕೊಂಡ ಶಮಿತ ತಂದೆ ಸಂದೇಶ್ ಶೆಟ್ಟಿ ಮಾತನಾಡಿ ಇದುವರೆಗೂ ಸಾವಿಗೆ ನ್ಯಾಯ ಕೊಡಿಸಬೇಕೆಂದು ೫ ಬಾರಿ ಪ್ರತಿಭಟನೆ ನಡೆಸಿದ್ದೇವೆ. ಶಾಸಕರು ನ್ಯಾಯವನ್ನು ಕೊಡಿಸುವಲ್ಲಿ ವಿಫಲರಾಗಿದ್ದಾರೆ. ನನ್ನ ಉಸಿರು ಇರುವವರೆಗೂ ನನ್ನ ಹೋರಾಟವನ್ನು ನಿಲ್ಲಿಸುವುದಿಲ್ಲ. ಯಾರೋ ಅನಾಮಿಕ ಬರೆದ ಲೆಟರ್ ಅನ್ನು (ಪೊಲೀಸರು) ಹೇಗೆ ನೀವು ಬಿ ರಿಪೋರ್ಟಲ್ಲಿ ಸೇರಿಸಿದ್ದೀರಾ? ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕಾಗಿತ್ತು. ತನಿಖೆ ಸರಿಯಾಗಿ ನಡೆದಿಲ್ಲ ಎಂದರು.

ಬಜರಂಗದಳದ ತಾಲೂಕು ಮಾಜಿ ಸಂಚಾಲಕ ರಾಕೇಶ್ ಹಿರೇಕೊಡಿಗೆ ಮಾತನಾಡಿ, ಈ ವಿಚಾರವಾಗಿ ಅನೇಕ ಪ್ರತಿಭಟನೆಯಾಗಿದೆ. ಶಮಿತ ತಂದೆ ಸಂದೇಶ್ ಶೆಟ್ಟಿಯವರು ಈ ಪ್ರಕರಣ ಮುಚ್ಚಿಹೋಗಬಾರದೆಂದು ಅನೇಕ ರಾಜಕಾರಣಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ ಎಂದರು.

ನಾಗರೀಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಹೆಚ್.ಎಂ.ರವಿಕಾAತ್, ಜೆಡಿಎಸ್‌ನ ಪೂರ್ಣೇಶ್ ಕೂಸುಗೊಳ್ಳಿ, ಎಚ್.ಆರ್. ಜಗದೀಶ್ ಮುಂತಾದವರು ಮಾತನಾಡಿದರು.

ಜೆಡಿಎಸ್ ಕ್ಷೇತ್ರಾಧ್ಯಕ್ಷ ಬಿ.ಎಚ್.ದಿವಾಕರ್ ಭಟ್, ದಿನೇಶ್ ಹೊಸೂರು ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಇದ್ದರು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ತುಮ್ಕಾನೆಯವರು ತಾವು ಗೈರು ಹಾಜರಾಗಿರುವ ಕಾರಣ ಬಂದ್ ಯಶಸ್ವಿಯಾಗಲಿ ಎಂದು ಬಂದ್‌ಗೆ ಬೆಂಬಲ ಸೂಚಿಸಿದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