ರಾಜ್ಯದಲ್ಲಿ ಕೇವಲ ಏಳೆಂಟು ತಿಂಗಳಿನಲ್ಲೇ ಜನರಿಂದ ತಿರಸ್ಕಾರ ಮನೋಭಾವಕ್ಕೆ ಈಡಾಗಿರುವ ಕಾಂಗ್ರೆಸ್ ಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ. ರಾಜ್ಯದಲ್ಲಿ 28 ಸ್ಥಾನಗಳೂ ಸಹ ಎನ್ ಡಿಎ ಪಾಲಾಗಲಿವೆ ಎಂದು ಗೋಪಾಲಯ್ಯ ಭವಿಷ್ಯ ನುಡಿದರು.
ತುರುವೇಕೆರೆ : ದೇಶದ ಹಿತದೃಷ್ಟಿಯಿಂದ ಜೆಡಿಎಸ್- ಬಿಜೆಪಿ ಅಭ್ಯರ್ಥಿಯಾಗಿರುವ ವಿ.ಸೋಮಣ್ಣನವರನ್ನು ಗೆಲ್ಲಿಸಬೇಕೆಂದು ತುರುವೇಕೆರೆ ವಿಧಾನಸಭಾ ಕ್ಷೇತ್ರದ ಉಸ್ತುವಾರಿ, ಮಾಜಿ ಸಚಿವ ಗೋಪಾಲಯ್ಯ ಮತದಾರರಲ್ಲಿ ಮನವಿ ಮಾಡಿಕೊಂಡರು.
ತುರುವೇಕೆರೆ ಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿಯ ಪರವಾಗಿ ಮತಯಾಚನೆ ಮಾಡಿದ ಅವರು, ದೇಶಕ್ಕೆ ನರೇಂದ್ರ ಮೋದಿಯವರೇ ಅನಿವಾರ್ಯವಾಗಿದ್ದಾರೆ. ನರೇಂದ್ರ ಮೋದಿಯವರ ಆಡಳಿತ ನೋಡಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಎನ್ ಡಿಎಗೆ ಬೆಂಬಲ ನೀಡಿರುವುದು ಆನೆಬಲ ಬಂದಂತಾಗಿದೆ.
ರಾಜ್ಯದಲ್ಲಿ ಕೇವಲ ಏಳೆಂಟು ತಿಂಗಳಿನಲ್ಲೇ ಜನರಿಂದ ತಿರಸ್ಕಾರ ಮನೋಭಾವಕ್ಕೆ ಈಡಾಗಿರುವ ಕಾಂಗ್ರೆಸ್ ಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ. ರಾಜ್ಯದಲ್ಲಿ ೨೮ ಸ್ಥಾನಗಳೂ ಸಹ ಎನ್ ಡಿಎ ಪಾಲಾಗಲಿವೆ ಎಂದು ಗೋಪಾಲಯ್ಯ ಭವಿಷ್ಯ ನುಡಿದರು.
ಕಾಂಗ್ರೆಸ್ ಆಡಳಿತದಲ್ಲಿ ಕಾನೂನು ಸಂಪೂರ್ಣವಾಗಿ ಹದಗೆಟ್ಟಿದೆ, ಹಿಂದೂಗಳ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಸಿದ್ದರಾಮಯ್ಯ ಮತ್ತವರ ತಂಡ ಮುಸ್ಲಿಮರ ಓಲೈಕೆಗೆ ನಿಂತಿದ್ದರಿಂದ ಹಿಂದೂಗಳನ್ನು ಕೆಲಸಕ್ಕೆ ಬಾರದವರಂತೆ ನೋಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ನವರ ಓಲೈಕೆ ರಾಜಕಾರಣ ಹೀಗೆ ಮುಂದುವರೆದರೆ ಹಿಂದೂಗಳಿಗೆ ಅಸ್ಥಿತ್ವವೇ ಇಲ್ಲದಂತಾಗುತ್ತದೆ. ಹಾಗಾಗಿ ಈ ಬಾರಿ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲು ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು, ಮಸಾಲಾ ಜಯರಾಮ್, ಎಂ.ಡಿ.ಲಕ್ಷ್ಮೀನಾರಾಯಣ್, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ರಮೇಶ್ ಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ದೊಡ್ಡೇಗೌಡ, ಬಿಜೆಪಿ ಮಂಡಲ ಅಧ್ಯಕ್ಷ ಕಲ್ಕೆರೆ ಮೃತ್ಯುಂಜಯ, ಮಂಡಲ ಉಸ್ತುವಾರಿ ದುಂಡ ರೇಣುಕಯ್ಯ ,
ಜೆಡಿಎಸ್ ಮುಖಂಡ ಎಚ್.ಆರ್.ರಾಮೇಗೌಡ, ಪಟ್ಟಣ ಪಂಚಾಯ್ತಿ ಸದಸ್ಯ ಎನ್.ಆರ್.ಸುರೇಶ್, ಮಧು, ಬಿಜೆಪಿ ಮುಖಂಡ, ಪಟ್ಟಣ ಪಂಚಾಯ್ತಿ ಸದಸ್ಯ ಪ್ರಭಾಕರ್, ಶೀಲಾ ನಾಯಕ್, ಆಶಾ ರಾಜಶೇಖರ್, ರವಿಕುಮಾರ್, ಚಿದಾನಂದ್, ಅಂಜನ್ ಕುಮಾರ್, ನವೀನ್ ಬಾಬು, ಗೋಪಿನಾಥ್ ಸೇರಿ ಹಲವರಿದ್ದರು.