ಟೇಕ್ವಾಂಡೋ ಕ್ರೀಡೆ ಸಾಹಸ ಕಲೆಯೂ ಹೌದು: ಗೌತಮ್ ಡವಲಪರ್ಸ್ ನ ಹರ್ಷ

KannadaprabhaNewsNetwork |  
Published : Jul 28, 2025, 12:31 AM IST
26ಕೆಆರ್ ಎಂಎನ್ 5.ಜೆಪಿಜಿರಾಮನಗರದ ಗುರುಭವನದಲ್ಲಿ ರಾಮನಗರ ಟೇಕ್ವಾಂಡೋ ಸಂಸ್ಥೆಯ ವತಿಯಿಂದ ಶನಿವಾರ ನಡೆದ 42ನೇ ರಾಜ್ಯ ಮಟ್ಟದ ಟೇಕ್ವಾಂಡೋ ಕ್ರೀಡಾ ವಿಜೇತರಿಗೆ ಪದಕ‌ ಪ್ರದಾನ ಮಾಡಲಾಯಿತು. | Kannada Prabha

ಸಾರಾಂಶ

ಚಿಕ್ಕ ವಯಸ್ಸಿನ ಮಕ್ಕಳಿಗೆ ವಿದ್ಯಾರ್ಥಿ ದೆಸೆಯಲ್ಲಿಯೇ ಶಿಕ್ಷಣ ಕೊಡಿಸುವ ಜೊತೆ ಜೊತೆಗೆ ಕ್ರೀಡೆ ಸಾಂಸ್ಕ್ರತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಪೋಷಕರು ಹೆಚ್ಚು ಆಶಕ್ತಿ ವಹಿಸಿ, ವಿಶೇಷವಾಗಿ ಟೇಕ್ವಾಂಡೋ‌ ಕಲೆಯನ್ನು ಹೆಣ್ಣು‌ ಮಕ್ಕಳು ಕರಗತ ಮಾಡಿಕೊಂಡರೆ ತಮ್ಮನ್ನು ತಾವೇ ರಕ್ಷಣೆ ಮಾಡಿಕೊಳ್ಳಲು ಸಹಾಯವಾಗಲಿದೆ.

ಕನ್ನಡಪ್ರಭ ವಾರ್ತೆ ರಾಮನಗರ

ಮಕ್ಕಳು ತಮ್ಮನ್ನು ತಾವೇ ರಕ್ಷಿಸಿಕೊಳ್ಳುವ ಸಾಹಸ ಕಲೆಗಳನ್ನು ಕಲಿಯುವ ಅವಶ್ಯಕತೆ ಇದೆ ಎಂದು ಸಮಾಜ‌ ಸೇವಕ ಹಾಗೂ ಗೌತಮ್ ಡವಲಪರ್ಸ್ ಮಾಲೀಕ ಹರ್ಷ ಮೆಚ್ಚುಗೆ ವ್ಯಕ್ತಪಡಿಸಿದರು‌.

ನಗರದ ಗುರುಭವನದಲ್ಲಿ ರಾಮನಗರ ಟೇಕ್ವಾಂಡೋ ಸಂಸ್ಥೆ ಆಯೋಜಿಸಿದ್ದ 42ನೇ ರಾಜ್ಯ ಮಟ್ಟದ ಟೇಕ್ವಾಂಡೋ ಕ್ರೀಡಾ ವಿಜೇತರಿಗೆ ಪದಕ‌ ಪ್ರದಾನ ಸಮಾರಂಭದಲ್ಲಿ ಪದಕ ವಿತರಿಸಿ ಅವರು ಮಾತನಾಡಿದರು.

