ಕೂಡ್ಲಿಗಿ: ವೀರವನತೆ ಒನಕೆ ಓಬವ್ವನ ಹುಟ್ಟೂರು ಗುಡೇಕೋಟೆಯಲ್ಲಿ ಒನಕೆ ಓಬವ್ವನ ಉತ್ಸವವನ್ನು ಸಾಂಸ್ಕೃತಿಕ ರಸದೌತಣದೊಂದಿಗೆ ಜನೋತ್ಸವವಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ತಿಳಿಸಿದರು.
ಮಾಜಿ ತಾಪಂ ಉಪಧ್ಯಾಕ್ಷೆ ವಿಶಾಲಾಕ್ಷಿ ರಾಜಣ್ಣ ಮಾತನಾಡಿ, ಕಳೆದ ವರ್ಷ ಸ್ಥಳೀಯ ಕಲಾವಿದರಿಗೆ ಕಡಿಮೆ ಆದ್ಯತೆ ನೀಡಲಾಗಿತ್ತು. ಊಟಕ್ಕೂ ಪರದಾಡುವಂತಾಯಿತು. ಈ ಬಾರಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಆಗ ಶಾಸಕರು, ಸ್ಥಳೀಯ ಕಲಾವಿದರಿಗೆ ಮೊದಲಾದ್ಯತೆ ಎಂದರು.
ಇದು ಸರ್ಕಾರಿ ಕಾರ್ಯಕ್ರಮ ಆಗಿರುವುದರಿಂದ ಪ್ರೋಟೊ ಕಾಲ್ ಪಾಲಿಸಬೇಕು. ಸ್ಥಳೀಯ ಸಾಧಕರು, ಹಿರಿಯರನ್ನು ಗೌರವಿಸಬೇಕು. ಅದನ್ನು ಬಿಟ್ಟು ಯಾರು ಬೇಕು ಅವರು ವೇದಿಕೆ ಹತ್ತಿ ಕುಳಿತು ಅಭಾಸ ಮಾಡಬಾರದು ಎಂದು ಶಾಸಕರು ಹೇಳಿದರು.ಸ್ಥಳ ಬದಲಾವಣೆ:
ಕಳೆದ ಎರಡು ವರ್ಷಗಳಿಂದ ಉತ್ಸವನ್ನು ಕಾಲೇಜು ಆವರಣದೊಳಗೆ ಆಚರಿಸಲಾಗಿತ್ತು. ಈಗ ಜನಸಂದಣಿ ಹೆಚ್ಚಾಗಿರುವ ಕಾರಣ ಮುಖ್ಯವೇದಿಕೆಯನ್ನು ಚಿತ್ರಮಂದಿರದ ಬಳಿ ಇರುವ ವಿಶಾಲ ಜಮೀನಿನಲ್ಲಿ ಆಯೋಜಿಸಲು ನಿರ್ಧರಿಸಲಾಯಿತು.ಸಭೆಗೂ ಮುನ್ನ ತಹಸೀಲ್ದಾರ್ ವಿ.ಕೆ. ನೇತ್ರಾವತಿ ಮತ್ತು ಡಿವೈಎಸ್ಪಿ ಮಲೇಶ್ ದೊಡ್ಡಮನಿ ಸ್ಥಳಕ್ಕೆ ಭೇಟಿ ಪರಿಶೀಲಿಸಿದರು. ಸಭೆಯಲ್ಲಿ ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ, ನಾಟಕ ಅಕಾಡೆಮೆ ಸದಸ್ಯ ಶಿವನಾಯಕ ದೊರೆ, ಗ್ರಾಪಂ ಅಧ್ಯಕ್ಷ ಎನ್. ಕೃಷ್ಣ, ಮಲ್ಲೇಶ ದೊಡ್ಡಮನಿ, ಸಿಪಿಐ ಪ್ರಹ್ಲಾದ್ ಚನ್ನಗಿರಿ, ಪ್ರಾಚಾರ್ಯ ಗಿರೀಶ್, ಕೆಪಿಎಸ್ ಶಾಲೆಯ ಮುಖ್ಯಶಿಕ್ಷಕಿ ರುಖ್ಮಣಿಬಾಯಿ, ಉಪನ್ಯಾಸಕ ನಾಗರಾಜ್ ಕೊಟ್ರಪ್ಪಗಳ, ಗುಡೇಕೋಟೆ ಬಷಿರ್, ಕೆಇಬಿ ಗೋವಿಂದಪ್ಪ, ತಿಪ್ಪೇಸ್ವಾಮಿ, ಗುಡೇಕೋಟೆ ಕರವೇ ಅಧ್ಯಕ್ಷ ಶಿವಕುಮಾರ, ತಿಪ್ಪೇಸ್ವಾಮಿ, ಜಿಪಂ ಎಇಇ ಮಲ್ಲಿಕಾರ್ಜುನ, ಟಿಎಚ್‌ಒ ಡಾ. ಪ್ರದೀಪ್, ತಾಪಂ ಎಡಿ ಕೆ.ಆರ್. ಪ್ರಕಾಶ, ಪಿಡಿಒ ಬಸಮ್ಮ ಸೇರಿದಂತೆ ಹಲವರು ಇದ್ದರು.