ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಸಂವಿಧಾನ ತಿದ್ದುಪಡೆ ಮಾಡುತ್ತಾರೆ ಎಂದು ಆರೋಪ ಮಾಡುವ ಕಾಂಗ್ರೆಸ್ಸಿಗರೇ ಸಂವಿಧಾನ ತಿದ್ದುಪಡಿ ಮಾಡುತ್ತಿದ್ದಾರೆ. ಇದು ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನ. ಸಂವಿಧಾನ ಕೈಯಲ್ಲಿ ಹಿಡಿದು ಹೋರಾಟ ಮಾಡುವ ರಾಹುಲ್ ಗಾಂಧಿಗೆ ಸಂವಿಧಾನ ಪುಸ್ತಕದ ಒಳಗೆ ಏನಿದೆ ಎಂಬುದು ಗೊತ್ತಿಲ್ಲ. ರಾಹುಲ್ ಗಾಂಧಿಗೆ, ರ ಬಿಟ್ಟು ಠ ಗೊತ್ತಿಲ್ಲ ಎಂದು ಟಾಂಗ್ ನೀಡಿದರು.ದ್ವೇಷ ಭಾಷಣ ವಿಧೇಯಕವನ್ನು ಪ್ರಶ್ನಿಸುತ್ತೇವೆ. ರಾಜ್ಯಪಾಲರಿಗೂ ಈ ಕುರಿತು ಮನವಿ ಸಲ್ಲಿಸುತ್ತೇವೆ. ಈಗಾಗಲೇ ಸಂವಿಧಾನದಲ್ಲಿ ಮಾತನಾಡುವ ಹಕ್ಕನ್ನು ನೀಡಲಾಗಿದೆ. 19/ಎ ಕಲಂನಲ್ಲಿ ಅಭಿವ್ಯಕ್ತಿ ಸ್ವಾತಂತ್ಯ ಮಾತನಾಡುವ ಹಕ್ಕು ನೀಡಲಾಗಿದೆ ಎಂದರು.
ಬೆಳಗಾವಿ ಅಧಿವೇಶನದಲ್ಲಿ ದ್ವೇಷ ಭಾಷಣ ವಿದೇಯಕ ಮಂಡನೆ ವಿಚಾರವಾಗಿ ಯತ್ನಾಳಗಿಂತ ಬಿಜೆಪಿಯವರು ಹೆಚ್ಚು ದ್ವೇಷ ಭಾಷಣ ಮಾಡುತ್ತಾರೆಂದು ಸಚಿವ ರಾಮಲಿಂಗ ರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಮಲಿಂಗಾರೆಡ್ಡಿ ಅನುಭವಿ, ಒಳ್ಳೆಯ ರಾಜಕಾರಣಿ. ಪಕ್ಷ ಪಂಗಡ ಬೇರೆ. ಅವರೊಬ್ಬ ಹೃದಯವಂತ ರಾಜಕಾರಣಿ. ಕೆಲವು ವಿಚಾರಗಳಲ್ಲಿ ನಮಗೂ ಅವರಿಗೂ ಘರ್ಷಣೆ ಆಗುತ್ತಿರುತ್ತದೆ. ಪಕ್ಷಾತೀತವಾಗಿ ಕೆಲಸ ಮಾಡುತ್ತಾರೆ, ಸಚಿವರಾಗಿ ಹೇಗಿರಬೇಕು ಹಾಗಿರುತ್ತಾರೆ ಎಂದು ಯತ್ನಾಳ ಹೇಳಿದರು.ಹಾಗಾದರೇ ನನ್ನ ಭಾಷಣ ಅಷ್ಟು ದ್ವೇಷ ಇಲ್ಲ ಎಂಬಂತಾಯಿತು. ನನ್ನ ಭಾಷಣ ದ್ವೇಷ ಇಲ್ಲವೆಂದು ಹೇಳಿದ್ದಕ್ಕೆ ಮೊದಲು ರಾಮಲಿಂಗ ರೆಡ್ಡಿ ಅವರಿಗೆ ಅಭಿನಂದಿಸುವೆ. ಕಾಂಗ್ರೆಸ್‌ನಲ್ಲಿ ಈ ಕುರಿತು ಒಬ್ಬರಾದರೂ ತಿಳಿದುಕೊಂಡರಲ್ಲ ಎಂದರು. ದ್ವೇಷ ಭಾಷಣ ಎಲ್ಲಿಂದ ಆರಂಭವಾಗುತ್ತದೆಯೋ ಅಲ್ಲಿಂದ ಕ್ರಮ ಆಗಬೇಕು, ಅವರನ್ನು ಒಳಗೆ ಹಾಕಬೇಕು. ಪಾಕಿಸ್ತಾನ ಪರ ಮಾತನಾಡುವವರಿಗೆ ನಾವು ಬೈಯ್ಯಲೇಬೇಕಲ್ಲ ಆ ಮಕ್ಕಳಿಗೆ ಎಂದು ವಾಗ್ದಾಳಿ ನಡೆಸಿದರು. ನಮ್ಮ ದೇಶದ ಅನ್ನ ತಿಂದು ಪಾಕಿಸ್ತಾನ ಪರ ಮಾತನಾಡಿದ್ದಕ್ಕೆ ಭಾಷಣ ಆರಂಭವಾಗುತ್ತದೆ. ಹಿಂದುಗಳು ಭಯೋತ್ಪಾದಕರಾ?, ಎಲ್ಲ ಮಾಡೋರು ಅವರೇ, ಬೆಂಕಿ ಹೆಚ್ಚುವವರು ಬಾಂಬ್ ಹಾಕುವವರು ಅವರೇ. ಅದಕ್ಕಾಗಿ ನಾವು ಬೈಯಬೇಕಾಗುತ್ತದೆ. ವಿಧಾನಸಭೆಯಲ್ಲಿಯೇ ಪಾಕಿಸ್ತಾನ ಜಿಂದಾಬಾದ್ ಎಂದರು. ಅದಕ್ಕಾಗಿ ತಾಯಿಗಂಡ ನನ್ನ ಮಕ್ಕಳು ಎಂದು ಹೇಳಬೇಕಾಗುತ್ತದೆ, ಅದು ದ್ವೇಷ ಆಗಲ್ಲ ದೇಶಪ್ರೀತಿಯಾಗುತ್ತದೆ ಎಂದರು. ಕೆಲವೊಂದು ಹಲಕಟ್ ಶಬ್ಧಗಳು ಇರಬಹುದು ಅದರಲ್ಲಿಯೇ ದೇಶ ಪ್ರೇಮವಾಗುತ್ತದೆ.