ಕನ್ನಡಪ್ರಭ ವಾರ್ತೆ ಬಾಗಲಕೋಟೆ:
ಬಿಜೆಪಿ ಬಾಗಲಕೋಟೆ ವತಿಯಿಂದ ನಗರದ ಬಿ.ವಿ.ವಿ. ಸಂಘದ ಮಿನಿ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕುರುಬ ಸಮಾಜದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಮತ್ತು ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತೀಯ ಜನತಾ ಪಕ್ಷವು ಕುರುಬ ಸಮುದಾಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದೆ. ದೇಶದಲ್ಲಿ ಕುರುಬ ಸಮಾಜದ ಐವರು ನಾಯಕರನ್ನು ಬಿಜೆಪಿಯಿಂದ ರಾಜ್ಯಸಭೆಗೆ ಕಳುಹಿಸಲಾಗಿದೆ. ಆದರೆ, ಕಾಂಗ್ರೆಸ್ ಪಕ್ಷ ಈವರೆಗೆ ಕುರುಬ ಸಮಾಜದ ಒಬ್ಬರನ್ನೂ ರಾಜ್ಯಸಭೆಗೆ ಕಳುಹಿಸಿಲ್ಲ ಎಂದು ಹೇಳಿದರು.ರಾಜ್ಯದಲ್ಲಿ 8 ವರ್ಷ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷ ಇಂದು ನಡೆಸಿಕೊಳ್ಳುತ್ತಿರುವ ರೀತಿಯನ್ನು ಸಮಾಜ ಗಮನಿಸಬೇಕು. ಈ ವಿಚಾರದಲ್ಲಿ ಕುರುಬ ಸಮಾಜ ಸೂಕ್ತ ಉತ್ತರ ನೀಡಬೇಕಿದೆ. ಸಮುದಾಯದ ಬಗ್ಗೆ ಆಶಾಭಾವನೆ ಹೊಂದಿರುವ ಬಿಜೆಪಿಯನ್ನು ಬೆಂಬಲಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಸಮಾಜದ ಹಿರಿಯ ಮುಖಂಡರೊಂದಿಗೆ ಪ್ರೊ. ಎಂ. ನಾಗರಾಜ ಅವರು ಸಮಾಲೋಚನೆ ನಡೆಸಿದರು.
ಬಾಗಲಕೋಟೆ ಜಿಲ್ಲಾ ಕುರುಬ ಸಮಾಜದ ಮುಖಂಡರಾದ ಎಚ್.ಡಿ. ಪಾಟೀಲ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರೇಶ ಹುಂಡೋಡಿ, ಡಾ. ದೇವರಾಜ ಪಾಟೀಲ, ಮಹಾಂತೇಶಗೌಡ ಪಾಟೀಲ, ಎಂ.ಎನ್. ಶಾಂತಗಿರಿ, ಡಿ.ಬಿ. ಸಿದ್ದಾಪುರ, ಪ್ರಮೋದ ಕವಡಿಮಟ್ಟಿ, ಯಮನಪ್ಪ ಹೊರಟ್ಟಿ ಸೇರಿದಂತೆ ನೂರಾರು ಸಮಾಜದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.