ಐರವಳ್ಳಿ ಸೊಸೈಟಿ ಮಾಲೀಕನಿಗೆ ತಹಸೀಲ್ದಾರ್‌ ಎಚ್ಚರಿಕೆ

KannadaprabhaNewsNetwork |  
Published : May 29, 2025, 01:16 AM IST
28ಎಚ್‌ಎಸ್್‌ಎನ್18 : ಪಡಿತರ ದಾಸ್ತಾನು  ಅಕ್ಕಿ ವಿತರಣೆ ವಿಳಂಭಕ್ಕೆ  ಗ್ರಾಮಸ್ಥರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ   ಸ್ಥಳಕ್ಕೆ ತಹಶಿಲ್ದಾರ್ ಎಂ ಮಮತಾ ಭೇಟಿ  ನೀಡಿ  ಪರಿಶೀಲಿಸಿ   ಆಹಾರ ವಿತರಣೆ ದಾಸ್ತಾನು ಮಾಡುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದರು. | Kannada Prabha

ಸಾರಾಂಶ

ಪಡಿತರ ದಾಸ್ತಾನು ಅಕ್ಕಿ ವಿತರಣೆ ವಿಳಂಬಕ್ಕೆ ಗ್ರಾಮಸ್ಥರಿಂದ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತಹಸೀಲ್ದಾರ್‌ ಎಂ ಮಮತಾ ಭೇಟಿ ನೀಡಿ, ಪರಿಶೀಲಿಸಿ ಆಹಾರ ವಿತರಣೆ ದಾಸ್ತಾನು ಮಾಡುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದರು. ತಾಲೂಕಿನ ಐರವಳ್ಳಿ ಗ್ರಾಮದಲ್ಲಿದಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಸರ್ಕಾರ ನಿಗದಿಪಡಿಸಿದ ಸಮಯದಲ್ಲಿ ಬಾಗಿಲು ತೆಗೆಯದೆ ನ್ಯಾಯಬೆಲೆ ಅಂಗಡಿ ಮಾಲೀಕ ಶಾಂತಕುಮಾರ್ ವಿತರಿಸಿರುವ ಅಕ್ಕಿ ಸರಿಯಾದ ಸಮಯಕ್ಕೆ ಕೊಡದೆ ವಿಳಂಬ ಮಾಡುತ್ತಿದ್ದು, ಇದರಿಂದ ಗ್ರಾಮೀಣ ಭಾಗದ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಅಕ್ಕಿ ಇದ್ದರೂ ಕೊಡದೆ ಸತಾಯಿಸುತ್ತಿದ್ದಾರೆ ಎಂದು ಐರವಳ್ಳಿ ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಪಡಿತರ ದಾಸ್ತಾನು ಅಕ್ಕಿ ವಿತರಣೆ ವಿಳಂಬಕ್ಕೆ ಗ್ರಾಮಸ್ಥರಿಂದ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತಹಸೀಲ್ದಾರ್‌ ಎಂ ಮಮತಾ ಭೇಟಿ ನೀಡಿ, ಪರಿಶೀಲಿಸಿ ಆಹಾರ ವಿತರಣೆ ದಾಸ್ತಾನು ಮಾಡುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದರು.

