ಯಲಬುರ್ಗಾ: ಪ್ರತಿ ಮೂರು ವರ್ಷಕ್ಕೊಮ್ಮೆ ಪಟ್ಟಣದಲ್ಲಿ ನಡೆಯುವ ಶ್ರೀಗ್ರಾಮದೇವತೆ ದ್ಯಾಮಾಂಭಿಕಾದೇವಿ ಜಾತ್ರಾಮಹೋತ್ಸವ ಯಾವುದೇ ಜಾತಿ, ಬೇಧವಿಲ್ಲದೆ ಎಲ್ಲ ವರ್ಗದ ಜನರು, ಭಕ್ತಾದಿಗಳು ಸೇರಿದಂತೆ ಐದು ದಿನದ ಜಾತ್ರೆಗೆ ಸಹಕಾರ ನೀಡಬೇಕು ಎಂದು ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಅಂದಾನಗೌಡ ಉಳ್ಳಾಗಡ್ಡಿ ಹೇಳಿದರು.
ಪಟ್ಟಣದಲ್ಲಿರುವ ಶ್ರೀದ್ಯಾಮಾಂಭಿಕಾದೇವಿ ದೇವಸ್ಥಾನದಲ್ಲಿ ಬುಧವಾರ ಭಕ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಏ. ೪ರಿಂದ ಆರಂಭಗೊಂಡು ೯ರವರೆಗೆ ಸೀಮೆಗೆ ಹಾಲೆರೆಯುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ ಎಂದರು.ಕೆಲವಡೆ ದ್ಯಾಮಾಂಬಿಕಾದೇವಿ, ದುರ್ಗಾದೇವಿ ಜಾತ್ರೆಗಳಲ್ಲಿ ಸದರಿ ಜಾತ್ರಾ ಮಹೋತ್ಸವದಲ್ಲಿ ಪ್ರಾಣಿಬಲಿ ನಿಷೇಧವಿದ್ದು, ಬರೀ ಸಿಹಿ ಪದಾರ್ಥ ಹೋಳಿಗೆ ಖಾದ್ಯ ಮಾಡಲಾಗುತ್ತದೆ, ಪ್ರತಿಯೊಬ್ಬರು ಸ್ವಯಂ ಪ್ರೇರಣೆಯಿಂದ ಹಿಟ್ಟಿನ ಗಿರಣಿ, ಕಟಿಂಗ್ ಶಾಪ್ ಬಂದ್ ಮಾಡಿ ಜಾತ್ರೆ ಆಚರಣೆಗೆ ಎಲ್ಲರೂ ಕೈ ಜೋಡಿಸಬೇಕು. ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಘಟ ಸ್ಥಾಪನೆಯಾಗಲಿದೆ, ಸರ್ವ ಧರ್ಮದ ಸದ್ಬಕ್ತರು ಸಂಪೂರ್ಣವಾಗಿ ಭಾಗವಹಿಸಲಿದ್ದಾರೆ. ತಾಯಿ ದ್ಯಾಮಾಂಭಿಕಾದೇವಿ ಭಕ್ತರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾಳೆ, ಈಗಾಗಲೇ ಗ್ರಾಮದೇವತೆ ಸಮುದಾಯ ಭವನಕ್ಕೆ ಜಾಗ ಖರೀದಿಸಲಾಗಿದ್ದು ಮುಂದಿನ ದಿನಗಳಲ್ಲಿ ಕಟ್ಟಡ ಕಾಮಗಾರಿ ಆರಂಭಿಸಲಾಗುವುದು.
ಈ ಆಚರಣೆಯಲ್ಲಿ ಎಲ್ಲ ವರ್ಗದ ಜನರು ಪಾಲ್ಗೋಂಡು ಜಾತ್ರೆ ಯಶಸ್ವಿಗೊಳಿಸಬೇಕು ಎಂದು ಹೇಳಿದರು.ಪಪಂ ಸದಸ್ಯ ರೇವಣೆಪ್ಪ ಹಿರೇಕುರಬರ ಹಾಗೂ ಶಿವಕುಮಾರ ಭೂತೆ ಮಾತನಾಡಿ, ಎಲ್ಲರೂ ಸೇರಿಕೊಂಡು ಅತ್ಯಂತ ವಿಜೃಂಭಣೆಯಿಂದ ಜಾತ್ರಾ ಮಹೋತ್ಸವ ಮಾಡೋಣ. ಇಂತಹ ಆಚರಣೆಯಿಂದ ಒಳ್ಳೆಯ ಮಳೆ,ಬೆಳೆ, ರೈತ ಸಂಕುಲ ನೆಮ್ಮದಿಯಿಂದ ಕೂಡಿರುತ್ತದೆ, ಈ ಜಾತ್ರೆ ಭಕ್ತಿಯ ಸಂಕೇತವಾಗಿದೆ, ಇಂತಹ ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಲಭಿಸುತ್ತದೆ ಹೀಗಾಗಿ ಪಟ್ಟಣದ ಎಲ್ಲ ವಾರ್ಡ್ ಗಳ ಹಿರಿಯರು, ಮಹಿಳೆಯರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರಾ ಮಹೋತ್ಸವ ಆಚರಣೆಗೆ ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಎಸ್.ಕೆ. ದಾನಕೈ, ಮಲ್ಲೇಶಗೌಡ ಮಾಲಿಪಾಟೀಲ, ಮಲ್ಲಿಕಾರ್ಜುನ ಟೆಂಗಿನಕಾಯಿ, ವಸಂತಕುಮಾರ ಕುಲಕರ್ಣಿ, ಹನುಮಂತಪ್ಪ ದಾನಕೈ, ಶರಣಪ್ಪ ಕೊಡಗಲಿ, ವಿರೂಪಾಕ್ಷಯ್ಯ ಗಂಧದ, ಸಿದ್ರಾಮಪ್ಪ ಹಿರೇಕುರಬರ, ಉಮೇಶ ದಂಡಿನ್, ಚಂದ್ರಶೇಖರ ಕಮ್ಮಾರ, ಶರಣಗೌಡ ಓಜನಹಳ್ಳಿ, ಕಲ್ಲಪ್ಪ ದೂಪಾರ್ತಿ, ಚಂದ್ರು ಬಡಿಗೇರ ಸೇರಿದಂತೆ ಮತ್ತಿತರರು ಇದ್ದರು.