ಕನ್ನಡಪ್ರಭ ವಾರ್ತೆ ಕಾಗವಾಡ
ಪಟ್ಟಣದ ರಾಣಿ ಚನ್ನಮ್ಮ ವೃತ್ತದಲ್ಲಿ ₹5 ಕೋಟಿ ವೆಚ್ಚದ ಕಾಗವಾಡದಿಂದ ಮಹಾರಾಷ್ಟ್ರದ ಗಡಿವರೆಗಿನ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮುಂದಿನ ದಿನಮಾನಗಳಲ್ಲಿ ನಮ್ಮ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳಿಗೆ ಸರ್ಕಾರದಿಂದ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಸುರ್ಜೆವಾಲಾ ಅವರ ಭೇಟಿ ನನಗೆ ತೃಪ್ತಿ ತಂದಿದೆ. ಇನ್ನೇನಿದ್ದರೂ ಅಭಿವೃದ್ಧಿ ಒಂದೇ ಎಂದು ಕಾಗೆ ಸ್ಪಷ್ಟಪಡಿಸಿದರು.ನಾನು ನನ್ನ ಮತಕ್ಷೇತ್ರಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ರಾಜ್ಯ ಸರ್ಕಾರದಿಂದ ಆಗಬೇಕಾದ ಹಣ ಬಿಡುಗಡೆಯಾಗಲು ವಿಳಂಬವಾಗುತ್ತಿದೆ. ಇದರಲ್ಲಿ ಅಧಿಕಾರಿಗಳ ಲೋಪ ದೋಷವೂ ಇದೆ. ಆದ್ದರಿಂದ ನಾನು ನನ್ನ ಮತಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನ್ನನ್ನು ಕರೆಸಿ ನನ್ನೊಡನೆ ಚರ್ಚೆ ಮಾಡಿದ್ದಾರೆ, ಹೊರತು ಸರ್ಕಾರದ ವಿರುದ್ಧವಲ್ಲ ಎಂದು ಹೇಳಿದ್ದೇನೆ ಎಂದರು.
ಈ ವೇಳೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಲ್ಲಿಕಾರ್ಜುನ ಮಗದುಮ್, ನಿವೃತ್ತ ಅಭಿಯಂತರ ಜಯಾನಂದ ಹಿರೇಮಠ, ಗುತ್ತಿಗೆದಾರರಾದ ತಿಪ್ಪಣ್ಣ ಬಜಂತ್ರಿ, ಬಸವರಾಜ ಮಗದುಮ್,ಕೃಷ್ಣಾ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ಸೌರಭ ಪಾಟೀಲ, ಮುಖಂಡರಾದ ರಮೇಶ ಚೌಗುಲಾ, ಜ್ಯೋತಿಕುಮಾರ ಪಾಟೀಲ,ಪವನ ಪಾಟೀಲ,ಸಚೀನ ಚೌಗುಲಾ, ಪ್ರಕಾಶ ಪಾಟೀಲ, ಶಾಂತಿನಾಥ ಕರವ, ಸತ್ಯಗೌಡ ಪಾಟೀಲ,ಕಾಕಾ ಪಾಟೀಲ, ವಿದ್ಯಾಧರ ಧೋಂಡಾರೆ, ಪದ್ಮಕುಮಾರ ಕರವ, ಪವನ ಪಾಟೀಲ, ಸೇರಿದಂತೆ ಅನೇಕರು ಇದ್ದರು.