ಕಬ್ಬು ಬೆಳೆಗಾರರ ಹೋರಾಟಕ್ಕೆ ಬೆಂಬಲ

KannadaprabhaNewsNetwork |  
Published : Oct 25, 2026, 02:15 AM IST
ಗುತ್ತಲ ಪಟ್ಟಣದ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಕಬ್ಬು ಬೆಳೆಗಾರರ ಪೂರ್ವಭಾವಿ ಸಭೆ ನಡೆಯಿತು. | Kannada Prabha

ಸಾರಾಂಶ

ಕಬ್ಬಿಗೆ ಏಕರೂಪದ ದರ ನೀತಿ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅ. 26ರಂದು ಗುರ್ಲಾಪುರದಲ್ಲಿ ನಡೆಯಲಿರುವ ಕಬ್ಬು ಬೆಳೆಗಾರರ ಬೃಹತ್ ಹೋರಾಟಕ್ಕೆ ಹಾವೇರಿ ಹಾಗೂ ಗುತ್ತಲ ಹೋಬಳಿಯ ರೈತರು ಬೆಂಬಲ ಸೂಚಿಸಿದ್ದಾರೆ.

ಗುತ್ತಲ: ಕಬ್ಬಿಗೆ ಏಕರೂಪದ ದರ ನೀತಿ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅ. 26ರಂದು ಗುರ್ಲಾಪುರದಲ್ಲಿ ನಡೆಯಲಿರುವ ಕಬ್ಬು ಬೆಳೆಗಾರರ ಬೃಹತ್ ಹೋರಾಟಕ್ಕೆ ಹಾವೇರಿ ಹಾಗೂ ಗುತ್ತಲ ಹೋಬಳಿಯ ರೈತರು ಬೆಂಬಲ ಸೂಚಿಸಿದ್ದಾರೆ.

ಪಟ್ಟಣದ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಕಬ್ಬು ಬೆಳೆಗಾರರ ಪೂರ್ವಭಾವಿ ಸಭೆಯಲ್ಲಿ ಹೋರಾಟಕ್ಕೆ ತೆರೆಳಲು ಕಬ್ಬು ಬೆಳೆಗಾರರು ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.

ಉತ್ತರ ಕರ್ನಾಟಕದ ಸಕ್ಕರೆ ಕಾರ್ಖಾನೆಗಳು ಕಬ್ಬಿಗೆ ನೀಡುವ ದರವನ್ನೇ ಹಾವೇರಿ ಜಿಲ್ಲೆಯ ರೈತರಿಗೂ ನೀಡಬೇಕು. ಪ್ರತಿ ಟನ್ ಕಬ್ಬಿಗೆ ₹5,500 ಬೆಂಬಲ ಬೆಲೆ ಸಿಗುವವರೆಗೂ ಹೋರಾಟ ನಿಲ್ಲುವದಿಲ್ಲ ಹಾಗೂ ರಾಜ್ಯ ಸರಕಾರ ಪ್ರತಿ ಟನ್ ಕಬ್ಬಿಗೆ ಎಸ್ಎಪಿ(ಸಹಾಯ ಧನ) 1000 ಘೋಷಿಸಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ.

ಪೂರ್ವ ಸಭೆಯಲ್ಲಿ: ಕಬ್ಬು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಅಶೋಕರೆಡ್ಡಿ ಮರಚರೇಡ್ಡಿ, ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಜಗದೀಶ ತೋಟಗೇರ, ರೈತ ಮುಖಂಡರಾದ ಮಾಲತೇಶ ಶೀತಾಳ, ಸಂಕಪ್ಪ ಅರಸನಾಳ, ವೀರುಪಾಕ್ಷಪ್ಪ ಯಲಿಗಾರ, ಅಶೋಕ ಬ್ಯಾಡಗಿ, ಮಾಲತೇಶ ತೋಟಗೇರ, ವಿಕಾಸ ಹಿರೇಮಠ, ಹೂವಪ್ಪ ಬ್ಯಾಡಗಿ, ಮಂಜಪ್ಪ ಬಾರ್ಕಿ, ಲಕ್ಷ್ಮಣ ತಳವಾರ, ಸತೀಶ ಯಲಿಗಾರ, ನಾಗರೆಡ್ಡಿ ಸಣ್ಣಿಂಗಮ್ಮನವರ, ಹೊನ್ನಪ್ಪ ತಳವಾರ, ಹನುಮಂತಪ್ಪ ಹರಿಜನ, ಚೇತನರೆಡ್ಡಿ ಮರಚರೆಡ್ಡಿ, ವೆಂಕಟೇಶ ಶೇಷರೆಡ್ಡಿ, ಹರೀಶ ಕೆಂಚರೆಡ್ಡಿ ಹಾಗೂ ಹಾವನೂರು, ಹಳರಳಹಳ್ಳಿ, ಕಂಚಾರಗಟ್ಟಿ, ಬೆಳವಿಗಿ, ಮೆವುಂಡಿ, ನೀರಲಗಿ, ಗುಯಿಲಗುಂದಿ ಹಾಗೂ ಗುತ್ತಲ ಪಟ್ಟಣ ಸೇರಿದಂತೆ ಹೋಬಳಿಯ ರೈತರು ಭಾಗಿಯಾಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹತ್ತಾರು ಕ್ಷೇತ್ರಗಳಲ್ಲಿ ಕೊಂಕಣಿಗರ ಛಾಪು: ಫಾ. ಥಾಮಸ್ ಫರ್ನಾಂಡೀಸ್
ಬೇಡ್ತಿ- ಅಘನಾಶಿನಿ ತಿರುವು ಯೋಜನೆ ವಿರೋಧಿಸಿ ನವೆಂಬರ್ 3ರಂದು ಹೆದ್ದಾರಿ ತಡೆ