ಮುನವಳ್ಳಿ: ಪಟ್ಟಣದ ಶಿಂಧೋಗಿ-ಮುನವಳ್ಳಿಯ ಶ್ರೀ ಕುಮಾರೇಶ್ವರ ಆಲೂರಮಠದ ವತಿಯಿಂದ ಮಲಪ್ರಭಾ ನದಿಯಲ್ಲಿ ಮಕರ ಸಂಕ್ರಮಣದ ಅಂಗವಾಗಿ ಬುಧವಾರ ಸಂಜೆ ತೆಪ್ಪೋತ್ಸವವನ್ನು ವಿಜೃಂಭಣೆಯಿಂದ ನಡೆಸಲಾಯಿತು

ಮುನವಳ್ಳಿ: ಪಟ್ಟಣದ ಶಿಂಧೋಗಿ-ಮುನವಳ್ಳಿಯ ಶ್ರೀ ಕುಮಾರೇಶ್ವರ ಆಲೂರಮಠದ ವತಿಯಿಂದ ಮಲಪ್ರಭಾ ನದಿಯಲ್ಲಿ ಮಕರ ಸಂಕ್ರಮಣದ ಅಂಗವಾಗಿ ಬುಧವಾರ ಸಂಜೆ ತೆಪ್ಪೋತ್ಸವವನ್ನು ವಿಜೃಂಭಣೆಯಿಂದ ನಡೆಸಲಾಯಿತು.

ತೆಪ್ಪೋತ್ಸವದ ತೇರಿನಲ್ಲಿ ಹುಬ್ಬಳ್ಳಿ ಮೂರುಸಾವಿರಮಠದ ಡಾ.ಶ್ರೀ ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ಆಸೀನರಾಗಿ ಭಕ್ತರಿಗೆ ದರ್ಶನಾಶೀರ್ವಾದ ನೀಡಿದರು. ಸೋಮಶೇಖರಮಠದ ಮುರುಘೇಂದ್ರ ಸ್ವಾಮೀಜಿ, ಶಿಂಧೋಗಿಯ ಮಡಿವಾಳಯ್ಯಸ್ವಾಮಿ ಹಿರೇಮಠ ಹಾಗೂ ಶಿಂಧೋಗಿ-ಮುನವಳ್ಳಿ ಸಮಸ್ತ ಸದ್ಭಕ್ತರು ಉಪಸ್ಥಿತರಿದ್ದರು. ತೆಪ್ಪೋತ್ಸವಕ್ಕೆ ಉತ್ತತ್ತಿ ಹಾಗೂ ಬಾಳೆಹಣ್ಣುಗಳನ್ನು ಭಕ್ತಿಭಾವದಿಂದ ಅರ್ಪಿಸಿದರು.

ತೆಪ್ಪೋತ್ಸವದ ಮೊದಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಾದ್ಯ ವೈಭವಗಳೊಂದಿಗೆ ಪಲ್ಲಕ್ಕಿ ಉತ್ಸವ ಜರುಗಿತು.