ತಾಲೂಕಿನ ಐರವಳ್ಳಿ ಗ್ರಾಮದಲ್ಲಿದಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಸರ್ಕಾರ ನಿಗದಿಪಡಿಸಿದ ಸಮಯದಲ್ಲಿ ಬಾಗಿಲು ತೆಗೆಯದೆ ನ್ಯಾಯಬೆಲೆ ಅಂಗಡಿ ಮಾಲೀಕ ಶಾಂತಕುಮಾರ್ ವಿತರಿಸಿರುವ ಅಕ್ಕಿ ಸರಿಯಾದ ಸಮಯಕ್ಕೆ ಕೊಡದೆ ವಿಳಂಬ ಮಾಡುತ್ತಿದ್ದು, ಇದರಿಂದ ಗ್ರಾಮೀಣ ಭಾಗದ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಅಕ್ಕಿ ಇದ್ದರೂ ಕೊಡದೆ ಸತಾಯಿಸುತ್ತಿದ್ದಾರೆ ಎಂದು ಐರವಳ್ಳಿ ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು .ಈ ವೇಳೆ ತಹಸೀಲ್ದಾರ್ ಎಂ ಮಮತಾ ಸ್ಥಳಕ್ಕೆ ಆಗಮಿಸಿ ನ್ಯಾಯಬೆಲೆ ಅಂಗಡಿ ಮಾಲೀಕರಾದ ಶಾಂತಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಸುತ್ತಮುತ್ತಲಿನ ಗ್ರಾಮಸ್ಥರು ತಮ್ಮ ದಾಸ್ತಾನು ಪಡೆಯಲು ತಮ್ಮ ಕೆಲಸ ಕಾರ್ಯ ಬಿಟ್ಟು ಇಲ್ಲಿಗೆ ಬರವೇಕು. ಸಾಕಷ್ಟು ದೂರದಿಂದ ಬಂದಾಗ ನೀವು ಅಕ್ಕಿ ಅಥವಾ ರೇಷನ್ ಇಲ್ಲ ಎಂದು ವಾಪಸ್ಸು ಕಳಿಸಿದಾಗ ಅವರ ಸಮಯ, ಕೆಲಸ ಆ ದಿನ ವ್ಯರ್ಥವಾಗುತ್ತದೆ. ಹಾಗು ನೀವು ಸೊಸೈಟಿ ಬಾಗಿಲು ಸರಿಯಾದ ಸಮಯಕ್ಕೆ ತೆಗೆಯುತ್ತಿಲ್ಲ ಮತ್ತು ಅಕ್ಕಿ ವಿತರಿಸುತ್ತಿಲ್ಲ ಎಂದು ನಮಗೆ ದೂರು ಬಂದಿದ್ದು ವೀಕ್ಷಣೆ ಸಮಯದಲ್ಲಿ ಬೆಳಗ್ಗೆ ೧೦-೩೦ರಾದರೂ ನೀವು ಇನ್ನು ಬಾಗಿಲು ತೆಗೆದಿಲ್ಲ‌. ನಂತರ ನಿಮಗೆ ನಾವು ಬಂದ ಬಗ್ಗೆ ಮಾಹಿತಿ ತಿಳಿದು ಬಾಗಿಲು ತೆಗೆದಿದ್ದು ನಮ್ಮ ಗಮನಕ್ಕೆ ಬಂದಿದೆ. ಹೀಗೆ ಮಾಡಿದರೆ ನಿಮ್ಮ ಮೇಲೆ ಮೇಲಧಿಕಾರಿಗಳಿಗೆ ದೂರು ಸಲ್ಲಿಸಿ ನಿಮ್ಮ ಮೇಲೆ ಸರಿಯಾದ ಕ್ರಮ ಕೈಗೊಳ್ಳಬೇಕಾಗುತ್ತದೆ. ಹಾಗೂ ಬಂದವರಿಗೆ ಅಕ್ಕಿ ಆಹಾರ ದಾಸ್ತಾನು ಯಾವಾಗ ಬರುತ್ತದೆ ಎಂದು ಮಾಹಿತಿ ನೀಡಬೇಕು. ಗ್ರಾಹಕರ ಜೊತೆ ಸಂಯಮದಿಂದ ವರ್ತಿಸಬೇಕು ಮತ್ತೆ ಯಾವುದೇ ರೀತಿಯಲ್ಲಿ ದೂರು ಬರಬರಾದು ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಆರ್‌ಐ ನಟರಾಜ್, ಗ್ರಾಮ ಸಹಾಯಕ ಬಸಪ್ಪ, ಸಂತೋಷ್, ನಾಗರಾಜ್ ಇತರರು ಹಾಜರಿದ್ದರು.

PREV

Recommended Stories

ದಸರಾ ಹಬ್ಬ ಅದ್ಧೂರಿ ಆಚರಣೆಗೆ ಎಲ್ಲರೂ ಸಹಕರಿಸಿ: ಏಗಪ್ಪ ಸವದಿ
ಬಿಡಿಸಿಸಿ ಬ್ಯಾಂಕ್‌ ಹಿತರಕ್ಷಣೆಗೆ ನಾವು ಬದ್ಧ