ಮಾಗಡಿ: ಸತತ 18 ವರ್ಷಗಳಿಂದ ನಿರಂತರವಾಗಿ ಮಾಗಡಿ ತಾಲೂಕಿನ 150ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದೇವೆಂದು ಯುವ ಬೆಂಗಳೂರು ಟ್ರಸ್ಟ್ ಉಪಾಧ್ಯಕ್ಷ ಸುನೀಲ್ ಹೇಳಿದರು.
ಮಾಗಡಿ: ಸತತ 18 ವರ್ಷಗಳಿಂದ ನಿರಂತರವಾಗಿ ಮಾಗಡಿ ತಾಲೂಕಿನ 150ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದೇವೆಂದು ಯುವ ಬೆಂಗಳೂರು ಟ್ರಸ್ಟ್ ಉಪಾಧ್ಯಕ್ಷ ಸುನೀಲ್ ಹೇಳಿದರು.
ತಾಲೂಕಿನ ಶ್ರೀರಾಂಪುರ ಕಾಲೋನಿ, ಮೋಟಗೊಂಡನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಸ್ವೆಟರ್ ವಿತರಿಸಿ ಮಾತನಾಡಿದ ಅವರು, ಚಳಿಗಾಲದಲ್ಲಿ ಮಕ್ಕಳ ಆರೋಗ್ಯ ದೃಷ್ಟಿಯಿಂದ ಸ್ವೆಟರ್ ನೀಡಲಾಗುತ್ತಿದೆ. ಚಳಿಗಾಲದಲ್ಲಿ ಜ್ವರಕ್ಕೆ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗಿದ್ದು ಇದರಿಂದ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದೆಂಬ ಉದ್ದೇಶದಿಂದ ಈ ಕೆಲಸ ಮಾಡುತ್ತಿದ್ದೇವೆ. ನಿಟ್ಟಿನಲ್ಲಿ ಕಿರಿಯ ಸರ್ಕಾರಿ ಶಾಲಾ ಮಕ್ಕಳಿಗೆ ಗುಣಮಟ್ಟದ ಸ್ವೆಟರ್ ವಿತರಿಸುತ್ತಿದ್ದು ಮಾಗಡಿ ತಾಲೂಕು ಸೇರಿದಂತೆ ರಾಜ್ಯಾದ್ಯಂತ 120ಕ್ಕೂ ಹೆಚ್ಚು ಶಾಲೆಗಳಿಗೆ ಸ್ವೆಟರ್‌ಗಳನ್ನು ವಿತರಿಸುತ್ತಿದ್ದು ಮಲೆನಾಡು ಭಾಗದಲ್ಲೂ ಮಕ್ಕಳ ಆರೋಗ್ಯ ದೃಷ್ಟಿಯಿಂದ ಈ ಕೆಲಸ ಮಾಡಲಾಗುತ್ತಿದೆ. ಸವಾಲಿನ ಹವಾಮಾನ ಪರಿಸ್ಥಿತಿಗಳ ಹೊರತಾಗಿಯೂ ಮಕ್ಕಳು ಆರಾಮವಾಗಿ ಶಾಲೆಗೆ ಹೋಗಬಹುದು ಎಂಬುದು ನಮ್ಮ ಟ್ರಸ್ಟ್ ಆಶಯವಾಗಿದೆ ಎಂದು ತಿಳಿಸಿದರು.
ಸ್ವಯಂ ಸೇವಕ ನಂದೀಶ್ ಮಾತನಾಡಿ, ಮನುಷ್ಯನಿಗೆ ಆರೋಗ್ಯವೇ ಮುಖ್ಯವಾಗಿದ್ದು ಅದರಲ್ಲೂ ಮಕ್ಕಳಿಗೆ ಹವಾಮಾನ ವೈಪರೀತ್ಯದಿಂದ ಸಾಕಷ್ಟು ಕಾಯಿಲೆಗಳಿಗೆ ತುತ್ತಾಗುವ ಅನಿವಾರ್ಯ ಎದುರಾಗುವ ಹಿನ್ನೆಲೆಯಲ್ಲಿ ಯುವ ಬೆಂಗಳೂರು ಟ್ರಸ್ಟ್ ಗುಣಮಟ್ಟದ ಸ್ವೆಟರ್ ವಿತರಿಸಿಚಳಿಯಿಂದ ರಕ್ಷಿಸಿಕೊಳ್ಳಲು ಅನುಕೂಲವಾಗಲಿದೆ. ಸರ್ಕಾರಿ ಶಾಲೆಗೆ ಬರುವ ಬಡ ಮಕ್ಕಳಿಗೆ ಹೆಚ್ಚು ಅನುಕೂಲವಾಗುತ್ತಿದೆ ಎಂದರು.
ವಿತರಣೆ ವೇಳೆ ಟ್ರಸ್ಟ್ ನ ಸದಸ್ಯರಾದ ಚೌರನಾಥ್, ಶಾಲಾ ಮುಖ್ಯ ಶಿಕ್ಷಕರಾದ ರೇಣುಕಾರಾಧ್ಯ, ವೆಮ್ಮನಹಳ್ಳಿ ಶಾಲೆಯ ಗೋವಿಂದಯ್ಯ, ಶಾಲಾ ಮಕ್ಕಳು ಪೋಷಕರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.