ಐಪಿಎಲ್ ಸೆಮಿಫೈನಲ್, ಫೈನಲ್ ಪಂದ್ಯ ವೀಕ್ಷಿಸಲು ವ್ಯವಸ್ಥೆ

KannadaprabhaNewsNetwork |  
Published : May 24, 2024, 12:49 AM IST
ಪತ್ರಿಕಾಗೋಷ್ಠಿ | Kannada Prabha

ಸಾರಾಂಶ

ಟಾಟಾ ಐಪಿಎಲ್ 2024ರ ಕ್ರೇಜ್ ಹೆಚ್ಚಿಸುವ ಸಲುವಾಗಿ ಈ ವರ್ಷ ದೇಶದ ಐವತ್ತು ಕಡೆಗಳಲ್ಲಿ ದೊಡ್ಡ ಪರದೆಗಳ ಮೂಲಕ ಐಪಿಎಲ್ ಅಭಿಮಾನಿಗಳಿಗೆ ಮನರಂಜನೆ ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಮೇ.24ರಂದು ನಡೆಯುವ ಸೆಮಿಫೈನಲ್ ಮತ್ತು ಮೇ 26 ರಂದು ನಡೆಯುವ ಫೈನಲ್ ಪಂದ್ಯವನ್ನು ದೊಡ್ಡ ಪರದೆಯ ಮೇಲೆ 4-5 ಸಾವಿರ ಜನರಿಗೆ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ.

ತುಮಕೂರು: ಭಾರತೀಯ ಕ್ರಿಕೆಟ್ ಸಂಸ್ಥೆ ಬಿಸಿಸಿಐನ ವತಿಯಿಂದ ಆಯೋಜಿಸಿರುವ ಐಪಿಎಲ್-2024ರ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳನ್ನು ವೀಕ್ಷಿಸಲು ಟಾಟಾ ಐಪಿಎಲ್ ಫ್ಯಾನ್ ಪಾರ್ಕ್ ವತಿಯಿಂದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ 32*18 ಅಡಿ ಅಳತೆಯ ದೊಡ್ಡ ಪರದೆಯ ವ್ಯವಸ್ಥೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ತುಮಕೂರು ಜಿಲ್ಲಾ ಉಸ್ತುವಾರಿ ಸುನಿಲ್ ಪಾಟೀಲ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಟಾಟಾ ಐಪಿಎಲ್ 2024ರ ಕ್ರೇಜ್ ಹೆಚ್ಚಿಸುವ ಸಲುವಾಗಿ ಈ ವರ್ಷ ದೇಶದ ಐವತ್ತು ಕಡೆಗಳಲ್ಲಿ ದೊಡ್ಡ ಪರದೆಗಳ ಮೂಲಕ ಐಪಿಎಲ್ ಅಭಿಮಾನಿಗಳಿಗೆ ಮನರಂಜನೆ ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಮೇ.24ರಂದು ನಡೆಯುವ ಸೆಮಿಫೈನಲ್ ಮತ್ತು ಮೇ 26 ರಂದು ನಡೆಯುವ ಫೈನಲ್ ಪಂದ್ಯವನ್ನು ದೊಡ್ಡ ಪರದೆಯ ಮೇಲೆ 4-5 ಸಾವಿರ ಜನರಿಗೆ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.

ಐಪಿಎಲ್ ಪಾರ್ಕ್ ಆಯೋಜನೆ ಮಾಡಿರುವ ಮೆಗಾ ಸ್ಕ್ರೀನ್ ಮನರಂಜನಾ ಆಟಕ್ಕೆ ಉಚಿತ ಪ್ರವೇಶವಿದ್ದು, ಆಟ ವೀಕ್ಷಿಸಲು ಬರುವ ಅಭಿಮಾನಿಗಳಿಗೆ ಕೂಪನ್ ನೀಡಲಾಗುವುದು. ಕೂಪನ್‌ ಡ್ರಾನಲ್ಲಿ ವಿಜೇತ ಒಬ್ಬರಿಗೆ ಅಂತಾರಾಷ್ಟ್ರೀಯ ಆಟಗಾರರು ಸಹಿ ಮಾಡಿರುವ ಟಿ- ಶರ್ಟ್ ದೊರೆಯಲಿದೆ. ದೊಡ್ಡ ಪರದೆಯ ಮೇಲೆ ಐಪಿಎಲ್ ಸೆಮಿ ಫೈನಲ್ ಮತ್ತು ಫೈನಲ್ ಮ್ಯಾಚ್‌ಗಳನ್ನು ವೀಕ್ಷಿಸುವುದು ಸ್ಟೇಡಿಯಂನಲ್ಲಿ ನೋಡಿದ ಅನುಭವವನ್ನೇ ನೀಡಲಿದೆ. ಅದಕ್ಕೆ ಬೇಕಾದ ಡಿಜೆ, ಸೌಂಡ್‌ ಸಿಸ್ಟಮ್ ಎಲ್ಲವನ್ನೂ ಟಾಟಾ ಐಪಿಎಲ್-೨೦೨೪ ಫ್ಯಾನ್ ಪಾರ್ಕ ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಜನರು ಜೂನಿಯರ್ ಕಾಲೇಜು ಮೈದಾನಕ್ಕೆ ಭೇಟಿ ನೀಡಿ, ದೊಡ್ಡ ಪರದೆಯ ಮೇಲೆ ಐಪಿಎಲ್ ಟೂರ್ನಿ ವೀಕ್ಷಿಸುವ ಮೂಲಕ ಐಪಿಎಲ್ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಅನಂತ ದತ್, ಬಿಸಿಸಿಐ ನ ಕ್ರಿಕೆಟ್ ವ್ಯವಸ್ಥಾಪಕರು ಮತ್ತಿತರರು ಪಾಲ್ಗೊಂಡಿದ್ದರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