ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಗರದ ಶಿಕ್ಷಣ ಸಂಸ್ಥೆ ಬಿ.ವಿ.ವಿ ಸಂಘ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೆಜಮೆಂಟ್‌ನಲ್ಲಿ ನಡೆದ ಬಜೆಟ್ ಪೆ ಚರ್ಚಾ 2026 ಅಂತರ ಕಾಲೇಜು ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ದೇಶವು ಜಾಗತಿಕವಾಗಿ ಅಭಿವೃದ್ಧಿ ಹೊಂದಿರುವ ದೇಶವಾಗಿ ಹೊರ ಹೊಮ್ಮಿದೆ. ಇದ್ದಕ್ಕೆ ಮುಖ್ಯ ಕಾರಣ ಸುಸ್ಥಿರ ಅರ್ಥಿಕ ಬೆಳವಣಿಗೆ ಅರ್ಥಿಕ ಶಿಸ್ತು ಕರ ಸಂಗ್ರಹ ಮತ್ತು ನಿಧಿಯ ಸಮರ್ಪಕ ನಿರ್ವಹಣೆ ರಾಷ್ಟ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಾಗಿರುತ್ತದೆ. ಭಾರತ ದೇಶವು ವಿಶ್ವದ 4ನೇ ಅತಿದೊಡ್ಡ ಅರ್ಥಿಕತೆ ಹೊಂದಿದ್ದು, ಪ್ರಥಮ ಸ್ಥಾನದತ್ತ ದಾಪುಗಾಲು ಇಡುತ್ತಿದೆ. ವಿದ್ಯಾರ್ಥಿಗಳು ವಯಕ್ತಿಕ ಅರ್ಥಿಕ ನಿರ್ವಹಣೆ ಮತ್ತು ಸುಸ್ಥಿರ ನಿರ್ವಹಣೆ ಬಗ್ಗೆ ಜ್ಞಾನ ಸಂಪಾದಿಸಬೇಕು ಎಂದು ತಿಳಿಸಿದರು.ಕಾಲೇಜು ಆಡಳಿತ ಮಂಡಳಿ ಕಾಯಾಧ್ಯಕ್ಷ ಗುರುಬಸವ ಸೂಳಿಭಾವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶವು ಸರ್ವತೋಮುಖ ಪ್ರಗತಿ ಸಾಧಿಸಿದರೇ ಬಲಿಷ್ಠ ಅರ್ಥಿಕ ವ್ಯವಸ್ಥೆ ಅತ್ಯಗತ್ಯ. ಭಾರತ ದೇಶವು ಅರ್ಥಿಕತೆಯಲ್ಲಿ ಸ್ವಾವಲಂಬಿಕೆಯನ್ನು ಸಾಧಿಸಿ ಶ್ರೀಮಂತ ರಾಷ್ಟ್ರಗಳಿಗೆ ಪೈಪೂಟಿ ನಿಡುತ್ತಿರುವ ಅತ್ಯುತ್ತಮ ಬೆಳವಣಿಗೆ ಆಗಿದೆ. ಪ್ರತಿಯೊಬ್ಬ ನಾಗರಿಕನು ದೇಶದ ಅರ್ಥಿಕ ಸಬಲಿಕರಣಕ್ಕೆ ತನ್ನ ಕೊಡುಗೆ ನೀಡಬೇಕು ಎಂದರು.ಬಿಮ್ಸ್ ಎಂ.ಬಿ.ಎ ಮಹಾವಿದ್ಯಾಲಯದ ವ್ಯವಸ್ಥಾಪಕ ಡಾ.ಪ್ರಕಾಶ ವಡವಡಗಿ ಉಪಸ್ಥಿತರಿದ್ದರು. ಅಂತರ ಕಾಲೇಜು ಸ್ಫರ್ಧೆಯಲ್ಲಿ ಒಟ್ಟು 30ಕ್ಕೂ ಹೆಚ್ಚು ಪದವಿ ಕಾಲೇಜಿನ ವಿದ್ಯಾರ್ಥಿಗಳು ಬಜೆಟ್ ಪೆ ಚರ್ಚಾ ವಿಶ್ಲೇಷಣೆಯನ್ನು ಅತ್ಯಂತ ಚಾಕ ಚಕ್ಯತೆಯಿಂದ ವಿವರಿಸಿದರು, ವಿವಿಧ ಕಾಲೇಜಿನ ಮುಖ್ಯಸ್ಥರು ಬೋಧಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕು.ಶ್ರೀನಿವಾಸ ಹಾಗೂ ಕು.ಸಮೃದ್ಧಿ ನಿರೂಪಣೆ ಮಾಡಿದರು. ಪ್ರೊ.ಶೃತಿ ಮ್ಯಾಗೇರಿ ವಿವರಿಸಿದರು. ಕು.ಶಿವಪ್ಪ ಹಾಗೂ ಕು.ಸಮರ್ಥ ಪರಿಚಯಿಸಿದರು. ಕು.ಧನ್ಯಾ ವಂದಿಸಿದರು.