ಸಮೀಕ್ಷೆ ಗುರಿ ಮುಟ್ಟಿದರೂ ಮತ್ತೆ ಕೆಲಸ: ಸಮೀಕ್ಷೆದಾರರ ಆಕ್ಷೇಪ

KannadaprabhaNewsNetwork |  
Published : Oct 16, 2025, 02:00 AM IST
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನಿಗದಿಪಡಿಸಿದ್ದ ಮನೆಗಳ ಸಮೀಕ್ಷೆ ಗುರಿಯನ್ನು ಪೂರ್ಣಗೊಳಿಸಿದ್ದರೂ, ಮತ್ತೊಂದು ಪಟ್ಟಿ ಕೊಟ್ಟು ಸಮೀಕ್ಷೆ ಮಾಡುವಂತೆ ಅಧಿಕಾರಿಗಳು ತಾಕೀತು ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿ ಸಮೀಕ್ಷೆದಾರರು ಮಂಗಳವಾರ ಯಾದಗಿರಿ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಕೆಲ ಹೊತ್ತು ಜಮಾಯಿಸಿ, ಆಕ್ಷೇಪ ವ್ಯಕ್ತಪಡಿಸಿದರು. | Kannada Prabha

ಸಾರಾಂಶ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನಿಗದಿಪಡಿಸಿದ್ದ ಮನೆಗಳ ಸಮೀಕ್ಷೆ ಗುರಿಯನ್ನು ಪೂರ್ಣಗೊಳಿಸಿದ್ದರೂ, ಮತ್ತೊಂದು ಪಟ್ಟಿ ಕೊಟ್ಟು ಸಮೀಕ್ಷೆ ಮಾಡುವಂತೆ ಅಧಿಕಾರಿಗಳು ತಾಕೀತು ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿ ಸಮೀಕ್ಷೆದಾರರು ಮಂಗಳವಾರ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಕೆಲ ಹೊತ್ತು ಜಮಾಯಿಸಿದ್ದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನಿಗದಿಪಡಿಸಿದ್ದ ಮನೆಗಳ ಸಮೀಕ್ಷೆ ಗುರಿಯನ್ನು ಪೂರ್ಣಗೊಳಿಸಿದ್ದರೂ, ಮತ್ತೊಂದು ಪಟ್ಟಿ ಕೊಟ್ಟು ಸಮೀಕ್ಷೆ ಮಾಡುವಂತೆ ಅಧಿಕಾರಿಗಳು ತಾಕೀತು ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿ ಸಮೀಕ್ಷೆದಾರರು ಮಂಗಳವಾರ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಕೆಲ ಹೊತ್ತು ಜಮಾಯಿಸಿದ್ದರು.

ಕುಟುಂಬಗಳ ಸಮೀಕ್ಷೆಯಲ್ಲಿ ಶೇ.102ರಷ್ಟು ಪ್ರಗತಿ ಸಾಧಿಸಿದ್ದರೂ ಕುಟುಂಬ ಸದಸ್ಯರ ಜನಸಂಖ್ಯೆಯ ಮಾಹಿತಿ ಸಂಗ್ರಹದಲ್ಲಿ ಯಾದಗಿರಿ ಜಿಲ್ಲೆ ರಾಜ್ಯದಲ್ಲಿಯೇ ಕೊನೆಯ ಸ್ಥಾನದಲ್ಲಿದೆ. ಅಕ್ಟೋಬರ್ 13 ರ ಸಂಜೆ 6.30 ಕೊನೆಗೊಂಡಂತೆ ಸಮೀಕ್ಷೆಯಲ್ಲಿ ಜಿಲ್ಲೆಯ 15.65 ಲಕ್ಷ ಜನರು ಮಾಹಿತಿ ಕಲೆ ಹಾಕಬೇಕಿದೆ. ಹೀಗಾಗಿ, ಸಮೀಕ್ಷೆಯಲ್ಲಿ ಸೇರ್ಪಡೆಯಾಗದ ಕುಟುಂಬ ಸದಸ್ಯರ ಮಾಹಿತಿ ಕ್ರೋಢೀಕರಣ ಮಾಡುವಂತೆ ಜಿಲ್ಲಾಡಳಿತ ಬಿಟ್ಟು ಹೋದವರ ಪಟ್ಟಿ ಕೊಟ್ಟು ಸಮೀಕ್ಷೆಗೆ ಇಳಿಸಿದೆ ಎಂದು ದೂರಿದರು.

