ಕನ್ನಡಪ್ರಭ ವಾರ್ತೆ ಸುರಪುರ
ಈ ಸಂದರ್ಭದಲ್ಲಿ ಮಾತನಾಡಿದ ವಿಭಾಗದ ಮುಖ್ಯಸ್ಥ ಬಸವರಾಜ ಅಂಗಡಿ, ಕಾಲೇಜಿನ ಎಂಬಿಎ ವಿದ್ಯಾರ್ಥಿಗಳು ಎಲ್‌ಟಿವಿ ಪಾರ್ಲೆ ಪ್ರೈವೇಟ್ ಲಿಮಿಟೆಡ್‌ಗೆ ಭೇಟಿ ನೀಡಿದ್ದಾರೆ. ನಾಯಕತ್ವ, ಏಕಾಗ್ರತೆ, ಸಮಯ ನಿರ್ವಹಣೆ, ಟ್ರ‍್ಯಾಕಿಂಗ್ ಪ್ರಕ್ರಿಯೆ, ಸರಳತೆಯೊಂದಿಗೆ ಪ್ರಾಮಾಣಿಕತೆ ಮುಂತಾದ ಅಂಶಗಳ ಪ್ರಾಮುಖ್ಯತೆ ಮನದಟ್ಟು ಮಾಡಿಕೊಂಡರು ಎಂದರು.
ಹುಬ್ಬಳ್ಳಿಯಲ್ಲಿ ನಡೆದ ಉದ್ಯಮಶೀಲತಾ ಚರ್ಚಾಕೂಟದಲ್ಲಿ ವಿಆರ್‌ಎಲ್ ಲಾಜಿಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್ ಹುಬ್ಬಳ್ಳಿಯ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ್ ಅವರು ಕ್ರಾಂತಿಕಾರಿ ನಾಳೆ ಕುರಿತು ಮಾತನಾಡಿದರು. ಕವಿತಾಳದಿಂದ ಡಾ. ಕವಿತಾ ಮಿಶ್ರಾ ಅವರು ಯಶಸ್ವಿ ಮಹಿಳಾ ಕೃಷಿ-ಉದ್ಯಮಿಗಳ ಸವಾಲುಗಳು ಕುರಿತು ಮಾತನಾಡಿದರು.ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಶರಣಬಸಪ್ಪ ಸಾಲಿಯವರು ಮಹಾವಿದ್ಯಾಲಯದ ಸುಮಾರು 30 ಎಂಬಿಎ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಒಟ್ಟುಗೂಡಿ ಪ್ರವಾಸಕ್ಕೆ ತೆರಳಿದ್ದರ. ಪಠ್ಯ ಕ್ರಮದ ಸಿದ್ಧಾಂತ ಮತ್ತು ಪ್ರಾಯೋಗಿಕಗಳನ್ನು ಅರ್ಥಮಾಡಿಕೊಳ್ಳಲು ಇಂತಹ ಕೈಗಾರಿಕಾ ಪ್ರವಾಸಗಳು ವಿದ್ಯಾರ್ಥಿಗಳಿಗೆ ಸಹಾಯಕವಾಗುತ್ತವೆ ಎಂದರು.