ಆರೋಗ್ಯದ ಬಗ್ಗೆ ಕಾಳಜಿ ವಹಿಸಿ: ಮೊಹಮ್ಮದ್ ಇಮಾಮ್ ನಿಯಾಜಿ

KannadaprabhaNewsNetwork |  
Published : Apr 06, 2026, 02:45 AM IST
ಫೋಟೋವಿವರ- (5ಎಚ್‌ಪಿಟಿ3) ಹೊಸಪೇಟೆಯ ಚಿತ್ತವಾಡ್ಗಿಯ ಜಾಮೀಯಾ ಮಸೀದ್ ಶಾದಿಮಹಲ್ ನಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಾಮೀಯಾ ಮಸೀದಿ ಕಮಿಟಿಯ ಅಧ್ಯಕ್ಷ ಎಚ್. ಎನ್. ಮೊಹಮ್ಮದ್ ಇಮಾಮ್ ನಿಯಾಜಿ ಮಾತನಾಡಿದರು | Kannada Prabha

ಸಾರಾಂಶ

ನಮ್ಮ ನಿತ್ಯ ಜೀವನದ ಜಂಜಾಟದಲ್ಲಿ ವೈಯಕ್ತಿಕ ಆರೋಗ್ಯ ಕಾಳಜಿಗೆ ಹೆಚ್ಚು ಗಮನಹರಿಸಬೇಕು. ಆರೋಗ್ಯ ತಪಾಸಣಾ ಶಿಬಿರಗಳ ಸದುಪಯೋಗ ಪಡಿಸಿಕೊಳ್ಳಬೇಕು

ಹೊಸಪೇಟೆ: ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಾಮೀಯಾ ಮಸೀದಿ ಕಮಿಟಿಯ ಅಧ್ಯಕ್ಷ ಎಚ್.ಎನ್. ಮೊಹಮ್ಮದ್ ಇಮಾಮ್ ನಿಯಾಜಿ ಹೇಳಿದರು.

ನಗರದ ಚಿತ್ತವಾಡ್ಗಿಯ ಜಾಮೀಯಾ ಮಸೀದ್ ಶಾದಿಮಹಲ್‌ನಲ್ಲಿ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಮತ್ತು ಚಿತ್ತವಾಡ್ಗಿಯ ಜಾಮೀಯಾ ಮಸೀದ್ ಹಾಗೂ ಶಾದಿಮಹಲ್ ಕಮಿಟಿಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ನಿತ್ಯ ಜೀವನದ ಜಂಜಾಟದಲ್ಲಿ ವೈಯಕ್ತಿಕ ಆರೋಗ್ಯ ಕಾಳಜಿಗೆ ಹೆಚ್ಚು ಗಮನಹರಿಸಬೇಕು. ಆರೋಗ್ಯ ತಪಾಸಣಾ ಶಿಬಿರಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ವೈದ್ಯರ ತಂಡವು ಸಾರ್ವಜನಿಕರಿಗೆ ಸಾಮಾನ್ಯ ಆರೋಗ್ಯ ತಪಾಸಣೆ, ಹೃದಯ ರೊಗ, ನರರೋಗ, ಮೂತ್ರಪಿಂಡದ ಕಲ್ಲುಗಳು, ಕ್ಯಾನ್ಸರ್ ರಕ್ತದೊತ್ತಡ, ಮಧುಮೇಹ ಪರೀಕ್ಷೆ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ನಡೆಸಿ, ರೋಗಿಗಳ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಗತ್ಯ ಸಲಹೆ ಹಾಗೂ ಔಷಧಿಗಳನ್ನು ಉಚಿತವಾಗಿ ವಿತರಿಸಲಾಯಿತು.

ಅಂಜುಮನ್ ಕಮಿಟಿಯ ಪದಾಧಿಕಾರಿಗಳಾದ ಅನ್ಸರ್ ಭಾಷ, ಡಾ.ದುರ್ವೇಶ್ ಮೈನುದ್ದೀನ್. ಸ್ಥಳೀಯ ಮುಖಂಡರಾದ ಖಜಾಹುಸೇನ್ ನಿಯಾಜಿ, ಗಫೂರ್ ಸಾಬ್, ಆತಾಯ ರಸೂಲ್, ಚಿತ್ತವಾಡ್ಗಿ ಜಾಮೀಯ ಮಸೀದಿಯ ಕಾರ್ಯದರ್ಶಿ ಜಾಕೀರ್ ಹುಸೇನ್, ಜಂಟಿ ಕಾರ್ಯದರ್ಶಿ ಮಾಳಗಿ ಗೌಸ್, ಅಜೀಮ್, ಖಜಾಂಚಿ ಚಾಂದ್ ಭಾಷ, ಸದ್ಯಸರಾದ ನಾಸೀರ್ ಅಲಿ, ಜೀಲಾನ್ ಭಾಷ, ಮನ್ಸೂರ್, ಮೆಹಬೂಬ್ ಸಾಬ್, ಮೆಹಬೂಬ್, ಮುಕ್ತಿಯಾರ್ ಹಾಗೂ ಜಾಮೀಯ ಮಸೀದಿಯ ಅಫೀಸಾಬ್ ಮೊಹಮ್ಮದ್ ಅನೀಫ್ ಸೇರಿದಂತೆ ಜಾಮೀಯ ಮಸೀದಿಯ ಸ್ವಯಂ ಸೇವಕರು ಮತ್ತು ಸಪ್ತಗಿರಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ, ಮಲಯಾಳಂನಲ್ಲಿ ‘ಅಮ್ಮ ಭಗವತೀ’ ಭಕ್ತಿಗೀತೆ ಲೋಕಾರ್ಪಣೆ
ಫಲಿಸಿದ ಪ್ರಾರ್ಥನೆ: ನಾಲ್ಕು ದಿನ ಬಳಿಕ ಚಾರಣಿಗ ಯುವತಿ ಪತ್ತೆ