-
---------
ಕನ್ನಡಪ್ರಭ ವಾರ್ತೆ ನಂಜನಗೂಡುಲೋಕಸಭಾ ಚುನಾವಣೆಯಲ್ಲಿ ಜನರು ದೇಶದ ಅಭಿವೃದ್ದಿಗಾಗಿ ಮತ್ತು ದೇಶದ ಭದ್ರತೆಯ ಹಿತದೃಷ್ಠಿಯನ್ನಿಟ್ಟುಕೊಂಡು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ, ಆದ್ದರಿಂದ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ನನ್ನ ಗೆಲುವು ನಿಶ್ಚಿತವಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಬಾಲರಾಜು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಿಟ್ಟಿ ಯೋಜನೆಗಳನ್ನು ಜಾರಿಗೊಳಿಸಿದ್ದರಿಂದಾಗಿ ಮತ್ತು ಜನರಿಗೆ ಆಸೆ ಆಮಿಷವನ್ನು ತೋರಿಸಿ ಜನರನ್ನು ಯಾಮಾರಿಸಿದ್ದರಿಂದಾಗಿ ಬಿಜೆಪಿಗೆ ಹಿನ್ನೆಡೆಯಾಯಿತು. ಈಗ ರಾಜಕೀಯ ಪರಿಸ್ಥಿತಿ ಬೇರೆಯಾಗಿದ್ದು, ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪದೇ ಇರುವ ಕಾರಣ ರಾಜ್ಯ ಸರ್ಕಾರದ ವಿರುದ್ದ ವಿರೋಧಿ ಅಲೆಯಿದೆ. ಅಲ್ಲದೆ ಎಸ್ಸಿ, ಎಸ್ಟಿ ಅನುದಾನವನ್ನು ರಾಜ್ಯ ಸರ್ಕಾರ ಗ್ಯಾರೆಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡು ದಲಿತರಿಗೆ ಉದ್ದಾರಕ್ಕೆ ಮಣ್ಣು ಹಾಕಿ ದ್ರೋಹ ಬಗೆದಿದೆ ಎಂದು ವಾಗ್ದಾಳಿ ನಡೆಸಿದರು.
ಈಗಾಗಲೇ ಎಲ್ಲ ಕ್ಷೇತ್ರಗಳಿಗೆ ತೆರಳಿ ಪಕ್ಷದ ಕಾರ್ಯಕರ್ತರು ಮುಖಂಡರನ್ನು ಭೇಟಿ ಮಾಡಿ ಚುನಾವಣೆಯ ಬಗ್ಗೆ ಚೆರ್ಚೆ ನಡೆಸಿ ಪಕ್ಷದ ಸಂಘಟನೆಗೊಳಿಸಿ ಪಕ್ಷ ಗೆಲುವು ಸಾಧಿಸಲು ಏನೇನು ತಂತ್ರಗಾರಿಕೆ ನಡೆಸಬೇಕು ಎಂಬುದರ ಬಗ್ಗೆ ಮನವರಿಕೆ ಮಾಡವ ಜೊತೆಗೆ ಕಾರ್ಯಕರ್ತರ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗಿದೆ, ಜೊತೆಗೆ ಬಿ.ಎಸ್. ಯಡಿಯೂರಪ್ಪ, ವಿ. ಶ್ರೀನಿವಾಸಪ್ರಸಾದ್, ಆಶೀರ್ವಾದವಿದ್ದು, ಜೆಡಿಎಸ್ ಬೆಂಬಲವೂ ಇರುವುದರಿಂದ ಗೆಲುವು ಸುಲಭವಾಗಲಿದೆ ಎಂದರಲ್ಲದೆ, ನಾನು ಕಳೆದ 20 ವರ್ಷದಿಂದ ರಾಜಕೀಯ ವನವಾಸ ಅನುಭವಿಸಿದ್ದೇನೆ. ಆದರೂ ಕೂಡ ಅಧಿಕಾರಕ್ಕೆ ಆಸೆ ಪಡದೆ ಜನರ ಜೊತೆಗೆ ಒಡನಾಟವನ್ನಿಟ್ಟುಕೊಂಡು ಜನಸೇವೆಯಲ್ಲಿ ತೊಡಗಿಕೊಂಡಿದ್ದೇನೆ ಎಂದರು.
ಜಿಪಂ ಮಾಜಿ ಸದಸ್ಯ ಸಿ. ಚಿಕ್ಕರಂಗನಾಯಕ, ಬಿಜೆಪಿ ತಾಲೂಕು ನಿಕಟಪೂರ್ವ ಅಧ್ಯಕ್ಷ ಪಿ. ಮಹೇಶ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎನ್.ಸಿ. ಬಸವಣ್ಣ, ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಮಧುರಾಜ್, ತಾಪಂ ಮಾಜಿ ಸದಸ್ಯ ಶಿವಣ್ಣ, ಸೋಮಣ್ಣ, ಮುಖಂಡರಾದ ಶಂಕರಪ್ಪ, ಮಹೇಶ್ ಬಾಬು, ಮಹೇಶ್, ಶ್ರೀನಿವಾಸರೆಡ್ಡಿ, ಪುಟ್ಟಸ್ವಾಮಿ, ಶೇಖರ್, ಉಮೇಶ್ ಮೋದಿ, ಮಹದೇವಪ್ರಸಾದ್, ಮುರುಗೇಶ್, ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಮಹದೇವಸ್ವಾಮಿ, ಮಹಿಳಾ ಮೋರ್ಚಾ ಅಧ್ಯಕ್ಷೆ ನಂದಿನಿ ಮಹೇಶ್, ಗಾಯತ್ರಿ ಇದ್ದರು.