ಧಾರವಾಡ: ಬದುಕಿನಲ್ಲಿ ಎಲ್ಲ ರೀತಿಯಲ್ಲೂ ನೆಮ್ಮದಿಯಿಂದ ಬಾಳಬೇಕಾದರೆ ಶಿವಶರಣರ ನಡೆ ನುಡಿಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ ಎಂದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷ ನಾಡೋಜ ಗೊ.ರು. ಚೆನ್ನಬಸಪ್ಪ ಹೇಳಿದರು.
ಗೊರುಚ, ಡಾ. ವೀರಣ್ಣ ರಾಜೂರ ಹಾಗೂ ಡಾ. ರಾಮು ಮೂಲಗಿ ಅವರನ್ನು ಪರಿಷತ್ ವತಿಯಿಂದ ಸನ್ಮಾನಿಸಲಾಯಿತು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಂಗಮನಾಥ ಲೋಕಾಪುರ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಬಾಳಿಕಾಯಿ, ಖಜಾಂಚಿ ಶ್ರೀಶೈಲ ರಾಚಣ್ಣವರ ಇದ್ದರು. ಪೂರ್ಣಿಮಾ ಮುತ್ನಾಳ ಪ್ರಾರ್ಥಿಸಿದರು. ಪ್ರಮೀಳಾ ಜಕ್ಕಣ್ಣವರ ಮತ್ತು ಡಾ. ಲಿಂಗರಾಜ ರಾಮಾಪುರ ಕಾರ್ಯಕ್ರಮ ನಿರೂಪಿಸಿದರು.
ಪ್ರೊ. ಸಿ.ಎಸ್. ಹೊಸಮಠ, ಡಾ. ಬಿ.ವಿ. ಹೊಸಕೇರಿ, ಡಾ. ಡಿ.ಎಂ. ಹಿರೇಮಠ, ಡಾ. ಶಂಬು ಹೆಗಡಾಳ, ಈಶ್ವರಚಂದ್ರ ಹೊಸಮನಿ, ಪಿ.ಎಚ್. ನೀರಲಕೇರಿ, ಡಾ. ಮಹೇಶ ಹೊರಕೇರಿ, ಡಾ. ಮೃತ್ಯುಂಜಯ ಶೆಟ್ಟರ, ಡಾ. ರಾಜಶೇಖರ ಬಸೆಟ್ಟಿ, ಡಾ. ಎ.ಎಲ್. ದೇಸಾಯಿ, ನಬಿಸಾಬ ಯಲಬುರ್ಗಿ, ಎ.ಬಿ. ಕೊಪ್ಪದ, ರವಿ ದಾಸರ, ಗುರುಸಿದ್ಧಪ್ಪ ಬಡಿಗೇರ, ಸಿದ್ರಾಮ ಸುಳ್ಳದ, ಗುರುಲಿಂಗ ಉಣಕಲ್, ಅಶೋಕ ಗೋರ್ಪಡೆ ಇದ್ದರು.