ವಿಜಯ ವಿಠ್ಠಲ ಪಿಯು ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ

KannadaprabhaNewsNetwork |  
Published : Jan 13, 2024, 01:36 AM IST
31 | Kannada Prabha

ಸಾರಾಂಶ

ಕಾಲೇಜಿನ ಪ್ರಾಂಶುಪಾಲ ಎಚ್. ಸತ್ಯಪ್ರಸಾದ್‌ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ವಿಜಯ ವಿಠ್ಠಲ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ 161ನೇ ಜಯಂತಿಯನ್ನು ರಾಷ್ಟ್ರೀಯ ಯುವ ದಿನವಾಗಿ ಶುಕ್ರವಾರ ಆಚರಿಸಲಾಯಿತು.

ಈ ವೇಳೆ ಕಾಲೇಜಿನ ಪ್ರಾಂಶುಪಾಲ ಎಚ್. ಸತ್ಯಪ್ರಸಾದ್‌ ಮಾತನಾಡಿ, ಸ್ವಾಮಿ ವಿವೇಕಾನಂದರು ಸ್ವಾರ್ಥರಹಿತವಾದ ತತ್ತ್ವಾದರ್ಶಗಳಿಂದ ಜಗತ್ಪ್ರಸಿದ್ಧಿಯನ್ನು ಪಡೆದರು. ಭಾರತದ ಹಿರಿಮೆ ಮತ್ತು ಧರ್ಮ ಸಹಿಷ್ಣುತೆಯನ್ನು ಸ್ವಾಮಿ ವಿವೇಕಾನಂದರು ಇಡೀ ವಿಶ್ವಕ್ಕೆ ಸಾರಿದರು ಎಂದರು.

ಇಂದಿನ ಯುವಜನತೆ ಅವರ ಆದರ್ಶಗಳನ್ನು ಪಾಲಿಸಿ ಜೀವನದಲ್ಲಿ ಅತ್ಯಂತ ಅವಶ್ಯಕವಾಗಿರುವ ಸತ್ಯಶೀಲತೆ, ಶಿಸ್ತುಬದ್ಧ ಜೀವನ, ವ್ಯಾಯಾಮ, ವಿದ್ಯಾರ್ಜನೆ, ದೇಶಪ್ರೇಮ ಮತ್ತು ಅಹಂಭಾವವನ್ನು ತೊರೆಯುವಿಕೆ ಮುಂತಾದ ಸದ್ವಿಚಾರಗಳನ್ನು ಅನುಸರಿಸಬೇಕು. ಏಕಾಗ್ರತೆ, ಧ್ಯಾನ, ಪರೋಪಕಾರ, ದೀನದಲಿತರ ಸೇವೆ, ಪ್ರಾರ್ಥನೆ ಮತ್ತು ಸನ್ನಡತೆಯಿಂದ ದೇವರ ಸಾಕ್ಷಾತ್ಕಾರ ಸಾಧ್ಯ ಎಂದು ಅವರು ಹೇಳಿದರು.

ಉಪನ್ಯಾಸಕರಾದ ಎನ್. ಅನಿತಾ, ಕೆ.ವಿ. ಸಂಜಯ, ಕೆ.ಆರ್. ಮಂಜುನಾಥ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾಸ್ ಸಿಲಿಂಡರ್ ದರ ಹೆಚ್ಚಳ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ
ಪರೀಕ್ಷಾ ಭಯ ಹೋಗಲಾಡಿಸುವ ಪ್ರೇರಣಾ ಶಿಬಿರ