ಚಿಕ್ಕ ವಯಸ್ಸಿನ ಮಕ್ಕಳಿಗೆ ವಿದ್ಯಾರ್ಥಿ ದೆಸೆಯಲ್ಲಿಯೇ ಶಿಕ್ಷಣ ಕೊಡಿಸುವ ಜೊತೆ ಜೊತೆಗೆ ಕ್ರೀಡೆ ಸಾಂಸ್ಕ್ರತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಪೋಷಕರು ಹೆಚ್ಚು ಆಶಕ್ತಿ ವಹಿಸಿ, ವಿಶೇಷವಾಗಿ ಟೇಕ್ವಾಂಡೋ‌ ಕಲೆಯನ್ನು ಹೆಣ್ಣು‌ ಮಕ್ಕಳು ಕರಗತ ಮಾಡಿಕೊಂಡರೆ ತಮ್ಮನ್ನು ತಾವೇ ರಕ್ಷಣೆ ಮಾಡಿಕೊಳ್ಳಲು ಸಹಾಯವಾಗಲಿದೆ. ಇಂತಹ ಕ್ರೀಡೆಗಳಲ್ಲಿ ಮಕ್ಕಳು ಹೆಚ್ಚು ಹೆಚ್ಚು ಭಾಗವಹಿಸಿ ರಾಜ್ಯ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಯನ್ನು ಪಡೆಯಿರಿ. ಇದರಿಂದ ಸ್ಪರ್ಧಾ ಮನೋಭಾವ ಸಹ ವೃದ್ಧಿಯಾಗಲಿದೆ ಎಂದು ಚಿನ್ನ, ಬೆಳ್ಳಿ ಪದಕ ವಿಜೇತ ಕ್ರೀಡಾ ಪಟುಗಳಿಗೆ ಶುಭ‌ಕೋರಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ ಮಾತನಾಡಿ, ಟೇಕ್ವಾಂಡೋ ಸಾಹಸ ಕ್ರೀಡೆಯಾಗಿದ್ದು, ಮಕ್ಕಳು ರಾಜ್ಯ ಮಟ್ಟದಲ್ಲಿ ಭಾಗವಹಿಸಿ ಗೆಲುವು ಸಾಧಿಸಿರುವುದು ನಮಗೆ ಹೆಮ್ಮೆಯ ವಿಷಯ. ಮತ್ತಷ್ಟು ಪ್ರಶಸ್ತಿಗಳನ್ನು ಪಡೆದು ರಾಮನಗರಕ್ಕೆ ಕೀರ್ತಿ ತನ್ನಿ ಎಂದು ಹಾರೈಸಿದರು.

ಗೌತಮ್ ಡೆವಲಪರ್ಸ್ ನ‌ ಮಹೇಶ್, ನಗರಸಭಾ ಸದಸ್ಯೆ ಮಹಾಲಕ್ಷ್ಮಿ ಗೂಳೀಗೌಡ, ಸಮಾಜ ಸೇವಕ ನಾಗೇಶ್, ಟೇಕ್ವಾಂಡೋ ಸಂಸ್ಥೆಯ ಕಾರ್ಯದರ್ಶಿ ಗೋವಿಂದು ಸೇರಿದಂತೆ ಟೇಕ್ವಾಂಡೋ ಕ್ರೀಡಾ ಪಟುಗಳು, ಪೋಷಕರು ಇದ್ದರು. ಕಾರ್ಯಕ್ರಮದಲ್ಲಿ ಮಕ್ಕಳು ಭರತನಾಟ್ಯ ಸೇರಿದಂತೆ ಸಾಂಸ್ಕ್ರತಿಕ ಕಾರ್ಯಕ್ರಮ, ಟೇಕ್ವಾಂಡೋ ಕ್ರೀಡಾ ಪ್ರದರ್ಶನಗಳನ್ನು ನಡೆಸಿಕೊಟ್ಟರು.

ಚಿನ್ನದ ಪದಕ ವಿಜೇತರು :

ಜಿ.ಇಶಾನ್, ಎಂ.ಧ್ರುವಕುಮಾರ್, ಪಿ.ಹರ್ಷಿತಾ, ಎಂ.ಪೂರ್ವಿಕಾ, ನಯನ, ಮೋಹಿಷಾ ಪರಿನಿತಾ, ಚರಿತ್, ಮಲ್ಲೇಶ್, ಹೇಮಕೃಷ್ಣ, ವೀರೇಂದ್ರ, ಪೈಜಲ್ ಹುಸೇನ್, ಶಾನ್ವಿ. ಬೆಳ್ಳಿ ಪದಕ ವಿಜೇತರು : ದೀಪ್ತಿ, ಪೂರ್ವಿಕಾ, ವನ್ಸಿ, ವಿನುತಾ, ಉತ್ಕರ್ಷ್ ಗೌಡ, ಎಸ್.ವಂಶವಿಶ್ವಕರ್ಮ, ಪೈಜ್‌ಹುಸೇನ್, ಧ್ರುವಕೃಷ್ಣ, ಮಿಹಿತ್, ಮಹೇಶ, ನಾಗೇಶ.

ಕಂಚಿನ ಪದಕ ವಿಜೇತರು : ಮನಿಷ್, ಉತ್ಸವ್, ಚಿರಂಜೀವಿ, ಮಹಲಿಂಗಯ್ಯ, ಧ್ರುವರಾವ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆ.ಎಸ್.ಪುಟ್ಟಣ್ಣಯ್ಯ ಆದರ್ಶ ಎಲ್ಲಾ ಕಾಲಕ್ಕೂ ಮಾದರಿ, ಅನುಸರಣೀಯ: ನಾಗತಿಹಳ್ಳಿ ಚಂದ್ರಶೇಖರ್
ಮೇಲುಕೋಟೆ: ಶ್ರೀದೇವಿ ಭೂದೇವಿಯರಿಗೆ ನೂರ್ ತಡಾ ಉತ್ಸವ