ಸುಪ್ರೀಂ ಆದೇಶ ನನಗೆ ನೆಮ್ಮದಿ ತಂದಿದೆ: ಕೆ.ವೈ.ನಂಜೇಗೌಡ

KannadaprabhaNewsNetwork |  
Published : Feb 06, 2026, 01:15 AM IST
೫ಕೆಎಲ್‌ಆರ್-೮ಕೋಲಾರ ತಾಲೂಕಿನ ಬೆಳಗಾನಹಳ್ಳಿ ಕೋಮುಲ್ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ಮಾಲೂರು ಶಾಸಕ ಹಾಗೂ ಕೋಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ. | Kannada Prabha

ಸಾರಾಂಶ

ಎರಡೂವರೆ ವರ್ಷ ಮಾನಸಿಕವಾಗಿ ನೋವು ತಿಂದಿದ್ದೇನೆ. ಸುಳ್ಳು ಹೇಳಿಕೊಂಡು ಪ್ರತಿದಿನ ಹಳ್ಳಿ ಹಳ್ಳಿಯಲ್ಲಿಸಿಕ್ಕ ಕಡೆಯಲ್ಲಿ ಪ್ರಚಾರ ಮಾಡಿಕೊಂಡು ಓಡಾಡಿಕೊಂಡು ಇದ್ದವರಿಗೆ ತೀವ್ರ ಮುಖಭಂಗ ಉಂಟಾಗಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಕೋಲಾರಸಂವಿಧಾನ ಪ್ರಕಾರ ಚುನಾವಣೆ ನಡೆದು ಮತ ಎಣಿಕೆ ನಡೆದಿದ್ದರೂ ಸುಳ್ಳು ಆರೋಪಗಳನ್ನು ನನ್ನ ಮೇಲೆ ಮಾಜಿ ಶಾಸಕ ಬಿಜೆಪಿ ಅಭ್ಯರ್ಥಿ ಮಂಜುನಾಥ್ ಗೌಡ ಮಾಡಿದ್ದರು. ಅವರ ಆರೋಪಗಳು ಎಲ್ಲಾ ಬರೀ ಸುಳ್ಳು ಎನ್ನುವುದಕ್ಕೆ ಇಂದು ತೆರೆ ಬಿದ್ದಿದೆ. ಮರು ಮತ ಎಣಿಕೆ ಅವ್ಯಶ್ಯಕತೆ ಇರಲಿಲ್ಲ ಎಂದು ಮಾಲೂರು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.ತಾಲೂಕಿನ ಬೆಳಗಾನಹಳ್ಳಿ ಕೋಮುಲ್ ಕಚೇರಿಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ಪರ ತೀರ್ಪು ಸಿಕ್ಕ ಹಿನ್ನೆಲೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡೂವರೆ ವರ್ಷ ಮಾನಸಿಕವಾಗಿ ನೋವು ತಿಂದಿದ್ದೇನೆ. ಸುಳ್ಳು ಹೇಳಿಕೊಂಡು ಪ್ರತಿದಿನ ಹಳ್ಳಿ ಹಳ್ಳಿಯಲ್ಲಿಸಿಕ್ಕ ಕಡೆಯಲ್ಲಿ ಪ್ರಚಾರ ಮಾಡಿಕೊಂಡು ಓಡಾಡಿಕೊಂಡು ಇದ್ದವರಿಗೆ ತೀವ್ರ ಮುಖಭಂಗ ಉಂಟಾಗಿದೆ ಎಂದು ಹೇಳಿದರು.ದೇಶದಲ್ಲೇ ಇವಿಎಂ ಬಂದ ಮೇಲೆ ಮರು ಮತ ಎಣಿಕೆ ಆಗಿದ್ದು ಮೊಟ್ಟ ಮೊದಲು ಮಾಲೂರು ವಿಧಾನಸಭಾ ಕ್ಷೇತ್ರದ್ದು. ನನಗೆ ಶಕ್ತಿ ಬಂದಿದೆ. ಸುಪ್ರೀಂ ಕೋರ್ಟ್ ತೀರ್ಪು ಕ್ಷೇತ್ರ ಅಭಿವೃದ್ದಿ ಮಾಡಲು ಹೊಸ ಭರವಸೆ ಮೂಡಿದೆ. ಇನ್ಮುಂದೆ ನನ್ನ ಮಾಲೂರು ತಾಲೂಕಿನ ಅಭಿವೃದ್ಧಿ ಒಂದೇಯಾಗಿದೆ. ನನ್ನ ತಾಲೂಕಿನ ಜನತೆ ನೀಡಿದ ತೀರ್ಪಿಗೆ ಸಲ್ಲಬೇಕಾಗಿದೆ. ಹಳ್ಳಿ ಹಳ್ಳಿಯಲ್ಲೂ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ನೆಮ್ಮದಿಯಾಗಿ ಜನತೆಯ ಜೊತೆ ಇರುತ್ತೇನೆ. ಜನರ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂದು ತಿಳಿಸಿದರು.ಮತ ಚೋರಿ ಮಾಡಿರುವುದು ಬಿಜೆಪಿಯವರೇ ಹೊರತು ಕಾಂಗ್ರೆಸ್ಸಿನವರು ಅಲ್ಲ. ಈ ಬಗ್ಗೆ ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ನೇತೃತ್ವದಲ್ಲಿ ಹೋರಾಟ ನಡೆಸಲಾಗಿದೆ. ಮಾಲೂರು ಕ್ಷೇತ್ರಕ್ಕೆ ಒಂದು ವಿಶೇಷತೆ ಇದ್ದು, ರಾಜಕೀಯ ಮಾಡುವ ವೇಳೆ ರಾಜಕೀಯ ಮಾಡಿ ಗೆದ್ದವರು ಸೋತವರು ಪಕ್ಕದಲ್ಲಿ ಕೂತು ಸೇರಿ ಮಾಲೂರು ತಾಲೂಕಿನ ಅಭಿವೃದ್ದಿ ಚರ್ಚೆಗಳು ಮಾಡುವುದು ಇತ್ತು. ಆ ಸನ್ನಿವೇಶ ಸಂದರ್ಭ ಬಂದರೆ ಖಂಡಿತವಾಗಿ ಸ್ವಾಗತ ಮಾಡುತ್ತೇನೆ ಎಂದರು.

