ಹೊಸ ವರ್ಷದಾರಂಭದಲ್ಲಿ ಮೂಡುವುದೇ ಬೆಳಕು?

KannadaprabhaNewsNetwork |  
Published : Jan 01, 2026, 02:30 AM IST
ಫೋಟೋ 31ಪಿವಿಡಿ1ತಾಲೂಕಿನ ಸುಂಕಾರ್ಲಕುಂಟೆ ಗ್ರಾಮಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ನಿವಾಸಿಗಳ ಒತ್ತಾಯಿಸಿದರು.ಫೋಟೋ 31ಪಿವಿಡಿ2ತಾಲೂಕಿನ ಕೊಡಮಡಗು ಗ್ರಾಪಂ ವ್ಯಾಪ್ತಿಯ ಸುಂಕಾರ್ಲಕುಂಟೆ ಮೂಲಭೂತ ವಂಚಿತ,ಗ್ರಾಮಕ್ಕೆ ಗ್ರಾಪಂ ಹಾಗೂ ಬೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ನೂರಾರು ಯೋಜನೆಗಳು ಜಾರಿಯಾಗಿದ್ದರೂ ಅವುಗಳನ್ನು ಅಧಿಕಾರಿಗಳು ಅರ್ಹರಿಗೆ ತಲುಪಿಸುವಲ್ಲಿ ಮುತುವರ್ಜಿ ವಹಿಸಿದರೆ ಇರುವುದರಿಂದ ತಾಲೂಕಿನ ಸುಂಕಾರ್ಲಕುಂಟೆ ಗ್ರಾಮದಲ್ಲಿ ಮೂಲಸೌಕರ್ಯಗಳು ಮರಿಚಿಕೆಯಾಗಿದ್ದು ಜನರು ಸಂಕಷ್ಟದ ಮಧ್ಯೆಯೇ ಜೀವನ ನಡೆಸುತ್ತಿದ್ದಾರೆ.

ನಾಗೇಂದ್ರ ಜೆ, ಕನ್ನಡಪ್ರಭ ವಾರ್ತೆ ಪಾವಗಡ

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ನೂರಾರು ಯೋಜನೆಗಳು ಜಾರಿಯಾಗಿದ್ದರೂ ಅವುಗಳನ್ನು ಅಧಿಕಾರಿಗಳು ಅರ್ಹರಿಗೆ ತಲುಪಿಸುವಲ್ಲಿ ಮುತುವರ್ಜಿ ವಹಿಸಿದರೆ ಇರುವುದರಿಂದ ತಾಲೂಕಿನ ಸುಂಕಾರ್ಲಕುಂಟೆ ಗ್ರಾಮದಲ್ಲಿ ಮೂಲಸೌಕರ್ಯಗಳು ಮರಿಚಿಕೆಯಾಗಿದ್ದು ಜನರು ಸಂಕಷ್ಟದ ಮಧ್ಯೆಯೇ ಜೀವನ ನಡೆಸುತ್ತಿದ್ದಾರೆ.

ತಾಲೂಕು ಕೊಡಮಡಗು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸುಂಕಾರ್ಲಕುಂಟೆ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ 70ಕ್ಕೂ ಹೆಚ್ಚು ಬಡ ಕುಟುಂಬಗಳು ಮನೆಕಟ್ಟಿಕೊಂಡು ವಾಸವಾಗಿದ್ದು, ಕೂಲಿ, ರೈತಾಪಿ ಕಾರ್ಮಿಕರಾಗಿ ದುಡಿದು ಜೀವನ ಸಾಗಿಸುತ್ತಿದ್ದಾರೆ. ಇದುವರೆವಿಗೂ ಅನೇಕ ಮನೆಗಳಿಗೆ ವಿದ್ಯುತ್‌ ಬೆಳಕಿಲ್ಲ, ವಿದ್ಯುತ್ ಬೀದಿ ದೀಪ ಅಳ‍ವಡಿಸಿಲ್ಲ, ಸೂಕ್ತ ರಸ್ತೆ, ಚರಂಡಿ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯ ಕಲ್ಪಿಸದೇ ಇರುವುದರಿಂದ ಅಲ್ಲಿನ ಜನರ ಸ್ಥಿತಿ ದೇವರಿಗೆ ಪ್ರೀತಿ ಎನ್ನುವಂತಾಗಿದೆ.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಗ್ರಾಮಸ್ಥರು ತಾಪಂ ಇಒ, ಗ್ರಾಪಂ ಪಿಡಿಒಗೆ ಅರ್ಜಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅತಂತ್ರಸ್ಥಿಯಲ್ಲಿ ಜೀವನ ಸಾಗಿಸುತ್ತಿದ್ದು, ಆಧುನಿಕ ಕಾಲಘಟ್ಟದಲ್ಲಿಯೂ ಇಂತಹ ದುಸ್ಥಿತಿ ಅನುಭವಿಸುತ್ತಿರುವುದು ನಮ್ಮ ಹಣೆಬರಹ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕುಡಿಯಲು ಶುದ್ಧ ನೀರಿಲ್ಲ

