ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಜೆಎಲ್ ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಬಹುತ್ವ ಭಾರತ ಜನಪರ ಸಂಘವು ಶುಕ್ರವಾರ ಆಯೋಜಿಸಿದ್ದ ಎಸ್ಐಆರ್- ಸಾಂವಿಧಾನಿಕ ಸಂಸ್ಥೆಗಳೇ ಸಂವಿಧಾನವನ್ನು ವಿಫಲಗೊಳಿಸುತ್ತಿವೆಯೇ? ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಸ್ಐಆರ್ ಬಗ್ಗೆ ಸ್ಪಷ್ಟನೆ, ನಿಖರತೆ ಕಂಡುಕೊಳ್ಳಬೇಕಿದೆ ಎಂದು ಹೇಳಿದರು.
ಪ್ರಸ್ತುತ ಎಸ್ಐಆರ್ ಕುರಿತು ಮತದಾರರು, ವಿದ್ಯಾವಂತರನ್ನೂ ಜಾಗೃತಿಗೊಳಿಸುವುದು ಅನಿವಾರ್ಯ ಆಗಿದೆ. ರಾಜರು, ಬ್ರಿಟಿಷರ ಕಾಲದಲ್ಲಿ ಕೆಲವರಿಗೆ ಮಾತ್ರ ಮತದಾನ ಹಕ್ಕು, ಅಧಿಕಾರ ವ್ಯವಸ್ಥೆ ಇತ್ತು. ಸ್ವಾತಂತ್ರ್ಯ ನಂತರ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನವನ್ನು ಕೊಟ್ಟಿದ್ದು ಡಾ.ಬಿ.ಆರ್. ಅಂಬೇಡ್ಕರ್. ಪ್ರಸ್ತುತ ಸಂವಿಧಾನ ಆಶಯಗಳನ್ನು ಬುಡಮೇಲು ಮಾಡುವ ಕೆಲಸ ಕೆಲವು ರಾಜಕೀಯ ಪಕ್ಷಗಳಿಂದ ಆಗುತ್ತಿದೆ. ಸಂವಿಧಾನಕ್ಕೆ ಆಪತ್ತು ಬಂದಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.ಎಸ್ಐಆರ್ ಮೂಲಕ 1 ಕೋಟಿಗೂ ಹೆಚ್ಚಿನ ಮತದಾರರನ್ನು ಹೊರಗಿಟ್ಟಿದ್ದಾರೆ. ಇವರ ಬಗ್ಗೆ ಚಿಂತನೆ ಆಗಬೇಕು. ಮತದಾನ ಹಕ್ಕು ಕಸಿಯುವ ಕೆಲಸ ಆಗುತ್ತಿದೆ. ಸಂವಿಧಾನ ನಶಿಸಿದರೇ ಪ್ರಜಾಪ್ರಭುತ್ವ, ಜನರ ಬದುಕು ಉಳಿಯಲು ಸಾಧ್ಯವೇ?ಸಂವಿಧಾನವನ್ನು ಅಳಿಸುವ ಕೆಲಸ ಹಂತ ಹಂತವಾಗಿ ನಡೆಯುತ್ತಿದೆ. ಸಂವಿಧಾನ ಅಸ್ತಿತ್ವ ಅಳಗಾಡುವ ಪರಿಸ್ಥಿತಿ ಬಂದಿದೆ. ಇಷ್ಟಾದರೂ ವಿದ್ಯಾವಂತರು ವೈಚಾರಿಕತೆ, ವೈಜ್ಞಾನಿಕತೆ, ವಿಚಾರವಂತಿಕೆ ಬೆಳೆಸಿಕೊಂಡಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ವಿಷಯ ಕುರಿತು ಚಿಂತಕ ಶಿವಸುಂದರ್ ಮಾತನಾಡಿ, ಎಸ್ಐಆರ್ ಪ್ರಕ್ರಿಯೆ ಸಂವಿಧಾನ ಬಾಹಿರವಾಗಿರುವುದು ಈಗಾಗಲೇ ದಾಖಲಾಗಿದೆ. ಚುನಾವಣಾ ಆಯೋಗ ಒಂದೆಡೆ ನಿಯಮಗಳನ್ನು ಸಡಿಲಗೊಳಿಸುತ್ತಿದೆ ಎಂದು ಹೇಳಿಕೊಂಡರೂ, ಮತ್ತೊಂದೆಡೆ ಮತದಾರರನ್ನು ಪಟ್ಟಿಯಿಂದ ಹೊರಗಿಡುವ ಪ್ರಕ್ರಿಯೆಗೆ ಸಮರ್ಪಕ ಉತ್ತರ ನೀಡುತ್ತಿಲ್ಲ. ಹೀಗಾಗಿ, ಎಸ್ಐಆರ್ ಪ್ರಕ್ರಿಯೆನ್ನೇ ಸಂಪೂರ್ಣವಾಗಿ ರದ್ದುಗೊಳಿಸುವವರೆಗೂ ಹೋರಾಟ ಮುಂದುವರಿಸುವುದು ಅನಿವಾರ್ಯ ಎಂದರು.
ಮಾಜಿ ಮೇಯರ್ ಪುರುಷೋತ್ತಮ್, ಬಹುತ್ವ ಭಾರತ ಜನಪರ ಸಂಘದ ಅಧ್ಯಕ್ಷ ಎಂ. ಮಲೈ ಮಹದೇವಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಿ.ಪಿ. ವಿಜಯರಾಜು ಇದ್ದರು. ಎಂ. ಲಿಂಗರಾಜು ಸ್ವಾಗತಿಸಿದರು.
- ಶಿವಸುಂದರ್, ಚಿಂತಕ