ವಿಶೇಷ ಚೇತನ ಮಕ್ಕಳ ಬಗ್ಗೆ ಕಾಳಜಿ ವಹಿಸಿ: ಈರಣ್ಣ ಕರಿಗೌಡರ

KannadaprabhaNewsNetwork |  
Published : Nov 21, 2025, 03:00 AM IST
ಬಾದಾಮಿ  ತಾಲೂಕಾಮಟ್ಟದ ವಿಕಲಚೇತನ ಮಕ್ಕಳ ವೈದ್ಯಕೀಯ ತಪಾಸಣಾ ಶಿಬಿರವನ್ನು ಈರಣ್ಣ ಕರಿಗೌಡರ ಉದ್ಘಾಟಿಸಿದರು. | Kannada Prabha

ಸಾರಾಂಶ

ಪಾಲಕರು ವಿಶೇಷ ಚೇತನ ಮಕ್ಕಳ ಬಗ್ಗೆ ಕಾಳಜಿ ವಹಿಸಿ ತಪ್ಪದೇ ಶಾಲೆಗೆ ಕಳುಹಿಸಿ ಸರಕಾರದ ಸೌಲಭ್ಯಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬಾಗಲಕೋಟೆ-ವಿಜಯಪುರ ಅವಳಿ ಜಿಲ್ಲೆಯ ಹಾಲು ಒಕ್ಕೂಟದ ಅಧ್ಯಕ್ಷ ಈರಣ್ಣ ಕರಿಗೌಡರ ಹೇಳಿದರು.

ಕನ್ನಡಪ್ರಭ ವಾರ್ತೆ ಬಾದಾಮಿ

ಪಾಲಕರು ವಿಶೇಷ ಚೇತನ ಮಕ್ಕಳ ಬಗ್ಗೆ ಕಾಳಜಿ ವಹಿಸಿ ತಪ್ಪದೇ ಶಾಲೆಗೆ ಕಳುಹಿಸಿ ಸರಕಾರದ ಸೌಲಭ್ಯಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬಾಗಲಕೋಟೆ-ವಿಜಯಪುರ ಅವಳಿ ಜಿಲ್ಲೆಯ ಹಾಲು ಒಕ್ಕೂಟದ ಅಧ್ಯಕ್ಷ ಈರಣ್ಣ ಕರಿಗೌಡರ ಹೇಳಿದರು.

ಪಟ್ಟಣದ ದಿ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ಅಲಿಂಕೋ ಬೆಂಗಳೂರು ಇವರ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ವಿಕಲಚೇತನ ಮಕ್ಕಳ ವೈದ್ಯಕೀಯ ತಪಾಸಣಾ ಹಾಗೂ ಮೌಲ್ಯಂಕಣ ಶಿಬಿರ ಉದ್ಘಾಟಿಸಿ ಮಾತನಾಡಿ, ಸರಕಾರ ವಿಕಲಚೇತನ ಮಕ್ಕಳಿಗೆ ಇಂತಹ ಶಿಬಿರ ಆಯೋಜನೆ ಮಾಡಿ ಸಾಧನ ಸಲಕರಣೆಗಳನ್ನು ನೀಡುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಎಲುಬು ಕೀಲು ತಜ್ಞ ಡಾ.ವಿ.ಕೆ.ಶೆಟ್ಟರ, ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ(ಕಾರ್ಯಕ್ರಮ) ಸಿ.ಆರ್. ಓಣಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಕೇಶವ ವಾಮನ ಪೆಟ್ಲೂರ ಅಧ್ಯಕ್ಷತೆ ವಹಿಸಿ ಮಾತನಾಡಿ ವಿಕಲಚೇತನ ಮಕ್ಕಳು ಮೌಲ್ಯಂಕನದಲ್ಲಿ ಭಾಗವಹಿಸಿ ತಪಾಸಣೆ ಮಾಡಿಸಿಕೊಂಡು ಸಲಕರಣೆಗಳನ್ನು ಪಡೆದುಕೊಂಡು ಪ್ರತಿ ದಿನ ಶಾಲೆಗೆ ಬರಬೇಕು ಎಂದರು. ವೇದಿಕೆಯ ಮೇಲೆ ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ಎಚ್. ಹಳಗೇರಿ, ತಾಲೂಕಾ ಆರೋಗ್ಯಾಧಿಕಾರಿ ಡಾ.ಎಂ.ಬಿ. ಪಾಟೀಲ, ವೈದ್ಯರಾದ ಡಾ.ಜ್ಯೋತಿ ಹಳ್ಳಿಕೇರಿ, ಡಾ.ಸವಿತಾ ಕಡೆಮನಿ, ಡಾ.ರೇಖಾ ಗಾಣಿಗೇರ, ಡಾ.ಹೂವಪ್ಪ ಗಾಣಿಗೇರ, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ವೈ.ಎಸ್.ಗುಡ್ಡದ, ಪಿ.ಎಚ್.ಮಹಾಲಿಂಗಪೂರ ಹಾಜರಿದ್ದರು. ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ.ದೊಡ್ಡಪ್ಪನವರ ಪ್ರಾಸ್ಥಾವಿಕವಾಗಿ ಮಾತನಾಡಿ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ವಿಕಲಚೇತನರಿಗೆ ಸಿಗುತ್ತಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ವಿ.ಎಚ್.ಮಡಿವಾಳರ ಪ್ರಾರ್ಥನೆ ಹಾಡಿದರು. ಬಿ.ಎಫ್.ಕುಂಬಾರ ಸ್ವಾಗತಿಸಿದರು. ಎಸ್.ಎಸ್.ಚೌಕದ ಕಾರ್ಯಕ್ರಮವನ್ನು ನಿರೂಪಿಸಿದರು. ಎನ್.ಡಿ.ಬೀಳಗಿ ವಂದಿಸಿದರು. ವೈದ್ಯಕೀಯ ಶಿಬಿರದಲ್ಲಿ ತಾಲೂಕಿನ ವಿಕಲಚೇತನ ಮಕ್ಕಳು, ಪಾಲಕರು ಭಾಗವಹಿಸಿದ್ದರು. ಬಾದಾಮಿ ಹಾಗೂ ಗುಳೇದಗುಡ್ಡ ತಾಲೂಕಿನ ಒಟ್ಟು 161 ವಿಕಲಚೇತನರು ಭಾಗವಹಿಸಿ ತಪಾಸಣೆ ಮಾಡಿಸಿಕೊಂಡರು. ಇದರಲ್ಲಿ 133 ಜನ ಮಕ್ಕಳು ಅರ್ಹರಾದರು.

PREV

Recommended Stories

ಕೆಲವೇ ತಿಂಗಳಲಿ ರನ್ಯಾರಿಂದ 127 ಕೆ.ಜಿ. ಗೋಲ್ಡ್ ಸ್ಮಗ್ಲಿಂಗ್
ಅಧಿಕಾರ ಕೊಟ್ಟಿರುವುದು 5 ವರ್ಷಕ್ಕೆ: ಸಿಎಂ ಸಿದ್ದರಾಮಯ್ಯ