ಕೊಡವ ಸಮಾಜದಲ್ಲಿ ಆಯೋಜನೆ । 140ಕ್ಕೂ ಅಧಿಕ ಜನರಿಂದ ತಪಾಸಣೆ
ಟಿ. ಶೆಟ್ಟಿಗೇರಿ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಪೊಮ್ಮಕ್ಕಡ ಕೂಟ ಹಾಗೂ ಗೋಣಿಕೊಪ್ಪ ಲೋಪಮುದ್ರ ಮೆಡಿಕಲ್ ಸೆಂಟರ್, ಲೋಪಮುದ್ರ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಟಿ. ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ಸೋಮವಾರ ಆರೋಗ್ಯ ತಪಾಸಣಾ ಉಚಿತ ಶಿಬಿರ ನಡೆಯಿತು. ಶಿಬಿರದಲ್ಲಿ ಸುಮಾರು 140 ಜನರು ಆರೋಗ್ಯ ತಪಾಸಣೆಯಲ್ಲಿ ಪಾಲ್ಗೊಂಡರು.ಶಿಬಿರವನ್ನು ಉದ್ಘಾಟಿಸಿದ ಲೋಪಮುದ್ರ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಅಮೃತ್ ನಾಣಯ್ಯ ಮಾತನಾಡಿ, ಒಬ್ಬ ಮನುಷ್ಯನಿಗೆ ಅತಿ ಹೆಚ್ಚು ಪ್ರಾಮುಖ್ಯತೆ ಆರೋಗ್ಯವಾಗಿರುತ್ತದೆ. ಆರೋಗ್ಯವಿದ್ದವರಿಗೆ ನೂರಾರು ಆಸೆ ಆಕಾಂಕ್ಷೆ ಇರುತ್ತದೆ. ಆದರೆ ಅನಾರೋಗ್ಯ ಪೀಡಿತರಿಗೆ ಒಂದೇ ಆಸೆ ಆರೋಗ್ಯವಂತನಾಗುವುದು ಮಾತ್ರ ಎಂದು ತಿಳಿಸಿದರು.
ಲೋಪಮುದ್ರ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞೆ ಡಾ. ಸೌಮ್ಯ ನಾಣಯ್ಯ ಮಾತನಾಡಿ, ಉಚಿತ ಆರೋಗ್ಯ ಸೇವೆಗೆ ಒಂದು ಮೌಲ್ಯವಿರಬೇಕು. ಕೇವಲ ಪ್ರಚಾರ ಪಡೆದು ಹೋಗುವ ಉದ್ದೇಶ ಇರಬಾರದು. ಜನರಿಗೆ ಆರೋಗ್ಯ ಹಾಗೂ ಕಣ್ಣಿನ ಆರೋಗ್ಯ ಇದ್ದರೆ ಮಾತ್ರ ಜೀವನ. ಆರೋಗ್ಯ ಇಲ್ಲದಿದ್ದರೆ ಏನು ಇಲ್ಲ. ನಮ್ಮ ಆರೋಗ್ಯಕ್ಕೆ ನಾವು ಸಮಯ ಮೀಸಲಿಡಬೇಕು ಹೊರತು ಬೇರೆಯವರು ಮೀಸಲಿಡಲು ಸಾಧ್ಯವಿಲ್ಲ ಎಂದು ಹೇಳಿದರು.ಟಿ.ಶೆಟ್ಟಿಗೇರಿ ಕೊಡವ ಸಮಾಜದ ಅಧ್ಯಕ್ಷ ಕೈಬುಲಿರ ಹರೀಶ್ ಅಪ್ಪಯ್ಯ ಮಾತನಾಡಿದರು.
ಡಾ.ಅಮೃತ್ ನಾಣಯ್ಯ, ಡಾ. ಸೌಮ್ಯ ನಾಣಯ್ಯ, ಡಾ.ತಸೀನಾ ತಿಮ್ಮಯ್ಯ, ಡಾ. ಸಿಂಧು, ಆಹಾರ ತಜ್ಞೆ ರಶ್ಮಿ ಹಾಗೂ ಸಿಬ್ಬಂದಿಯಿಂದ ಆರೋಗ್ಯ ತಪಾಸಣೆ ಕಾರ್ಯಕ್ರಮ ನಡೆಯಿತು.