ಮಾನವ ಜನ್ಮ ಅತ್ಯಂತ ಅಮೂಲ್ಯ ಎಂದು ಸ್ವಾಮೀಜಿ

KannadaprabhaNewsNetwork |  
Published : Dec 02, 2025, 01:08 AM IST
ತಾಲ್ಲೂಕು ಯಾಜ್ಞವಲ್ಕ ಸಂಘ ಆಯೋಜಿಸಿದ್ದ ಯಾಜ್ಞವಲ್ಕ ಜಯಂತಿ ಮತ್ತು ಸಾಮೂಹಿಕ ಉಪನಯನ ಕಾರ್ಯಕ್ರಮ | Kannada Prabha

ಸಾರಾಂಶ

ಹಾರನಹಳ್ಳಿ ರಾಮಸ್ವಾಮಿ ಸಮುದಾಯ ಭವನದಲ್ಲಿ ತಾಲೂಕು ಯಾಜ್ಞವಲ್ಕ ಸಂಘ ಆಯೋಜಿಸಿದ್ದ ಯಾಜ್ಞವಲ್ಕ ಜಯಂತಿ ಮತ್ತು ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಗಳು, ಪಕ್ಷಿಪ್ರಾಣಿಗಳಿಗೆ ಮಾನವನಷ್ಟು ಜ್ಞಾನ ನೀಡಿಲ್ಲ. ಭಗವಂತ ಅವುಗಳನ್ನೇ ರಕ್ಷಿಸುತ್ತಾನೆ. ಆದರೆ ಜ್ಞಾನವನ್ನು ಹೊಂದಿರುವ ಮಾನವನು ಕಷ್ಟದಲ್ಲಿ ಸಹಾಯ ಮಾಡಿದವರನ್ನು ನೆನೆಯಬೇಕು, ಭಗವಂತನ ಸ್ಮರಣೆಯಿಂದ ದೂರವಾದರೆ ಕೃತಘ್ನನಾಗುತ್ತಾನೆ ಎಂದರು. ಲೌಕಿಕ ಜೀವನದ ಗಡಿಬಿಡಿಯಲ್ಲಿ ಧ್ಯಾನಕ್ಕೆ ಸಮಯವಿಲ್ಲ ಎನ್ನುವುದು ತಪ್ಪು ಎಂದು ಶ್ರೀಗಳು ತಿಳಿಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಋಷಿಮುನಿಗಳಿಗೆ ಆಯಸ್ಸಿಗೆ ಮಿತಿ ಇಲ್ಲ, ಅವರು ಇಚ್ಛಾಮರಣಿಗಳು. ಆದರೆ ಮಾನವಜನ್ಮ ಅತ್ಯಲ್ಪಾವಧಿಯದು ಹಾಗೂ ಎಲ್ಲಾ ಜನ್ಮಗಳಿಗಿಂತ ಶ್ರೇಷ್ಠ. ಜ್ಞಾನಕ್ಕೆ ಪಾತ್ರರಾದ ನಾವು ಭಗವಂತನಿಗೆ ಕೃತಜ್ಞತೆಯನ್ನು ಧ್ಯಾನದ ಮೂಲಕ ವ್ಯಕ್ತಪಡಿಸಬೇಕು ಎಂದು ಶೃಂಗೇರಿ ಜಗದ್ಗುರು ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನದ ಶ್ರೀ ಅದ್ವೈತಾನಂದ ಭಾರತೀ ಮಹಾಸ್ವಾಮಿ ಆಶೀರ್ವಚನ ನೀಡಿದರು.ನಗರದ ಹಾರನಹಳ್ಳಿ ರಾಮಸ್ವಾಮಿ ಸಮುದಾಯ ಭವನದಲ್ಲಿ ತಾಲೂಕು ಯಾಜ್ಞವಲ್ಕ ಸಂಘ ಆಯೋಜಿಸಿದ್ದ ಯಾಜ್ಞವಲ್ಕ ಜಯಂತಿ ಮತ್ತು ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಗಳು, ಪಕ್ಷಿಪ್ರಾಣಿಗಳಿಗೆ ಮಾನವನಷ್ಟು ಜ್ಞಾನ ನೀಡಿಲ್ಲ. ಭಗವಂತ ಅವುಗಳನ್ನೇ ರಕ್ಷಿಸುತ್ತಾನೆ. ಆದರೆ ಜ್ಞಾನವನ್ನು ಹೊಂದಿರುವ ಮಾನವನು ಕಷ್ಟದಲ್ಲಿ ಸಹಾಯ ಮಾಡಿದವರನ್ನು ನೆನೆಯಬೇಕು, ಭಗವಂತನ ಸ್ಮರಣೆಯಿಂದ ದೂರವಾದರೆ ಕೃತಘ್ನನಾಗುತ್ತಾನೆ ಎಂದರು. ಲೌಕಿಕ ಜೀವನದ ಗಡಿಬಿಡಿಯಲ್ಲಿ ಧ್ಯಾನಕ್ಕೆ ಸಮಯವಿಲ್ಲ ಎನ್ನುವುದು ತಪ್ಪು ಎಂದು ಶ್ರೀಗಳು ತಿಳಿಸಿದರು.

