ಧಾರವಾಡ:
ಗುಡೇನಕಟ್ಟಿ ಅವರಿಗೆ ವಾರ್ಡ್ ನಂ. 7ರ 129 ಮನೆಗಳ ಗುರಿ ನೀಡಲಾಗಿತ್ತು. ಅಂತೆಯೇ, ಮಹಾವೀರ ನಗರ, ರಾಮರಹೀಮ್ ಕಾಲನಿಯ ಕರವೀರ ಕಾಲನಿ, ಆಜಾದ ಕಾಲನಿ, ಸಾಯಿ ಲೇಔಟ್, ಚರಂತಿಮಠ ಗಾರ್ಡನ್ ಹತ್ತಿರದ ಬ್ಲಾಕ್‌ನಲ್ಲಿ ಒಟ್ಟು 134 ಮನೆಗಳ ಗಣತಿ ಪೂರ್ಣಗೊಳಿಸಿ ಶೇ.100ರಷ್ಟು ಸಾಧನೆ ಮಾಡಿದ್ದಾರೆ.
ತಹಸೀಲ್ದಾರ್ ಡಾ. ಡಿ.ಎಚ್. ಹೂಗಾರ, ಪಾಲಿಕೆ ವಲಯ ಸಹಾಯಕ ಆಯುಕ್ತ ಶಂಕರ ಪಾಟೀಲ, ಬಿಇಒ ಅಶೋಕ ಸಿಂದಗಿ, ಸಮನ್ವಯಾಧಿಕಾರಿ ಮಂಜು ಅಡವೇರ್ ಹಾಗೂ ಮೇಲ್ವಿಚಾರಕ ಜಿ.ಬಿ. ಶೆಟ್ಟರ್, ಸುಮಿತಾ ಹಿರೇಮಠ, ಎಸ್.ಬಿ. ಅರಮನಿ, ಎಂ.ಆರ್. ಕಬ್ಬೇರ, ಮಹೇಶ ಬಾಳಗಿ, ಆಸಿಫ್ ಸವಣೂರ ಹಾಗೂ ವಿ.ಎಂ. ಪಾಟೀಲ, ಇರ್ಫಾನ್ ಕವಲಗೇರಿ ಗೌರವಿಸಿದರು.