ಬಡ ಕುಟುಂಬದ ನಿವಾಸಿಗಳು ಮನೆಗಳು ಕಟ್ಟಿಕೊಂಡು ಕುರಿ, ಮೇಕೆ ಹಾಗೂ ಇತರೆ ರೈತಾಪಿ ಕೂಲಿ ಕೆಲಸಗಳಲ್ಲಿ ತೊಡಗಿ ಜೀವನ ನಡೆಸುತ್ತಿದ್ದಾರೆ. ವಿಪರ್ಯಾಸವೆಂದರೆ ಇದುವರೆವಿಗೂ ಈ ಗ್ರಾಮಕ್ಕೆ ಸಮರ್ಪಕ ರಸ್ತೆಗಳಿಲ್ಲ, ಗ್ರಾಪಂ ನಿಂದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದ ಕಾರಣ ರೈತರ ಕೊಳವೆಬಾವಿ ಬೇರೆಡೆ ಇರುವ ಶುದ್ಧ ನೀರಿನ ಘಟಕಗಳಲ್ಲಿ ಹಣ ನೀಡಿ ನೀರು ತಂದು ಜೀವನ ನಡೆಸುತ್ತಿದ್ದಾರೆ.

ಕೋಟ್‌... ಪಾವಗಡಕ್ಕೆ 10ಕಿಮೀ ದೂರಲ್ಲಿ ಕೊಡಮಡಗು ಗ್ರಾಪಂ ಪಂಚಾಯ್ತಿ ವ್ಯಾಪ್ತಿಗೆ ಒಳಪಟ್ಟ ಸುಂಕಾರ್ಲಕುಂಟೆ ಇದ್ದು ಈ ಗ್ರಾಮದಲ್ಲಿ ಮೂಲಸೌಕರ್ಯವಿಲ್ಲದೇ ಜನರು ದಯನೀಯ ಸ್ಥಿತಿಯಲ್ಲಿದ್ದಾರೆ. ನಾವು ಕರೆ ಮಾಡಿದ ನಂತರ ಕೆಲ ಅಧಿಕಾರಿಗಳು ಗ್ರಾಮಕ್ಕೆ ಮೊದಲ ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ವ್ಯವಸ್ಥೆ ಸರಿಪಡಿಸದೆ ಇದ್ದರೆ ಹೋರಾಟ ಮಾಡಲಾಗುವುದು. - ಎನ್‌.ರಾಮಾಂಜಿನಪ್ಪ, ಎಎಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ.

ಕೋಟ್‌ 3

ಸುಂಕಾರ್ಲಕುಂಟೆ ನಿವಾಸಿಗಳ ಮೂಲಸೌಲಭ್ಯ ಕುರಿತು ಮಾಹಿತಿ ಇಲ್ಲ. ಸ್ಥಳ ಪರಿಶೀಲನೆಗೆ ವಿದ್ಯುತ್‌ ಇಲಾಖೆಯ ಜೆಇ.ರಮೇಶ್‌ ಬಾಬು ಅವರನ್ನು ಕಳುಹಿಸಿಕೊಡಲಾಗಿದೆ. ಅಲ್ಲಿನ ಸಮಸ್ಯೆ ಬಗ್ಗೆ ಪರಿಶೀಲಿಸಿ ವಿದ್ಯುತ್‌ ದ್ವೀಪ ಹಾಗೂ ಮನೆಗಳಿಗೆ ಕರೆಂಟ್‌ ಸಂಪರ್ಕ ಕಲ್ಪಿಸಲಾಗುವುದು. - ಕೃಷ್ಣ ಮೂರ್ತಿ ಬೆಸ್ಕಾಂ ಎಇಇ

ಕೋಟ್‌ ತಾಲೂಕಿನ ಸುಂಕಾರ್ಲಕುಂಟೆ ಗ್ರಾಮದ ಮೂಲಭೂತ ಸೌಲಭ್ಯ ಕಲ್ಪಿಸುವ ಬಗ್ಗೆ ಅರ್ಜಿ ಸಲ್ಲಿಸಿದ್ದು,ನಾನು ಕೊಡಮಡಗು ಗ್ರಾಪಂಗೆ ನಿಯೋಜಿತರಾಗಿ ಮೂರು ತಿಂಗಳಷ್ಟೆ ಕಳೆದಿದೆ. ಸ್ಥಳ ಪರಿಶೀಲನೆ ನಡೆಸುತ್ತಿದ್ದೇವೆ.ಇಲ್ಲಿನ ಸ್ಥಿತಿಗತಿಯ ಬಗ್ಗೆ ಮೇಲಧಿಕಾರಿಗಳಿಗೆ ವರದಿ ನೀಡಿ ಕೂಡಲೇ ಕುಡಿಯುವ ನೀರು ಹಾಗೂ ಇತರೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು. -ದಾದಲೂರಪ್ಪ ಗ್ರಾಪಂ ಅಭಿವೃದ್ಧಿ ಅಧಿಕಾರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