ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಪುರಸಭಾ ಕಚೇರಿ ಮುಂಭಗದಲ್ಲಿ ವೀರಶೈವ ಮುಖಂಡರು ಹಾಗೂ ಎಲ್ಲ ಸಮಾಜದ ಮುಖಂಡರುಗಳು ವಿವಿಧ ಸಂಘಟನೆಗಳ ಮುಖಂಡರು ರಥವನ್ನು ಆಹ್ವಾನಿಸಿ, ವಿಶೇಷ ಪೂಜೆ ಸಲ್ಲಿಸಿದರು.
ನಂತರ ಪುರಸಭಾ ಮಾಜಿ ಅಧ್ಯಕ್ಷ ಎಂ.ಎಲ್.ದಿನೇಶ್ ಮಾತನಾಡಿ, ಪ್ರತಿ-ವರ್ಷದಂತೆ ಈ ವರ್ಷವೂ ಅದ್ಧೂರಿಯಾಗಿ ಜಾತ್ರಾ ಮಹೋತ್ಸವ ನಡೆಯಲಿದ್ದು, ಸುತ್ತೂರು ಜಾತ್ರೆ ಎಂದರೆ ವಿಶೇಷತೆಯಿಂದ ಕೂಡಿದೆ. ಹಾಗಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವರು ಎಂದರು.ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ನಾಗರಾಜು ಮಾತನಾಡಿ, ಸುತ್ತೂರಿನಲ್ಲಿ ಜ.15ರಿಂದ 20ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ. ಜಾತ್ರೆಯಲ್ಲಿ ಸಾಮೂಹಿಕ ವಿವಾಹ ಭಜನಾ ಮೇಳ, ವಸ್ತು ಪ್ರದರ್ಶನ, ಕೃಷಿ ಮೇಳ, ಸಾಂಸ್ಕೃತಿಕ ಮೇಳ, ದೇಶಿ ಆಟಗಳು, ದೋಣಿ ವಿಹಾರ, ಚಿತ್ರಕಲೆ, ರಂಗೋಲಿ, ಗಾಳಿಪಟ, ಸ್ಪರ್ಧೆಗಳು ಇನ್ನು ಕೆಲವು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಈ ಪುರಸಭಾ ಮಾಜಿ ಸದಸ್ಯರಾದ ಕೃಷ್ಣಪ್ಪ, ವಸಂತಕುಮಾರಿ ಲೋಕೇಶ್, ಪೂರ್ಣಿಮಾ ಪ್ರಕಾಶ್, ನಾಗರತ್ನ, ಜಗಜ್ಯೋತಿ ಬಸವೇಶ್ವರ ಸಂಘದ ಅಧ್ಯಕ್ಷ ಜಗದೀಶ್, ಉಪಾಧ್ಯಕ್ಷರಾದ ಶಿವಕುಮಾರ್, ಮಲ್ಲುಸ್ವಾಮಿ, ಕಾರ್ಯದರ್ಶಿಗಳಾದ ನಿಜಗುಣ, ಪ್ರದೀಪ್ ಕುಮಾರ್, ಚಂದ್ರವನ ಆಶ್ರಮದ ಕಾರ್ಯದರ್ಶಿ ಟಿ.ಪಿ. ಕುಮಾರ್, ಪತ್ರಕರ್ತ ಕುಮಾರ್, ಜೆಎಸ್‌ಎಸ್ ಲೋಕೇಶ್, ರಥದ ಸಂಚಾಲಕರಾದ ಪಂಚಾಕ್ಷರಿ, ಮಂಜುನಾಥ್, ಶಿವಪ್ರಸಾದ್, ರಾಜಶೇಖರ್, ಚೆನ್ನಪ್ಪ, ಶ್ರೀಕಂಠಯ್ಯ, ಮಾದೇವಸ್ವಾಮಿ, ದೇವರಾಜ್, ಬಾಲಣ್ಣ, ವೆಂಕಟಸ್ವಾಮಿ, ನಿಂಗಪ್ಪ, ವಿಶ್ವನಾಥ ಮಾಸ್ಟ್ರು, ಎಲೆಕ್ಟ್ರಾನಿಕ್ ಮಲ್ಲು, ಬಾಲಸುಬ್ರಮಣ್ಯ, ಪೂರ್ಣ ಸೇರಿದಂತೆ ಇತರರು ಇದ್ದರು.