ಕನ್ನಡಪ್ರಭ ವಾರ್ತೆ ಸುರಪುರ
ದೇವಾಪುರದಿಂದ ಕವಡಿಮಟ್ಟಿ ಗ್ರಾಮದವರೆಗೆ ಸುಮಾರು 4 ಕಿ.ಮೀ. ವ್ಯಾಪ್ತಿಯ ಬೀದರ್-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ ಹೆಚ್ಚಾಗುತ್ತಿರುವ ಅಪಘಾತಗಳ ಸಂಖ್ಯೆಯ ಜತೆಗೆ, ಸಾವಿನ ಪ್ರಮಾಣವೂ ವೃದ್ಧಿಸುತ್ತಿರುವುದಕ್ಕೆ ಇಂತಹದೊಂದು ಅನುಮಾನ ಪ್ರತಿಯೊಬ್ಬರಲ್ಲೂ ಮೂಡಿದೆ.
ಬ್ಲಾಕ್ ಸ್ಪಾಟ್: 100 ರಿಂದ 300 ಮೀ. ವ್ಯಾಪ್ತಿಯಲ್ಲಿ ಒಂದು ವರ್ಷದಲ್ಲಿ ಮೂರು ಸಾವುಗಳ ಅಪಘಾತವಾದರೆ ಆ ಭಾಗವನ್ನು ಬ್ಲಾಕ್ ಸ್ಪಾಟ್ ಎನ್ನಲಾಗುತ್ತದೆ. 2023 ಜನವರಿಯಿಂದ ಡಿಸೆಂಬರ್‌ವರೆಗೂ 6 ಅಪಘಾತ ಸಾವುಗಳು ಸಂಭವಿಸಿವೆ. ಅಲ್ಲದೆ 17 ಸಾವು ರಹಿತ ಅಪಘಾತಗಳು ಸಂಭವಿಸಿವೆ. ರಾಜ್ಯ ಹೆದ್ದಾರಿಯಲ್ಲಿ ಮೂರು ಸಾವು ಅಪಘಾತ ಮತ್ತು 8 ಸಾವು ರಹಿತ ಅಪಘಾತಗಳು ಸಂಭವಿಸಿದ ಮಾಹಿತಿಯನ್ನು ಪೊಲೀಸ್ ಇಲಾಖೆ ನೀಡಿದೆ.ಈ ಹೆದ್ದಾರಿಯ ಅಂಚು ತುಂಬು ಚಿಕ್ಕದಾಗಿವೆ. ವೇಗವಾಗಿ ಬರುವ ಎದುರಿಗೆ ಬರುವ ವಾಹನಗಳಿಗೆ ದಾರಿ ಬಿಡಲು ಸ್ವಲ್ಪವೇ ತಿರುಗಿಸಿದರೂ ಹೊಲಗದ್ದೆಗಳಿಗೆ ಹೋಗಿ ಬೀಳುತ್ತಿವೆ.
ಆರೋಪ: ಬೀದರ್-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ವಾಹನಗಳ ದಟ್ಟಣೆ, ಹೆದ್ದಾರಿಯಲ್ಲೇ ಪಾರ್ಕಿಂಗ್ ಮಾಡುತ್ತಿರುವುದರಿಂದಲೂ ಅಪಘಾತಗಳ ಸಂಖ್ಯೆ ಹೆಚ್ಚುತ್ತಿವೆ. ಹೆದ್ದಾರಿ ಪ್ರಾಧಿಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಹೈವೇ ನಿರ್ಲಕ್ಷ್ಯ: ರಾಷ್ಟ್ರೀಯ ಹೆದ್ದಾರಿಯಲ್ಲಿ ವೈಜ್ಞಾನಿಕವಾಗಿ ಅಳವಡಿಸಬೇಕಾದ ಮಾರ್ಗಸೂಚಿಗಳ ನಿಯಮ ಪಾಲಿಸದಿರುವುದು ಈ ಅಪಘಾತಗಳಿಗೆ ಕಾರಣವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಮಲ್ಲಿಕಾರ್ಜುನ ಕ್ರಾಂತಿ ತಿಳಿಸಿದ್ದಾರೆ.ಕೋಟ್-1
ಚನ್ನಪ್ಪಗೌಡ ಜೆಕ್ಕನಗೌಡ್ರು ದೇವಾಪುರ.ಎನ್.ಎಚ್.ನವರಿಗೆ ಹೆಚ್ಚಿನ ಅಧಿಕಾರವಿರುತ್ತದೆ. ದೇವಾಪುರ, ನಾಗರಾಳ, ಕುಂಬಾರಪೇಟೆ, ಕ್ರಾಸ್ ಹತ್ತಿರ ವೈಜ್ಞಾನಿಕವಾಗಿ ತಡೆಗೋಡೆ ನಿರ್ಮಿಸಬೇಕು. ಅಪಘಾತ ನಿಯಂತ್ರಣಕ್ಕೆ ಜಾಗೃತಿಯ ಸೂಚನಾಫಲಕ, ರಿಪ್ಲೆಕ್ಟ್ ಸ್ಟಿಕರ್, ಸ್ಪೀಡ್ ಬ್ರೇಕರ್, ರಸ್ತೆ ಅಗಲೀಕರಣ ಮಾಡಬೇಕು. ದೇವಾಪುರ ವ್ಯಾಪ್ತಿಯನ್ನು ಅಪಘಾತ ವಲಯವಾಗಿ ಘೋಷಿಸಬೇಕು.