ಹಿಂದೂ ಧರ್ಮದ ಮೂಲವೇ ವೇದ. ಎಲ್ಲರೂ ವೇದಾಧ್ಯಯನ ಮಾಡಲಾಗುವುದಿಲ್ಲ, ಆದರೆ ಅದನ್ನು ಮಾಡಿಸುತ್ತಿರುವವರಿಗೆ ಸಹಾಯ ಮಾಡುವುದೂ ಪುಣ್ಯ. ಗಾಯತ್ರೀ ಜಪ ಮತ್ತು ಸಂಧ್ಯಾವಂದನೆ ಜೀವರಕ್ಷಣೆಗೆ ದೊರೆತ ದೈವೋಪಚಾರ. ಸಂಧ್ಯಾವಂದನೆ ಮಾಡಲು ಗಡಿಬಿಡಿಯೆಂಬುದು ನೆಪವಲ್ಲ, ಎಂದು ಉಪದೇಶಿಸಿದರು. 42 ವರ್ಷಗಳಿಂದ ಯಾಜ್ಞವಲ್ಕ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸುತ್ತಿರುವುದು ಸಮಾಜಕಲ್ಯಾಣಕ್ಕಾಗಿ ಮಾಡಿದ ಮಹತ್ತರ ಸೇವೆ. ಧಾರ್ಮಿಕ ಕಾರ್ಯಕ್ರಮಗಳು ನಮ್ಮೊಬ್ಬರ ಸುಖಕ್ಕಿಂತಲೂ ನೆರೆ ಸಮಾಜದ ಶಾಂತಿಯನ್ನು ಸಾರುತ್ತವೆ, ಎಂದೂ ಶ್ರೀಗಳು ಪ್ರಶಂಸಿಸಿದರು.ಶ್ರೀಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡ ತಾಲ್ಲೂಕು ಯಾಜ್ಞವಲ್ಕ ಸಂಘದ ಅಧ್ಯಕ್ಷ ಹಿರಿಯಣ್ಣಯ್ಯ, ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ರವಿಕುಮಾರ್ ಸೇರಿದಂತೆ ವಿವಿಧ ಅಂಗ ಸಂಸ್ಥೆಗಳ ಪದಾಧಿಕಾರಿಗಳು ಭಕ್ತಿ–ಸನ್ಮಾನ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಗಣಪತಿ ಹೋಮ, ನವಗ್ರಹ ಹೋಮ ಮತ್ತು ಗಾಯತ್ರೀ ಹೋಮಗಳು ಜರುಗಿದವು. ನಂತರ ವಟುಗಳಿಗೆ ಬ್ರಹ್ಮೋಪದೇಶ ನೆರವೇರಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ಅಭಿನಂದನೆ ನೀಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನಪ್ರತಿನಿಧಿಗಳಿಗೆ ಗೌರ್‍ನರ್‌ ಅಪಮಾನ : ಸಿದ್ದರಾಮಯ್ಯಆಕ್ರೋಶ
ಪುಸ್ತಕಗಳಲ್ಲಿ ಬೆಂಗಳೂರು ನಗರಕ್ಕೆ ಬರೋಬ್ಬರಿ ₹38 ಕೋಟಿ ಡ್ರಗ್ಸ್‌ ಸಾಗಾಟ