ಆಸರೆ ಶಾಲೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಕಲ ರೀತಿಯಲ್ಲಿಯೂ ಸಹಕಾರ

KannadaprabhaNewsNetwork | Published : Sep 27, 2024 1:20 AM

ಸಾರಾಂಶ

ಹನೂರು ಪಟ್ಟಣದ ಆಶ್ರಮ ಶಾಲೆ ವಿದ್ಯಾರ್ಥಿಗಳಿಗೆ ವೋಲ್ವೋ ಕಂಪನಿ ಹಾಗೂ ಯುವಕರ ಸಂಘದ ವತಿಯಿಂದ ಲ್ಯಾಪ್ ಟಾಪ್ ವಿತರಣೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಹನೂರು

ಆಸರೆ ಶಾಲೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಕಲ ರೀತಿಯಲ್ಲಿಯೂ ಸಹಕಾರ ನೀಡುವುದಾಗಿ ವೋಲ್ವೋ ಕಂಪನಿಯ ನಿರ್ದೇಶಕ ಎಎಸ್ಆರ್ ಮತ್ತು ಬಾಹ್ಯ ಉದ್ಯಮ ವ್ಯವಹಾರಗಳ ಅಧಿಕಾರಿ ಜೀ.ವಿ. ರಾವ್ ಅಭಿಮತ ವ್ಯಕ್ತಪಡಿಸಿದರು.ಹನೂರು ಪಟ್ಟಣದ ಆಸರೆ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವೋಲ್ವೋ ಕಂಪನಿಯ ನಿರ್ದೇಶಕರು ಹಾಗೂ ಬೆಂಗಳೂರು ಯುವಕರ ಸಹಕಾರದೊಂದಿಗೆ ಶಾಲೆಯ ವಿದ್ಯಾರ್ಥಿಗಳ ಪ್ರಗತಿಗೆ 10 ಲ್ಯಾಪ್‌ಟಾಪ್‌ಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.

ಸಮುದಾಯದ ಮುಖಂಡರ ಮನವಿ ಮೇರೆಗೆ ಪಟ್ಟಣದ ಆಸರೆ ಶಾಲೆಯಲ್ಲಿ ಪ್ರಸಂಗ ಮಾಡುತ್ತಿರುವ ಕಾಡಂಚಿನ ಗ್ರಾಮಗಳಿಂದ ಬಂದಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣ ನಿರ್ಮಾಣ ಮಾಡಲು ಸಂಸ್ಥೆ ಹಾಗೂ ಯುವಕರ ಸಹಕಾರದೊಂದಿಗೆ ಮಕ್ಕಳಿಗೆ ನೀಡಿರುವ ಸವಲತ್ತನ್ನು ಸದ್ಬಳಕೆ ಮಾಡಿಕೊಂಡು ಪ್ರಗತಿ ಸಾಧಿಸಲು ಅನುಕೂಲದಾಯಕವಾಗಿದೆ ಎಂದು ತಿಳಿಸಿದರು. ನಂತರ ಬೆಡಗಂಪಣ ಸಮುದಾಯದ ಮುಖಂಡ ಮುರುಗ ಮಾತನಾಡಿ, ಈ ಆಸರೆ ಶಾಲೆಯಲ್ಲಿ ಅರಣ್ಯದಂಚಿನ ಮಲೆ ಮಹದೇಶ್ವರ ಬೆಟ್ಟದ ಹಾಗೂ ವಿವಿಧ ಗ್ರಾಮಗಳ ಬಡ ವಿದ್ಯಾರ್ಥಿಗಳು ಈ ಆಶ್ರಯ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಹೀಗಾಗಿ ಇಲ್ಲಿನ ಮಕ್ಕಳ ಶೈಕ್ಷಣಿಕ ಪ್ರಗತಿಗೆ ವೋಲ್ವೋ ಸಂಸ್ಥೆಯ ನಿರ್ದೇಶಕರ ಹಾಗೂ ಬೆಂಗಳೂರು ಯುವಕರ ಸಂಘದ ಸಹಕಾರದೊಂದಿಗೆ ಮಕ್ಕಳಿಗೆ ಲ್ಯಾಪ್ ಟಾಪ್ ವಿತರಣೆ ಮಾಡಿದ್ದಾರೆ. ಮಲೆ ಮಾದೇಶ್ವರ ಬೆಟ್ಟದ ಅರಣ್ಯದಂಚಿನಲ್ಲಿ ಇರುವ ಶಾಲೆಗಳಿಗೆ ಸಹ ಹೆಚ್ಚಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ಮಕ್ಕಳ ಪ್ರಗತಿಗೆ ಅನುಕೂಲ ಕಲ್ಪಿಸಿ ಜೊತೆಗೆ ತುರ್ತು ವಾಹನ ಒಂದನ್ನು ಸಹ ಈ ಭಾಗದಲ್ಲಿ ಕಾಡಂಚಿನ ಜನರಿಗೆ ಅನುಕೂಲ ಕಲ್ಪಿಸಿ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು. ಈ ವೇಳೆಯಲ್ಲಿ ವೋಲ್ವೋ ಕಂಪನಿಯ ನಿರ್ದೇಶಕರು ಹಾಗೂ ಯುವಕರ ಸಂಘದ ಪದಾಧಿಕಾರಿಗಳು ಸಹ ಪೂರಕವಾಗಿ ಮುಂದಿನ ದಿನಗಳಲ್ಲಿ ಅಂತಹ ಹಂತವಾಗಿ ಸೌಲಭ್ಯ ಕಲ್ಪಿಸುವುದಾಗಿ ತಿಳಿಸಿದರು.

ಯುವಕರ ಸಂಘದ ವ್ಯವಸ್ಥಾಪಕ ಮಹೇಶ್ ಸಹ ವ್ಯವಸ್ಥಾಪಕ ಗುರುಪ್ರಸಾದ್ ಮತ್ತು ಬೃಂದಾ, ಬೇಡಗಂಪಣ ಸಮುದಾಯದ ಹಿರಿಯ ಮುಖಂಡ ಕೆ.ವಿ.ಮಹದೇಶ್ ಆಚಾರ್ಯ ಶಾಲೆಯ ವಾರ್ಡನ್ ವಾಣಿಶ್ರೀ ವಿದ್ಯಾರ್ಥಿಗಳು ಮುಖಂಡರು ಉಪಸ್ಥಿತರಿದ್ದರು.

Share this article