ಮಾಗಡಿ: ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಅಧ್ಯಕ್ಷತೆಯಲ್ಲಿ ಬಮೂಲ್ ಆಡಳಿತ ಮಂಡಳಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ರೈತರಿಗೆ ಯುಗಾದಿ ಹಬ್ಬದಂದು ಲೀಟರ್ ಹಾಲಿಗೆ 1 ರು. ಹೆಚ್ಚಳ ಮಾಡಲಾಗಿದೆ ಎಂದು ಬಮೂಲ್ ನಿರ್ದೇಶಕ ಎಚ್.ಎನ್.ಅಶೋಕ್ ಹೇಳಿದರು.
ಚಂದುರಾಯನಹಳ್ಳಿ ಡೈರಿ ಉಪಾಧ್ಯಕ್ಷೆ ಪಾರ್ವತಮ್ಮ ವಾರ್ಷಿಕ 50 ಸಾವಿರ ಲೀಟರ್ ಹಾಲು ಹಾಕಿ, ಒಂದು ರೂಪಾಯಿ ಪ್ರೋತ್ಸಾಹ ಧನದಡಿ 50 ಸಾವಿರ ಪ್ರೋತ್ಸಾಹ ಧನ ಸಿಕ್ಕಿದೆ. ಇವರಿಗೆ ಹಾಲು ಮಾರಾಟದಲ್ಲಿ ವಾರ್ಷಿಕ ₹ 91 ಲಕ್ಷ ಬಂದಿದ್ದು ಈ ಮಹಿಳೆಯ ಸಾಧನೆ ಯುವಕರಿಗೆ ಮಾದರಿಯಾಗಿದ್ದಾರೆಂದು ಹೇಳಿದರು.
ಇದೇ ವೇಳೇ ಅತಿ ಹೆಚ್ಚು ಹಾಲು ಹಾಕಿದ ರೈತರಿಗೆ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಹಾಲು ಉತ್ಪಾದಕರ ಸಂಘದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ನಾರಾಯಣ, ಬಮೂಲ್ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಎಂ.ಕೆ.ಧನಂಜಯ, ಜುಟ್ಟನಹಳ್ಳಿ ವಿಎಸ್ಎಸ್ ಎನ್ ಅಧ್ಯಕ್ಷ ಜೆ.ಪಿ.ಚಂದ್ರೇಗೌಡ, ಟಿಎಪಿಎಂಎಸ್ ಅಧ್ಯಕ್ಷ ಶಿವಪ್ರಸಾದ್, ಉಪಾಧ್ಯಕ್ಷ ರಾಜಣ್ಣ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ರವೀಶ್, ಕಲ್ಯ ಸೊಸೈಟಿ ಅಧ್ಯಕ್ಷ ಹನುಮಂತೇಗೌಡ, ಕೋರಮಂಗಲ ಶ್ರೀನಿವಾಸ್, ಬೆಂಗಳೂರು ಒಕ್ಕೂಟದ ಪ್ರಧಾನ ವ್ಯವಸ್ಥಾಪಕ ಡಾ. ಕೆ.ಸಿ.ಶ್ರೀಧರ್, ವಿಸ್ತರಣಾಧಿಕಾರಿ ಮಂಜುಳಾ, ಕೆವಿಕೆ ಹಿರಿಯ ವಿಜ್ಞಾನಿ ಡಾ.ಶ್ವೇತ, ಡೈರಿ ಸಿಇಒ ಸಿ.ವಿ.ರಾಜಣ್ಣ, ತಾಪಂ ಮಾಜಿ ಅಧ್ಯಕ್ಷ ಚಿಕ್ಕಣ್ಣ ಇತರರು ಪಾಲ್ಗೊಂಡಿದ್ದರು.
ಮಾಗಡಿ ತಾಲೂಕಿನ ಚಂದೂರಾಯಹಳ್ಳಿ ಡೇರಿಯ ಬೆಳ್ಳಿಹಬ್ಬದ ಪ್ರಯುಕ್ತ ಸಂಘದ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಎಚ್.ಎನ್.ಅಶೋಕ್ ಸನ್ಮಾನಿಸಿದರು.