ಮನೆ ಕಳವು ಮಾಡಿದ್ದ ಆರೋಪಿ ಸೆರೆ

KannadaprabhaNewsNetwork |  
Published : Jun 29, 2025, 01:32 AM ISTUpdated : Jun 29, 2025, 01:33 AM IST
ಪೊಟೋ೨೮ಸಿಪಿಟಿ೧: ಆರೋಪಿಯಿಂದ ವಶಪಡಿಸಿಕೊಂಡ ಚಿನ್ನಾಭರಣದೊಂದಿಗೆ ಪೂರ್ವಪೊಲೀಸ್ ಠಾಣೆಯ ಪೊಲೀಸರು. | Kannada Prabha

ಸಾರಾಂಶ

ಜೂ. 7ರಂದು ನಗರದ ಬಿಸ್ಮಿಲ್ಲಾ ನಗರದ ಮೊಹಮದ್ ಆಖಿಲ್ ಎಂಬುವವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಬೀಗ ಮುರಿದು ಕಳ್ಳತನ ಮಾಡಲಾಗಿತ್ತು.

ಚನ್ನಪಟ್ಟಣ: ನಗರದ ಬಿಸ್ಮಿಲ್ಲಾ ನಗರದ ಮನೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಬೇಧಿಸಿರುವ ಪೂರ್ವ ಪೊಲೀಸ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.ರಾಮನಗರದ ಸೈಯದ್ ಅಹ್ಮದ್ (21) ಬಂಧಿತ. ಬಂಧಿತನಿಂದ 4.5 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣ, ತಾಮ್ರದ ತಂತಿಗಳನ್ನು ವಶಕ್ಕೆ ಪಡೆಯಲಾಗಿದೆ.ಜೂ. 7ರಂದು ನಗರದ ಬಿಸ್ಮಿಲ್ಲಾ ನಗರದ ಮೊಹಮದ್ ಆಖಿಲ್ ಎಂಬುವವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಬೀಗ ಮುರಿದು ಕಳ್ಳತನ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೂರ್ವ ಪೊಲೀಸ್ ಠಾಣೆಯ ಪೊಲೀಸರು, ವೃತ್ತ ನಿರೀಕ್ಷಕ ರವಿಕಿರಣ್ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ದುರ್ಗಪ್ಪ ಅವರ ನೇತೃತ್ವದಲ್ಲಿ ಸಿಬ್ಬಂದಿ ಶಶಿಕುಮಾರ್, ಅನಿಲ್ ಕುಮಾರ್, ದುರುಗಪ್ಪ, ರವಿ ಹಿರೇಮನಿ, ಭೀಮರಾಯ ದಳವಾಯಿ, ಕಾಶಿನಾಥ್, ಸತ್ಯಪ್ಪ, ಲೋಕೇಶ್ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.ಆರೋಪಿ ನೀಡಿದ ಸುಳಿವಿನ ಮೇರೆಗೆ ಪೂರ್ವ ಪೊಲೀಸ್ ಠಾಣೆ ಒಂದು ಪ್ರಕರಣ ಹಾಗೂ ರಾಮನಗರದ ಐಜೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಪ್ರಕರಣ ಸಹ ಪತ್ತೆಯಾಗಿದೆ. ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರ ಕಾರ್ಯವನ್ನು ಎಸ್‌ಪಿ ಶ್ರೀನಿವಾಸಗೌಡ, ಎಎಸ್‌ಪಿ ರಾಮಚಂದ್ರಯ್ಯ, ಡಿವೈಎಸ್‌ಪಿ ಗಿರಿ ಶ್ಲಾಘಿಸಿದ್ದಾರೆ.

ಪೊಟೋ೨೮ಸಿಪಿಟಿ೧: ಆರೋಪಿಯಿಂದ ವಶಪಡಿಸಿಕೊಂಡ ಚಿನ್ನಾಭರಣದೊಂದಿಗೆ ಪೂರ್ವಪೊಲೀಸ್ ಠಾಣೆಯ ಪೊಲೀಸರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