ಮುದ್ದೇಬಿಹಾಳ: ಪಟ್ಟಣದ ಖಾಸಗಿ ಹೊಟೆಲ್‌ನಲ್ಲಿ ಶುಕ್ರವಾರ ನಡೆದ ತಾಲೂಕಾ ಗುತ್ತಿಗೆದಾರರ ಸಂಘದ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಸುರೇಶಗೌಡ ಪಾಟೀಲ(ಇಂಗಳಗೇರಿ), ಉಪಾಧ್ಯಕ್ಷರಾಗಿ ವೈ.ವೈ.ಚಲವಾದಿ ಅವರನ್ನು ಆಯ್ಕೆ ಮಾಡಲಾಯಿತು.
ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಬಹದ್ದೂರ ರಾಠೋಡ ಮಾತನಾಡಿ, ಗುತ್ತಿಗೆದಾರರು ಎಂದರೆ ಸರ್ಕಾರದ ಹಣ ಲೂಟಿ ಹೊಡೆಯುವವರು ಎಂದು ನೋಡುವಂತಾಗಿರುವುದು ನೋವಿನ ಸಂಗತಿ. ಕೆಲಸಕ್ಕೆ ಹಾಕಿದ ಹಣ ಪಡೆಯಬೇಕಾದರೆ ಹರಸಾಹಸ ಪಡಬೇಕಾಗುತ್ತದೆ. ಇನ್ನು ಬಾಕಿ ಬಿಲ್ ಪಾವತಿಯಾಗಿಲ್ಲ. ಈಗಾಗಲೇ ದಯಾಮರಣಕ್ಕೆ ಅವಕಾಶ ಕಲ್ಪಿಸುವಂತೆ ರಾಜ್ಯಪಾಲರಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದರು.ಪ್ರಥಮ ದರ್ಜೆ ಗುತ್ತಿಗೆದಾರ ಕೆ.ಎಸ್.ಪಾಟೀಲ (ಜಮ್ಮಲದಿನ್ನಿ), ಬಸರಕೋಡದ ರಾಜು ಮೇಟಿ ನೇತೃತ್ವದಲ್ಲಿ ಗುತ್ತಿಗೆದಾರರ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಮುತ್ತಿನಶೆಟ್ಟಿ ಗೂಳಿ, ಉಪಾಧ್ಯಕ್ಷರಾಗಿ ಯಲ್ಲಪ್ಪ ಚಲವಾದಿ, ಹಣಮಂತ ಕುರಿ, ಕಾರ್ಯದರ್ಶಿಯಾಗಿ ಪ್ರಭುಗೌಡ ಪಾಟೀಲ, ಖಜಾಂಚಿಯಾಗಿ ರಾಜುಗೌಡ ಕೊಂಗಿ ಆಯ್ಕೆಯಾದರು. ರುದ್ರಗೌಡ ಅಂಗಡಗೇರಿ, ಸಚಿನ ಪಾಟೀಲ, ರಾಜು ಮೇಟಿ, ವಾಲು ರಾಠೋಡ, ಭೀಮನಗೌಡ ಪಾಟೀಲ, ರಾಜು ನಾಯಕ, ಚಂದು ಕರೇಕಲ್ಲ, ರಮೇಶ ತಾತರಡ್ಡಿ, ಗುರುಸ್ವಾಮಿ ಬೂದಿಹಾಳ, ಪರುಶುರಾಮ ಭಯ್ಯಾಪೂರ, ಉಮರ ಮಮದಾಪೂರ ಸೇರಿದಂತೆ ತಾಲ್ಲೂಕಿನ ಗುತ್ತಿಗೆದಾರರು ಇದ್ದರು.