-ವಾಗಣಗೇರಾ: ನೂತನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ ಸುರಪುರ
ತಾಲೂಕಿನ ವಾಗಣಗೇರಾದಲ್ಲಿ ನಡೆದ ನೂತನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ ಕಾರ್ಯಕ್ರಮವನ್ನು ಶಾಸಕರ ಸಹೋದರ, ಕಾಂಗ್ರೆಸ್ ಯುವ ಮುಖಂಡ ರಾಜಾ ಸಂತೋಷ ನಾಯಕ ಅವರು ನೆರವೇರಿಸಿದರು.ಈ ವೇಳೆ ಮಾತನಾಡಿದ ಅವರು, ಸಹಕಾರ ಸಂಘಗಳು ಗ್ರಾಮೀಣ ಭಾಗದ ಉಸಿರಾಗಿದ್ದು, ಅವುಗಳನ್ನು ಉಳಿಸಿ, ಬೆಳೆಸಲು ನಾವೆಲ್ಲರೂ ಜವಾಬ್ದಾರಿಯಿಂದ ಪ್ರಯತ್ನಿಸಬೇಕು ಎಂದರು.
ಕಲಬುರಗಿ-ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಹುಣಸಗಿಯ ಬಾಪುಗೌಡ ಮಾತನಾಡಿ, ನೂತನ ಸಂಘಕ್ಕೆ ಬೇಕಾದ ಸೌಲಭ್ಯಗಳನ್ನು ಜಿಲ್ಲಾ ಡಿಸಿಸಿ ಬ್ಯಾಂಕಿನಿಂದ ಒದಗಿಸಲಾಗುವುದು. ಸಾಲ ಪಡೆದ ರೈತರು ಸಮಯಕ್ಕೆ ಸರಿಯಾಗಿ ಸಾಲ ಮರು ಪಾವತಿಸಬೇಕು. ಇದರಿಂದ ಬೇರೆಯವರಿಗೆ ಹಣಕಾಸಿನ ನೆರವು ದೊರೆತು ಸಹಕಾರ ತತ್ವ ಸಾರ್ಥಕವಾಗುತ್ತದೆ ಎಂದರು.
ಪಿಕೆಪಿಎಸ್ ನೂತನ ಅಧ್ಯಕ್ಷ ವಕೀಲಪ್ಪಗೌಡ, ಉಪಾಧ್ಯಕ್ಷ ದೌಲ್ ಸಾಬ್ ಬೊಮ್ಮನಹಳ್ಳಿ, ಕಾರ್ಯದರ್ಶಿ ಬಸನಗೌಡ ಬಿ. ಪಾಟೀಲ್, ಸದಸ್ಯರಾದ ಬೈಲಪ್ಪಗೌಡ, ಆಂಜನೇಯ ಪಾಟೀಲ್, ಶರಬಯ್ಯ ಸ್ವಾಮಿ, ಮಲ್ಕಪ್ಪ ಪೂಜಾರಿ, ಶ್ರೀನಿವಾಸ್ ಪಾಟೀಲ್, ನಿಂಗಪ್ಪ, ಸಿದ್ದಣ್ಣ ಸಾಹುಕಾರ, ಹಣಮಂತ, ನ್ಯಾನೇಗೌಡ, ಭೀಮಣ್ಣ ಸಿಂಧೆ, ಮೌನೇಶ್ ಇದ್ದರು.
---000---