ಕನ್ನಡಪ್ರಭ ವಾರ್ತೆ ಮಳವಳ್ಳಿ
ಶಾಂತಿ ಕಾಲೇಜು ಮುಂಭಾಗದ 33 ಎಕರೆ ಪ್ರದೇಶದಲ್ಲಿ ನಡೆಯುತ್ತಿರುವ ಸ್ಥಳವನ್ನು ಅಳತೆ ಮಾಡಿಸಿ ಮುಖ್ಯದ್ವಾರ, ವೇದಿಕೆ, ಸಭಾಂಗಣ ಯಾವ ಸ್ಥಳದಲ್ಲಿ ಏನು ಬರಬೇಕೆಂಬುವುದರ ಬಗ್ಗೆ ವೇದಿಕೆ ನಿರ್ಮಾಣ ಜವಾಬ್ದಾರಿ ತೆಗೆದುಕೊಂಡಿರುವ ಮೈಸೂರಿನ ಶರೀಫ್ ಮತ್ತು ಎಂಜಿನಿಯರ್ ತಂಡದೊಂದಿಗೆ ಚರ್ಚೆ ನಡೆಸಿದರು.
ಕಾರ್ಯಕ್ರಮಕ್ಕೆ ರಾಷ್ಟ್ರಪತಿ, ರಾಜ್ಯಪಾಲರು, ಮುಖ್ಯಮಂತ್ರಿಗಳು, ಕೇಂದ್ರ ಹಾಗೂ ರಾಜ್ಯ ಸಚಿವರು, ಶಾಸಕರು ಸೇರಿದಂತೆ ವಿಶೇಷ ಗಣ್ಯ ವ್ಯಕ್ತಿಗಳು ಆಗಮಿಸುವುದರಿಂದ ಸಕಲ ಸಿದ್ಧತೆ ಮಾಡಿಕೊಳ್ಳಬೇಕೆಂದು ವೇದಿಕೆ ನಿರ್ಮಾಣದ ತಂಡಕ್ಕೆ ಮಾಹಿತಿ ನೀಡಿದರು.ಜಯಂತಿ ಮಹೋತ್ಸವದ ಸಂಚಾಲಕ ಪಿ.ಎಂ.ಮಾದೇವಸ್ವಾಮಿ ಮಾತನಾಡಿ, ಸುತ್ತೂರು ಜಯಂತಿ ಮಹೋತ್ಸವದ ಅಂಗವಾಗಿ ಡಿ.16ರಿಂದ ಸುತ್ತೂರಿನಿಂದ ದೇವರ ಉತ್ಸವ ಮೂರ್ತಿ ಬಂದು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ನಂತರ ನಿರ್ಮಾಣಗೊಂಡಿರುವ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗುವುದು. ಡಿ.17ರಂದು ಬೆಳಗ್ಗೆ 10.30 ಗಂಟೆಗೆ ರಾಷ್ಟ್ರಪತಿಗಳು ಜಯಂತಿ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದರು.