ಸುರಪುರ: ಹಜರತ್ ಟಿಪ್ಪು ಸುಲ್ತಾನ್ ಜಯಂತಿ

KannadaprabhaNewsNetwork |  
Published : Nov 13, 2024, 12:06 AM IST
ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಟಿಪ್ಪು ಸುಲ್ತಾನ ವೃತ್ತದಲಿ ಹಜರತ್ ಟಿಪ್ಪು ಸುಲ್ತಾನ್‌ ಜಯಂತಿ ಆಚರಿಸಲಾಯಿತು. | Kannada Prabha

ಸಾರಾಂಶ

Surpur: Hazrat Tipu Sultan Jayanti

ಕನ್ನಡಪ್ರಭ ವಾರ್ತೆ ಸುರಪುರ

ಟಿಪ್ಪು ಸುಲ್ತಾನ್‌ ದಕ್ಷಿಣ ಭಾರತದ ಮೈಸೂರು ರಾಜ್ಯದ ಮುಸಲ್ಮಾನ ದೊರೆ, ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ‍್ಯಸೇನಾನಿ ಟಿಪ್ಪು ಎಂದು ಟಿಪ್ಪುಸುಲ್ತಾನ್‌ ನ ಸಂಘದ ಅಧ್ಯಕ್ಷ ಶಫೀಕ್ ದಫೇದಾರ್ ಹೇಳಿದರು. ಕೆಂಭಾವಿ ಪಟ್ಟಣದ ಟಿಪ್ಪು ಸುಲ್ತಾನ್‌ ವೃತ್ತದಲ್ಲಿ ಟಿಪ್ಪುಸುಲ್ತಾನ್ ಸಂಯುಕ್ತ ರಂಗ ಆಯೋಜಿಸಿದ್ದ ಹಜರತ್ ಟಿಪ್ಪು ಸುಲ್ತಾನರ 275ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಯುವ ಮುಖಂಡ ನಯುಮ್ ಅಫಗಾನ ಮಾತನಾಡಿ, ದೇಶದ ನೆಲ, ಜಲ, ನಾಡು, ರಕ್ಷಣೆಗೆ ತನ್ನ ಹೆತ್ತ ಮಕ್ಕಳನ್ನೇ ಒತ್ತೆಯಿಟ್ಟು ಬ್ರಿಟಿಷರ ವಿರುದ್ಧ ಹೋರಾಡಿದ ಸ್ವತಂತ್ರ ಸೇನಾನಿ ಟಿಪ್ಪು. ಇಂದಿನ ಪೀಳಿಗೆಗೆ ಅವರ ಆದರ್ಶಗಳು ಮಾದರಿಯಾಗಬೇಕು ಎಂದರು. ಟಿಪ್ಪು ಸುಲ್ತಾನ ಭಾವಚಿತ್ರಕ್ಕೆ ಮಹಿಪಾಲರೆಡ್ಡಿ ಡಿಗ್ಗಾವಿ ಮಾಲಾರ್ಪಣೆ ಮಾಡಿದರು. ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿದ್ಧನಗೌಡ ಪೊಲೀಸ್ ಪಾಟೀಲ್‌ ಧ್ವಜಾರೋಹಣ ನೆರವೇರಿಸಿದರು. ಖಾಜಾ ಪಟೇಲ್ ಕಾಚೂರು, ಸಂಜೀವರಾವ ಕುಲಕರ್ಣಿ, ಕೆ.ಡಿ. ನಾಸಿ, ಮಹಿಬೂಬಸಾಬ್ ದಫೇದರ್, ಸೈಯದ್ ಹುಸೇನ್ ಮೌಲಾನ, ಗಾಲಿಬ್ ಖಾನ್ ಇನಾಮ್ದಾರ್, ರಫೀಕ್ ವಡಿಕೇರಿ, ಬಿ.ಜೆಡ್. ನಾಲ್ತಾವಾಡ, ರಫೀಕ್ ಖಾಜಿ, ಆದಮ ನಾಶಿ, ರಜಾಕ ಸಾಸನೂರ, ಹನೀಫ್ ಸಾಸನೂರ್, ಜಿಲಾನಿ ನಾಶಿ, ಬಾಬಾ ತಾಳಿಕೋಟಿ ಇದ್ದರು.

------

ಫೋಟೊ: ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಟಿಪ್ಪು ಸುಲ್ತಾನ ವೃತ್ತದಲಿ ಹಜರತ್ ಟಿಪ್ಪು ಸುಲ್ತಾನ್‌ ಜಯಂತಿ ಆಚರಿಸಲಾಯಿತು.

12ವೈಡಆರ್9

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು