ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಕೋಟೆಕಲ್ ದ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಪಟ್ಟಣದ ಚೌ ಬಜಾರದಲ್ಲಿ ಮಂಗಳವಾರ ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ಉದ್ಘಾಟನೆ ಹಾಗೂ ಕಮತಗಿಯ ಮುಖ್ಯ ರಸ್ತೆಯಲ್ಲಿ ನಬಾರ್ಡ್ ಯೋಜನೆಯಡಿ ನಿರ್ಮಾಣಗೊಂಡಿರುವ ಕೈಮಗ್ಗ ನೇಕಾರರ ಉತ್ಪನ್ನಗಳ ಉತ್ಪಾದನಾ ಕೇಂದ್ರದಲ್ಲಿ ನೇಕಾರರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡುವ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕೋಟೆಕಲ್ ಪಿಕೆಪಿಎಸ್ ದಿಂದ ಹಮ್ಮಿಕೊಂಡಿರುವ ಎಲ್ಲ ಯೋಜನೆಗಳಿಗೆ ನನ್ನ ಬೆಂಬಲವಿದೆ. ಕೇಂದ್ರದ ವಿವಿಧ ಯೋಜನೆಗಳನ್ನು ಈ ಸಂಘಕ್ಕೆ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಹನುಮಂತ ಮಾವಿನಮರದ ಅವರಿಗೆ ಜನಪರ ಕಾಳಜಿ ಇದೆ. ಇಲ್ಲಿನ ನೇಕಾರರ ಸಮಸ್ಯೆಗಳು ಸಾಕಷ್ಟಿದ್ದು, ಅವುಗಳ ನಿವಾರಣೆಗೆ ನಮ್ಮ ಸರ್ಕಾರ ವಿವಿಧ ಯೋಜನೆ ರೂಪಿಸಿದೆ. ಸಹಕಾರ ಸಂಘಗಳು ಅವುಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಮಾರಗೌಡ ಜನಾಲಿ ಮಾತನಾಡಿ, ಕೋಟೆಕಲ್ ಸಂಘದ ಉತ್ತರೋತ್ತರ ಅಭಿವೃದ್ಧಿಗೆ ಬಿಡಿಸಿಸಿ ಬ್ಯಾಂಕ್ ನಿರಂತರ ಸಹಕಾರ ನೀಡಲಿದೆ ಎಂದರು.
ಮುರುಘಾಮಠದ ಕಾಶಿನಾಥ ಸ್ವಾಮಿಗಳು, ಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠದ ಶ್ರೀ ಜಗದ್ಗುರು ಗುರುಸಿದ್ಧ ಪಟ್ಟದಾರ್ಯ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಹಕಾರ ಸಂಘಗಳ ಅಪರ ನಿಬಂಧಕ ಎಸ್.ಎನ್. ನೀಲಪ್ಪನವರ, ಡಿಡಿಎಂ ನಬಾರ್ಡ ನ ಮಂಜುನಾಥ ರೆಡ್ಡಿ ಯೋಜನೆಗಳ ಕುರಿತು ಮತ್ತು ಕೌಶಲ್ಯ ಅಭಿವೃದ್ಧಿ ತರಬೇತಿಯ ಮಹತ್ವ ಕುರಿತು ಮಾಹಿತಿ ನೀಡಿದರು.
ಸಂಘದ ನಿರ್ದೇಶಕ ಮಂಡಳಿಯ ಪದಾಧಿಕಾರಿಗಳಾದ ಸಂಗಪ್ಪ ಹಡಪದ, ಮಾಗುಂಡಪ್ಪ ಸುಂಕದ, ನಾಗಪ್ಪ ಮುರಗೋಡ, ಸಂತೋಷ ತಿಪ್ಪಾ, ದ್ಯಾಮಣ್ಣ ಗದ್ದನಕೇರಿ, ಯಮನಪ್ಪ ರಾಠೋಡ ಹಾಗೂ ಶೇಖರ ರಾಠೋಡ, ಸಂಗಮೇಶ ಚಿಕ್ಕಾಡಿ, ಸಚಿನ್ ರಾಂಪೂರ, ಸಂತೋಷ ನಾಯನೇಗಲಿ ಹಾಗೂ ಇತರರು ಇದ್ದರು.