ಯೋಜನೆಗಳ ಸದುಪಯೋಗ ಪಡೆದು ಆರ್ಥಿಕ ಸದೃಢರಾಗಿ

KannadaprabhaNewsNetwork |  
Published : Jul 11, 2024, 01:33 AM IST
ಯಾದಗಿರಿ ನಗರದ ಆಕಾಶ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ನಡೆದ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಹುಬ್ಬಳ್ಳಿ ವಿಭಾಗೀಯ ಸಹಾಯಕ ನಿರ್ದೇಶಕರಾದ ಬಿ.ಎಸ್. ಜಾವಳಗಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಪ್ರಜೆಗಳ ಆರ್ಥಿಕ ಸಬಲತೆಯಿಂದಲೇ ಭಾರತವು ಮುಂದುವರಿದ ರಾಷ್ಟ್ರವಾಗಿದೆ. ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರತಿಯೊಬ್ಬರೂ ಸಹ ಸೂಕ್ತ ಮಾರ್ಗದರ್ಶನ ಮತ್ತು ಯೋಜನೆಗಳ ಸದುಪಯೋಗ ಪಡೆದು ಆರ್ಥಿಕ ಸದೃಢರಾಗಬೇಕು ಎಂದು ಹುಬ್ಬಳ್ಳಿ ವಿಭಾಗೀಯ ಸಹಾಯಕ ನಿರ್ದೇಶಕರಾದ ಬಿ.ಎಸ್. ಜಾವಳಗಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

- ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಜಾವಳಗಿ ಸಲಹೆ

----

ಕನ್ನಡಪ್ರಭ ವಾರ್ತೆ ಯಾದಗಿರಿ

ಪ್ರಜೆಗಳ ಆರ್ಥಿಕ ಸಬಲತೆಯಿಂದಲೇ ಭಾರತವು ಮುಂದುವರಿದ ರಾಷ್ಟ್ರವಾಗಿದೆ. ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರತಿಯೊಬ್ಬರೂ ಸಹ ಸೂಕ್ತ ಮಾರ್ಗದರ್ಶನ ಮತ್ತು ಯೋಜನೆಗಳ ಸದುಪಯೋಗ ಪಡೆದು ಆರ್ಥಿಕ ಸದೃಢರಾಗಬೇಕು ಎಂದು ಹುಬ್ಬಳ್ಳಿ ವಿಭಾಗೀಯ ಸಹಾಯಕ ನಿರ್ದೇಶಕರಾದ ಬಿ.ಎಸ್. ಜಾವಳಗಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ನಗರದ ಆಕಾಶ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ, ಮೈಕ್ರೋ ಸ್ಮಾಲ್ ಅಂಡ್ ಮಿಡಿಯಮ್ ಎಂಟರ್ಪ್ರೆಸಸ್ ವತಿಯಿಂದ ನಡೆದ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವೇಗವಾಗಿ ಬದಲಾಗುತ್ತಿರುವ ಜಗತ್ತಿನ ನಡುವೆ ಜಾಗತಿಕ ಮಟ್ಟದಲ್ಲಿ ಭಾರತ ಮಹತ್ತರ ಆರ್ಥಿಕ ಸ್ಥಾನವನ್ನು ಹೊಂದುತ್ತಿದೆ ಎಂದರು.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಆರ್ಥಿಕ ಸಾಕ್ಷರತಾ ಕೇಂದ್ರದ ತರಬೇತಿದಾರ ಸಂಗಪ್ಪ ವಾಲಿ ಮಾತನಾಡಿ, ಆರ್ಥಿಕ ದೃಷ್ಟಿಯಿಂದ ಬಂಡವಾಳವನ್ನು ಪಡೆಯುವ ಮೂಲಕ ಉದ್ಧಿಮೆಗಳನ್ನು ಪ್ರಾರಂಭಿಸಲು ಅವಶ್ಯವಿರುವ ಸಾಲ ಸೌಲಭ್ಯಗಳ ಕುರಿತಾಗಿ ಹಾಗೂ ಕೇಂದ್ರ ಸರ್ಕಾರ ರೂಪಿಸಿರುವ ಜೀವ ವಿಮೆಗಳ ಕುರಿತು ಪರಿಚಯ ಮಾಡಿಕೊಟ್ಟರು. ಸೈಬರ್ ಕ್ರೈಮ್‌ಗಳು ಅಧಿಕವಾಗುತ್ತಿರುವ ಇಂದಿನ ದಿನಗಳಲ್ಲಿ ಎಲ್ಲಾ ಗ್ರಾಹಕರು ಅತ್ಯಂತ ಜಾಗರೂಕತೆಯಿಂದ ತಮ್ಮ ಬ್ಯಾಂಕಿಂಗ್ ವ್ಯವಹಾರಗಳನ್ನು ನಡೆಸುವುದು ಅವಶ್ಯವಾಗಿದೆ ಎಂದರು.

ವೇದಿಕೆಯಲ್ಲಿ ಹುಬ್ಬಳ್ಳಿ ವಿಭಾಗದ ಎಚ್.ಕೆ. ನಾಯಕ, ತಂಬಾಕು ನಿಷೇಧ ಜಾಗೃತಿಯ ಜಿಲ್ಲಾ ಆರೋಗ್ಯ ಇಲಾಖೆಯ ಮಹಾಲಕ್ಷ್ಮಿ ಸಜ್ಜನ್, ಶಶಿಕುಮಾರ, ಸತೀಶ ಕುಮಾರ ದುಪ್ಪಲ್ಲಿ, ಬನ್ನಪ್ಪ ಸಜ್ಜನ್, ಸಿಬ್ಬಂದಿ ಸಿದ್ದಮ್ಮ ಎಸ್. ದುಪ್ಪಲ್ಲಿ, ರೇಣುಕಾ ಸೇರಿದಂತೆ ಇತರರಿದ್ದರು. ನಿವೃತ್ತ ಶಿಕ್ಷಕ ಸಿದ್ರಾಮಪ್ಪ ದುಪ್ಪಲ್ಲಿ ವಂದಿಸಿದರು. ಉಪನ್ಯಾಸಕರಾದ ಗುರುಪ್ರಸಾದ್ ವೈದ್ಯ ನಿರೂಪಿಸಿದರು.

-----

10ವೈಡಿಆರ್1

ಯಾದಗಿರಿ ನಗರದ ಆಕಾಶ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ನಡೆದ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಹುಬ್ಬಳ್ಳಿ ವಿಭಾಗೀಯ ಸಹಾಯಕ ನಿರ್ದೇಶಕರಾದ ಬಿ.ಎಸ್. ಜಾವಳಗಿ ಉದ್ಘಾಟಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