ಆಪರೇಷನ್ ಸಿಂಧೂರ ಯಶಸ್ಸಿಗೆ ನಗರದಲ್ಲಿ ತಿರಂಗ ಯಾತ್ರೆ

KannadaprabhaNewsNetwork |  
Published : May 29, 2025, 01:46 AM IST
ಎಚ್‌28.5-ಡಿಎನ್‌ಡಿ 4: ಆಪರೇಷನ್ ಸಿಂಧೂರ  ಯಶಸ್ಸಿಗೆ  ನಗರದಲ್ಲಿ ತಿರಂಗ ಯಾತ್ರೆ ಮಾಡುತ್ತಿರುವ ಚಿತ್ರ. | Kannada Prabha

ಸಾರಾಂಶ

ತ್ರಿವರ್ಣ ಧ್ವಜ ಹಿಡಿದ ಸಾರ್ವಜನಿಕರು ಭಾರತ್ ಮಾತಾ ಕಿ ಜೈ ಘೋಷಣೆ-ಗಳನ್ನು ಕೂಗುತ್ತಾ ಭಾರತೀಯ ಸೈನಿಕರ ಉತ್ಸಾಹ ಹೆಚ್ಚಿಸಿದರು.

ದಾಂಡೇಲಿ: ಆಪರೇಷನ್ ಸಿಂದೂರ ಅಡಿಯಲ್ಲಿ ಭಾರತೀಯ ಸೇನೆ ಪಾಕಿಸ್ತಾನದ ವಿರುದ್ಧ ಯಶಸ್ವಿ ಕಾರ್ಯಾಚರಣೆ ನಡೆಸಿ ವಿಜಯ ಸಾಧಿಸಿದ ಹಿನ್ನೆಲೆಯಲ್ಲಿ ಸೇನೆಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಭಾರತೀಯ ಜನತಾ ಪಕ್ಷ ದಾಂಡೇಲಿ ಮಂಡಲದ ನೇತೃತ್ವದಲ್ಲಿ ಮಾಜಿ ಸೈನಿಕರು ಮತ್ತು ಸಾರ್ವಜನಿಕರ ಸಹಭಾಗಿತ್ವದಲ್ಲಿ ತಿರಂಗ ಯಾತ್ರೆಗೆ ಬುಧವಾರ ಸಂಜೆ ಸೋಮಾನಿ ವೃತ್ತದಲ್ಲಿ ಚಾಲನೆ ನೀಡಲಾಯಿತು.

ತ್ರಿವರ್ಣ ಧ್ವಜ ಹಿಡಿದ ಸಾರ್ವಜನಿಕರು ಭಾರತ್ ಮಾತಾ ಕಿ ಜೈ ಘೋಷಣೆ-ಗಳನ್ನು ಕೂಗುತ್ತಾ ಭಾರತೀಯ ಸೈನಿಕರ ಉತ್ಸಾಹ ಹೆಚ್ಚಿಸಿದರು.

ತಿರಂಗ ಯಾತ್ರೆಯು ಜೆ.ಎನ್ ರಸ್ತೆಯ ಮಾರ್ಗವಾಗಿ ಪಟೇಲ್ ವೃತ್ತದ ಮುಲಕ ಚನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಸುನೀಲ ಹೆಗಡೆ ಆಪರೇಷನ್, ಸಿಂದೂರ್ ಯಶಸ್ವಿಗೆ ಸಂಬಂಧಿಸಿದಂತೆ ಭಾರತೀಯ ಸೈನಿಕರಿಗೆ ಬೆಂಬಲ ನೀಡುವ ಉದ್ದೇಶದಿಂದ ಪಕ್ಷಾತೀತವಾಗಿ ತಿರಂಗಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಭಾರತೀಯ ಸೇನೆಯ ಧೀರ ಯೋಧರು ನಡೆಸಿದ ಆಪರೇಷನ್‌ ಸಿಂದೂರ ಯಶಸ್ವಿ ಕಾರ್ಯಾಚರಣೆಯ ಐತಿಹಾಸಿಕ ಘಟನೆಯನ್ನು ವಿಜೃಂಭಿಸಿ, ವೀರ ಯೋಧರಿಗೆ ಗೌರವ ನಮನ ಸಲ್ಲಿಸುವ ಕುರಿತು ಪಕ್ಷಾತೀತವಾಗಿ ದೇಶಾದ್ಯಂತ ತಿರಂಗಾ ಯಾತ್ರೆ ಮೂಲಕ ಗೌರವ ಸಲ್ಲಿಸಲಾಗುತ್ತದೆ. ಎಂದರು.

ಈ ಸಂದರ್ಭದಲ್ಲಿ ಮಿಥುನ್ ನಾಯ್ಕ, ಸಾವಿತ್ರಿ ಬಡಿಗೇರ, ಜಯಶ್ರೀ ನೇಮತಿ, ಗೀತಾ ಶಿಕಾರಿಪುರ, ನುಮಂತ ಕಾರಗಿ, ಸಂತೋಷ ಬುಲಬಲೇ, ವಿಷ್ಣು ವಾಜವೇ, ವಿಜಯ ಕೋಲೆಕರ, ಪ್ರಶಾಂತ ಬಸುತೇಕರ,ಅಪ್ಪಾರಾವ್, ಲಕ್ಷ್ಮಣ ಜಾಧವ, ಪುನೀತ್ ನಾಯಕ,ಮಂಜು ಶೆಟ್ಟಿ ಸೇರಿದಂತೆ ತಿರಂಗಾ ಯಾತ್ರೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಮತ್ತು ವಿವಿಧ ಪಕ್ಷಗಳ ಕಾರ್ಯಕರ್ತರು ಉಪಸ್ಥಿತರಿದ್ದು ಯಾತ್ರೆಯ ಶೋಭೆಯನ್ನು ಹೆಚ್ಚಿಸಿದ್ದಾರೆ.

ಆಪರೇಷನ್ ಸಿಂದೂರ ಯಶಸ್ಸಿಗೆ ನಗರದಲ್ಲಿ ತಿರಂಗ ಯಾತ್ರೆ ಆಯೋಜಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆ್ಯಸಿಡ್‌ ದಾಳಿ ಸಂತ್ರಸ್ತರಿಗೆ ಮಾಸಿಕ 50 ಸಾವಿರ ಪಿಂಚಣಿ : ಪರಂ ಭರವಸೆ
5 ಪಾಲಿಕೆಗೆ ಜಿಎಸ್‌ಟಿಯಲ್ಲಿ ಪಾಲು ಕೊಡಲು ಆಯೋಗ ಶಿಫಾರಸು