ಬ್ಯಾಡಗಿ: ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರದಂತೆ ನೋಡಿಕೊಳ್ಳುವ ಜತೆಗೆ ಹಗಲು ಹೊತ್ತಿನಲ್ಲಿ ಬೀದಿದೀಪಗಳು ಉರಿಯುತ್ತಿರುವುದು ಕಂಡುಬಂದಿದೆ. ಇಂತಹ ಬೇಜವಾಬ್ದಾರಿ ವರ್ತನೆಗೆ ಕಡಿವಾಣ ಹಾಕಬೇಕು ಎಂದು ಸದಸ್ಯ ಬಸವರಾಜ ಛತ್ರದ ಒತ್ತಾಯಿಸಿದರು.
ಕಸ ವಿಲೇವಾರಿ ತಲೆನೋವು:
ಸದಸ್ಯ ಈರಣ್ಣ ಬಣಕಾರ ಮಾತನಾಡಿ, ಪಟ್ಟಣದ ಜನರಿಗೆ ಎಷ್ಟೇ ಅರಿವು ಮೂಡಿಸಿದರೂ ಕಸ ವಿಲೇವಾರಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮನೆ ಮನೆ ಕಸ ಸಂಗ್ರಹಣೆ ಮಾಡಲು ವಾಹನ ಕಳುಹಿಸಿದರೂ ಹಸಿಕಸ-ಒಣಕಸ ಪ್ರತ್ಯೇಕಿಸಲು ಹಿಂದೇಟು ಹಾಕುತ್ತಿದ್ದಾರೆ. ಸಂತೆ ಮೈದಾನದಲ್ಲಿ ಕೊಯಿಮತ್ತೂರ ಹಾಗೂ ಹೈದರಾಬಾದ್ ಮಾದರಿಯಲ್ಲಿ ತರಕಾರಿ ಕಸ ಸಂಸ್ಕರಣಾ ಘಟಕ ಸ್ಥಾಪಿಸಿದಲ್ಲಿ ಉತ್ತಮ ಎಂಬ ಸಲಹೆ ನೀಡಿದರು.ಅಂಗನವಾಡಿಗೆ ಶುದ್ಧ ಕುಡಿಯುವ ನೀರು: ಪುರಸಭೆ ಉಪಾಧ್ಯಕ್ಷ ಸುಭಾಸ ಮಾಳಗಿ ಮಾತನಾಡಿ, ಪಟ್ಟಣದಲ್ಲಿ 20ಕ್ಕೂ ಹೆಚ್ಚು ಅಂಗನವಾಡಿಗಳಿದ್ದು, ಪುಟ್ಟಪುಟ್ಟ ಮಕ್ಕಳ ಆರೋಗ್ಯ ದೃಷ್ಟಿಯಿಂದ ಪುರಸಭೆ ವತಿಯಿಂದ ಶುದ್ಧ ಕುಡಿಯುವ ನೀರಿನ ಫಿಲ್ಟರ್ (ವಾಟರ್ ಪ್ಯೂರಿಫೈಯರ್) ನೀಡುವುದು ಸೂಕ್ತ ಎಂದಾಗ ಎಲ್ಲ ಸದಸ್ಯರು ಒಮ್ಮತದಿಂದ ಒಪ್ಪಿಗೆ ಸೂಚಿಸಿದರು.
ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆಯಲ್ಲಿ ಮೋಸವಾಗಿದ್ದು, ಎಲ್ಲ ಸದಸ್ಯರು ತಮ್ಮ ವಾರ್ಡ್‌ನಲ್ಲಿ ಹಕ್ಕುಪತ್ರ ಪಡೆದ ಅನರ್ಹರನ್ನು ಪತ್ತೆ ಮಾಡಿ ಅವರೆಲ್ಲ ದಾಖಲೆ ಕ್ರೋಡೀಕರಣ ಪುರಸಭೆಗೆ ನೀಡಿ ಅರ್ಹರಿಗೆ ನಿವೇಶನ ಸಿಗುವಂತೆ ಮಾಡಬೇಕಿದೆ ಎಂದು ಪುರಸಭೆ ಸದಸ್ಯ ಬಸವರಾಜ ಛತ್ರದ ಪುರಸಭೆ ಹೇಳಿದರು.