ಗೊತ್ತುಪಡಿಸಿದ ಗುರಿ ಮುಟ್ಟದೆ ಇದ್ದಾಗ ಶಿಕ್ಷಕರು ಯಾವುದೇ ಪ್ರದೇಶ, ಗ್ರಾಮಗಳಿಗೆ ತೆರಳಿ ಕೊಟ್ಟಿರುವ ಟಾರ್ಗೆಟ್ ಮುಟ್ಟುವಂತೆ ಹೇಳಿತ್ತು. ಹೀಗಾಗಿ, ನಮಗೆ ಕೊಟ್ಟಿದ್ದ 135 ಕುಟುಂಬಗಳ ಸಮೀಕ್ಷೆ ಮಾಡಿದ್ದೇವೆ. ಸರಿಯಾದ ವಿಳಾಸ ಇಲ್ಲದ ಮತ್ತೊಂದು ಪಟ್ಟಿ ಕೊಟ್ಟು ಮತ್ತೊಮ್ಮೆ ಸಮೀಕ್ಷೆ ಮಾಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಶಿಕ್ಷರೊಬ್ಬರು ಹೇಳಿದರು.

ದಿನಕ್ಕೊಂದು ಆದೇಶ ಮಾಡಿ ಸಮೀಕ್ಷೆ ಮಾಡುವ ಶಿಕ್ಷಕರಲ್ಲಿ ಗೊಂದಲ ಸೃಷ್ಟಿಸಿದ್ದಾರೆ. ಯಾರು ಎಲ್ಲಿ ಬೇಕಾದರೂ ಸಮೀಕ್ಷೆ ಮಾಡುವಂತೆ ಸೂಚಿಸಿದ್ದರಿಂದ ಶಿಕ್ಷಕರು ತಮ್ಮ ಏರಿಯಾ, ಸುತ್ತಲಿನ ಬಡಾವಣೆಗಳಿಗೆ ತೆರಳಿ ಕೊಟ್ಟವರ ಟಾರ್ಗೆಟ್ ಮುಗಿಸಿದ್ದಾರೆ. ನಗರದಲ್ಲಿ ಸಮೀಕ್ಷೆಗೆ ಮನೆಗಳು ಸಿಬ್ಬಂದಿಗಳು ಸೈದಾಪುರ, ಹೊಸಹಳ್ಳಿಗೆ ತೆರಳಿ ತಮ್ಮ ಟಾರ್ಗೆಟ್ ಪೂರ್ತಿ ಮಾಡಿದ್ದಾರೆ ಎಂದು ಮತ್ತೊಬ್ಬ ಶಿಕ್ಷಕರು ಹೇಳಿದರು.

28 ವರ್ಷ ಶಿಕ್ಷಕನಾಗಿ ನೌಕರಿ ಮಾಡಿದ್ದೇನೆ, ಸಮೀಕ್ಷೆಯಿಂದ ಈ ನೌಕರಿ ಸಾಕಾಗಿ, ತಲೆನೋವು ಬಂದಿದೆ. ಇನ್ನೆರೆಡು ವರ್ಷವಾದರೂ ಮುಗಿದು ಹೋಗುತ್ತದೆ. ಸೇವೆಯಿಂದ ಕಳುಹಿಸಿದರೆ ಇವತ್ತೇ ಹೋಗುತ್ತೇನೆ ಎಂದು ಮಗದೊಬ್ಬ ಶಿಕ್ಷಕರು ಬೇಸರ ವ್ಯಕ್ತಪಡಿಸಿದರು.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಡಿಪಿಐ ಚೆನ್ನಬಸಪ್ಪ ಮುಧೋಳ, ರಾಜ್ಯದ ಎಲ್ಲ ಕಡೆಗಳಲ್ಲಿ ಕುಟುಂಬ ಸದಸ್ಯರು ಹೆಸರು ಸಮೀಕ್ಷೆಯಲ್ಲಿ ಸೇರ್ಪಡೆಯಾಗಿಲ್ಲ. ಬಿಟ್ಟು ಹೋದವರನ್ನು ಸಮೀಕ್ಷೆ ವ್ಯಾಪ್ತಿಗೆ ತರಲು ಸ್ಕೀಮ್ ವರ್ಕರ್, ಬಿಲ್ ಕಲೆಕ್ಟರ್, ಪಡಿತರ ಅಂಗಡಿ ಸಿಬ್ಬಂದಿ ನೆರವು ಪಡೆದು ಹೆಸರು ಸೇರ್ಪಡೆ ಮಾಡುವಂತೆ ಶಿಕ್ಷಕರಿಗೆ ಪಟ್ಟಿ ಕೊಟ್ಟು ಕಳಿಹಿಸಲಾಗಿದೆ ಎಂದರು.

PREV

Recommended Stories

ಆರೆಸ್ಸೆಸ್‌ ವಿಚಾರಕ್ಕೆ ಪ್ರಿಯಾಂಕ್‌ಗೆ ಬೆದರಿಕೆ ಕರೆ ಮಾಡಿದ್ದವನ ಬಂಧನ
2,350 ಕೋಟಿ ವೆಚ್ಚದಲ್ಲಿ ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣಕ್ಕೆ ಒಪ್ಪಿಗೆ