ಸರ್ಕಾರಿ ಜಮೀನುಗಳನ್ನು ಅಕ್ರಮ ಮಾಡಿಕೊಳ್ಳಲು ಹೋದರೆ ಎಷ್ಟೇ ಪ್ರಭಾವಿಗಳಿದ್ದರು ಅವರಿಗೆ ಸಹಕಾರ ನೀಡೋದಿಲ್ಲ. ವೈಯುಕ್ತಿಕವಾಗಿ ಅಪಾದನೆ ಮಾಡಿದವರು ಅದರ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ಮಾಲೂರು ತಾಲೂಕಿನ ಚನ್ನಿಗರಾಯಪುರ ಹಾಗೂ ಹಗಲಕೋಟೆ ಜಮೀನು, ಶಿವಾರಪಟ್ಟಣ ಜಮೀನು ವಿವಾದ ವಿಚಾರ ಅಧಿಕಾರಿಗಳನ್ನು ದಾಖಲೆಗಳನ್ನು ನೀಡುವಂತೆ ತಿಳಿಸಲಾಗಿದೆ. ಇಷ್ಟು ವರ್ಷಗಳು ಇಲ್ಲದೆ ಇರುವ ವಿಷಯಗಳನ್ನು ಹೊಸದಾಗಿ ಮಾತನಾಡುತ್ತಿದ್ದಾರೆ. ಒಂದು ವಾರದಲ್ಲಿ ಅಧಿಕಾರಿಗಳು ದಾಖಲೆಗಳನ್ನು ನೀಡಿದ ನಂತರ ನಿಜವಾಗ್ಲೂ ಅಲ್ಲಿ ಅಕ್ರಮವಾಗಿದ್ದರೆ ಸರ್ಕಾರಕ್ಕೆ ಸೇರಲೇಬೇಕು ಎಂದರೆ ಎಷ್ಟೆ ಪ್ರಭಾವಿಗಳಾಗಿದ್ದರೂ ಬಿಡುವ ಮಾತೇ ಇಲ್ಲ ಅದಕ್ಕೆ ಸರ್ಕಾರದಿಂದ ಅನುದಾನ ತಂದು ವಿದ್ಯಾಬ್ಯಾಸಕ್ಕೆ ಮೀಸಲಿಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಹೊಸಕೋಟೆಯಲ್ಲಿ ಯಾರ್‍ಯಾರದ್ದು ಎಷ್ಟೇಷ್ಟಿದೆ ಗೊತ್ತಿದೆ. ಅವರ ಅವ್ಯವಹಾರ ಅವರದ್ದು ಮಾಜಿ ಶಾಸಕರು ಏನೇನು ಮಾಡಿದ್ದಾರೆ ಎನ್ನುವುದನ್ನೇ ನೋಡಿಕೊಂಡೇ ಇರಲು ಸಾಧ್ಯವಿಲ್ಲ. ಮಾಜಿ ಶಾಸಕ ಮಂಜುನಾಥ್ ಗೌಡರಿಗೆ 2028ಕ್ಕೆ ಒಂದೇ ಅಜೆಂಡಾ. ಮುಂದಿನ ಚುನಾವಣೆಯನ್ನು ಹೇಗೆ ಎದುರಿಸಬೇಕು ಎನ್ನುವ ದೃಷ್ಟಿಯಿಂದ ಇಂತಹ ವಿಚಾರಗಳನ್ನು ತರುತ್ತಿದ್ದಾರೆ. ಮೂರನೇ ಬಾರಿಗೆ ಸೋತಿದ್ದಾರೆ, 2028ಕ್ಕೆ ನೋಡಿಕೊಳ್ಳಿ ರಾಮೇಗೌಡರು, ಮಂಜುನಾಥ್ ಗೌಡ, ಹೂಡಿ ವಿಜಯ್ ಕುಮಾರ್ ವಿರುದ್ಧ ಮಾತನಾಡೋದಿಲ್ಲ ಮಾತನಾಡಿದರೆ ಭಯನೂ ಪಡೋದಿಲ್ಲ. ಹಾಗಂತ ಭಯಪಟ್ಟರೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದರು.

