ಫೋಟೋ- 5ಎಂವೈಎಸ್26, 27, 28
----ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರಿನ ಇಬ್ಬರು ಅಧಿಕಾರಿಗಳ ಮನೆಯ ಮೇಲೆ ಲೋಕಾಯುಕ್ತ ಪೊಲೀಸರು ಗುರುವಾರ ದಾಳಿ ನಡೆಸಿ, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಪತ್ತೆ ಮಾಡಿದ್ದಾರೆ.ಜಿಲ್ಲೆಯ ಟಿ. ನರಸೀಪುರದ ಪುರಸಭೆಯ ಕಿರಿಯ ಎಂಜಿನಿಯರ್ (ಮೈಸೂರು ಮಹಾನಗರ ಪಾಲಿಕೆಯಿಂದ ನಿಯೋಜನೆ) ಕೆ.ಆರ್. ಚಂದ್ರಶೇಖರ್ ಹಾಗೂ ಸೆಸ್ಕ್ ಪ್ರಭಾರ ಎಲೆಕ್ಟ್ರಿಕಲ್ ಇನ್ಸ್ ಪೆಕ್ಟರ್ ಅಲ್ತಾಫ್ ಹುಸೇನ್ ಜಕಾರ್ತಿ ಮನೆಯಲ್ಲಿ ಕೋಟ್ಯಂತರ ಮೌಲ್ಯದ ಚಿನ್ನಾಭರಣ, ಮನೆ ಇನ್ನಿತರ ಆಸ್ತಿ ಪತ್ತೆಯಾಗಿದೆ.
ಚಂದ್ರಶೇಖರ್ ವಿಜಯನಗರದಲ್ಲಿ 82 ಲಕ್ಷ ಮೌಲ್ಯದ ಮನೆಯಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಇದರೊಂದಿಗೆ 55 ಲಕ್ಷ ಮೌಲ್ಯದ 2 ನಿವೇಶನ ಪತ್ತೆಯಾಗಿದೆ. 2.02 ಕೋಟಿ ಮೌಲ್ಯದ ಚಿನ್ನಾಭರಣ, 62 ಲಕ್ಷ ಹಣ, 10.70 ಲಕ್ಷ ಮೌಲ್ಯದ ವಾಹನಗಳ ಸಹಿತ ಒಟ್ಟು 2.75 ಕೋಟಿ ಚರಾಸ್ತಿ ಪತ್ತೆಯಾಗಿದೆ.
ಲೋಕಾಯಕ್ತ ಎಸ್ಪಿ ಟಿ.ಜೆ. ಉದೇಶ ನೇತೃತ್ವದಲ್ಲಿ ಡಿವೈಎಸ್ಪಿ ಶೈಲೇಂದ್ರ, ಇನ್ಸ್ ಪೆಕ್ಟರ್ ಗಳಾದ ವಿಜಯ್ ಕುಮಾರ್, ಉಮೇಶ್, ಶಾಂತಿನಾಥ್ ವನ್ನೂರ್, ಶಶಿಕುಮಾರ್ ಮತ್ತು ಸಿಬ್ಬಂದಿ ಈ ದಾಳಿ ನಡೆಸಿದ್ದಾರೆ.