ಬಸವಕಲ್ಯಾಣ: ವಚನ ಸಾಹಿತ್ಯದಿಂದ ಜಗತ್ತಿಗೆ ವೈಚಾರಿಕ ಕೊಡುಗೆ ನೀಡಿರುವ ದೇಶ ನಮ್ಮದಾಗಿದೆ. ಶರಣರು ಸರಳವಾಗಿ, ಸಾತ್ವಿಕವಾಗಿ ನುಡಿದಂತೆ ನಡೆಯುವುದರಿಂದ ಅವರ ವ್ಯಕ್ತಿತ್ವ ಶ್ರೇಷ್ಠವಾಗಿಸಿಕೊಂಡಿದ್ದಾರೆ ಎಂದು ಡಾ.ಲಕ್ಷ್ಮಿಕಾಂತ ಪಾಂಚಾಳ ನುಡಿದರು.
ಮೂಢನಂಬಿಕೆಗಳು ಮತ್ತು ಕಂದಾಚಾರ ಆಚರಣೆಗಳನ್ನು ಶರಣರು ತೋಡೆದು ಹಾಕಿದ್ದರು. ಬಸವಕಲ್ಯಾಣ ಪುಣ್ಯ ಪವಿತ್ರ ಸ್ಥಾನವಾಗಿದೆ ಎಂದರು.
ಡಾ.ಎಸ್.ಎಮ್.ಹಾನಗೋಡಿಮಠ ಪ್ರಾಸ್ತಾವಿಕ ಮಾತನಾಡಿ, ಬಸವಾದಿ ಶರಣರ ತಮ್ಮ ವಚನಗಳಲ್ಲಿ ನೀಡಿರುವ ಸಂದೇಶ ಮತ್ತು ವೈಚಾರಿಕತೆಯನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕೆಂದರು.ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಬಸವರಾಜ ಎವಲೆ ಅಧ್ಯಕ್ಷತೆವಹಿಸಿದರು. ಶಿವಕುಮಾರ ಖೋಲ್ಲೆ ಸ್ವಾಗತಿಸಿದರು. ಪ್ರೊ.ವಿಠೋಬಾ ಡೊಣ್ಣೇಗೌಡರು ನಿರೂಪಿಸಿದರೆ ಡಾ. ಶಿವಕುಮಾರ ಪಾಟೀಲ್ ವಂದಿಸಿದರು.