ಮಾಲೂರು ಬೆಂಗಳೂರಿಗೆ ಹತ್ತಿರದಲ್ಲಿರುವ ಕಾರಣ ಜಮೀನುಗಳಿಗೆ ಚಿನ್ನದ ಬೆಲೆ ಬಂದಿದೆ. ಹಾಗಾಗಿ ಜಮೀನು ವಿವಾದಗಳು ಹೆಚ್ಚಾಗುತ್ತಿದೆ. ಇವರ ಉದ್ಯೋಗ ಇದೆ ನಾಳೆ ಚುನಾವಣೆಗೆ ಏನು ಮಾಡಬೇಕು ಅನ್ನೋದನ್ನ ಬಿಟ್ಟು ಇಲ್ಲದೆ ಇರೋದರ ಬಗ್ಗೆ ಮಾತನಾಡಿಕೊಂಡು ಎರಡು ಬಾರಿ ಚುನಾವಣೆಯಲ್ಲಿ ಸೋತರು. ಮರು ಮತ ಎಣಿಕೆಯಲ್ಲಿ ಮೂರನೇ ಬಾರಿಗೆ ಸೋತಿದ್ದಾರೆ ಎಂದು ಮಂಜುನಾಥ್ ಗೌಡರಿಗೆ ಕೆ.ವೈ.ನಂಜೇಗೌಡ ಟಾಂಗ್ ನೀಡಿದರು. ಸುದ್ದಿಗೋಷ್ಟಿಯಲ್ಲಿ ಕೋಮುಲ್ ನಿರ್ದೇಶಕರಾದ ಹನುಮೇಶ್, ಕೆ.ಕೆ.ಮಂಜುನಾಥ್, ನಾಮನಿರ್ದೇಶಕ ಶರೀಷ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌
ಬ್ಯಾಲೆಟ್‌ ಪೇಪರಲ್ಲೇ ಪಂಚಾಯ್ತಿ ಚುನಾವಣೆಗೆ ಸರ್ಕಾರ ಮಸೂದೆ