-ಶಿವಾನಂದ ಸ್ವಾಮೀಜಿ 73ನೇ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರ
------ಕನ್ನಡಪ್ರಭ ವಾರ್ತೆ ಹುಲಸೂರ
ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಅಪಘಾತಕ್ಕೆ ಒಳಗಾದ ವಾಹನ ಸವಾರರಿಗೆ ರಕ್ತದ ಅಗತ್ಯ ಇರುವ ಸಂದರ್ಭದಲ್ಲಿ ಯುವಕರು ನೀಡಿದ ರಕ್ತ ಅನುಕೂಲವಾಗಲಿದೆ ಎಂದು ಬಸವಕಲ್ಯಾಣ ಉಪ ವಿಭಾಗಾಧಿಕಾರಿ ಜಗನ್ನಾಥ ಕುದುರೆ ತಿಳಿಸಿದರು .ಗುರು ಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶಿವಾನಂದ ಸ್ವಾಮೀ ಅವರ 73ನೇ ಜನ್ಮದಿನದ ಅಂಗವಾಗಿ ಅಲ್ಲಮಪ್ರಭು ಶೂನ್ಯ ಪೀಠದ ಆವರಣದಲ್ಲಿ ಶರಣ ಸಂಸ್ಕೃತಿ ಉತ್ಸವ ಹಾಗೂ ವಚನ ರಥೋತ್ಸವ ಅಂಗವಾಗಿ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ದಿನಮಾನಗಳಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಮೇಲೆ ಸಂಚರಿಸುವ ವಾಹನ ಸವಾರರು ರಸ್ತೆ ಅಪಘಾತಕ್ಕೆ ಒಳಗಾಗುವುದು ಸಾಮಾನ್ಯವಾಗಿದೆ.
ತಹಸೀಲ್ದಾರ್ ಶಿವಾನಂದ ಮೆತ್ರೆ, ಶಿಬಿರದ ಆಯೋಜಕ ಆಕಾಶ ಖಂಡಾಳೆ ಮಾತನಾಡಿದರು.ಜಿಪಂ ಮಾಜಿ ಸದಸ್ಯ ಸುಧೀರ್ ಕಾಡಾದಿ, ಜಿಪಂ ಮಾಜಿ ಉಪಾಧ್ಯಕ್ಷೆ ಲತಾ ಹಾರಕುಡೆ, ಅಧಿಕಾರಿಗಳಾದ ಹೀರೆಗೌಡ, ದೀಲಿಪ್ ಕುಮಾರ ಉತ್ತಮ, ಪಿಕೆಪಿಎಸ್ ಅಧ್ಯಕ್ಷ ಓಂಕಾರ ಪಟ್ನೆ, ಕಸಾಪ ತಾಲೂಕು ಅಧ್ಯಕ್ಷ ನಾಗರಾಜ ಹಾವಣ್ಣ, ಕಜಾಪ ತಾಲೂಕು ಅಧ್ಯಕ್ಷ ಶಿವರಾಜ ಖಫಲೆ, ರಾಜ್ಯ ಸರ್ಕಾರಿ ನೌಕರರ ಪರಿಷತ್ ಸದಸ್ಯ ಭೀಮಾಶಂಕರ ಆದೇಪ್ಪ, ರಾಜಕುಮಾರ ನಿಡೋದೆ, ರಾಜಕುಮಾರ ತೊಂಡಾರೆ, ಸಚಿನ ವಗ್ಗೆ, ಲೊಕೇಶ ಧಬಾಲೆ, ಆಸ್ಪತ್ರೆ ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.
ಶನಿವಾರ ಬೆಳಿಗ್ಗೆ 10 ಗಂಟೆಗೆ ಆರಂಭಗೊಂಡಿದ್ದ ರಕ್ತ ದಾನ ಶಿಬಿರ ಸಂಜೆ 5 ಗಂಟೆಯವರೆಗೆ 55 ಜನರು ರಕ್ತ ದಾನ ಮಾಡಿದ್ದಾರೆ ಎಂದು ಆಯೋಜಕರಾದ ಗುಲಾಮ ಬಡಾಯಿ ತಿಳಿಸಿದರು.--
ಚಿತ್ರ 1ಬಿಡಿಆರ್53ಹುಲಸೂರ ಪಟ್ಟಣದ ಅಲ್ಲಮಪ್ರಭು ಶೂನ್ಯ ಪೀಠದ ಆವರಣದಲ್ಲಿ ಶಿವಾನಂದ ಸ್ವಾಮೀಜಿ ಅವರ 73ನೇ ಜನ್ಮದಿನದ ಅಂಗವಾಗಿ ರಕ್ತದಾನ ಶಿಬಿರ ಜರುಗಿತು.
--