ಕನ್ನಡಪ್ರಭ ವಾರ್ತೆ ಬೆಂಗಳೂರು
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ್ ಅವರಲ್ಲಿ ಮನವಿ ಮಾಡಿರುವ ಅವರು, 2025-26ನೇ ಸಾಲಿನ ಹಂಗಾಮಿನಲ್ಲಿ ರಾಜ್ಯದ ರೈತ ಸಮುದಾಯದ ಆರ್ಥಿಕ ಹಿತದೃಷ್ಟಿಯಿಂದ ಸರ್ಕಾರ ಪ್ರತಿ ಟನ್ ಕಬ್ಬಿಗೆ 100 ರು. ಹೆಚ್ಚುವರಿ ಪ್ರೋತ್ಸಾಹಧನ ಘೋಷಿಸಿತ್ತು. ಆದರೆ. ದಕ್ಷಿಣ ಕರ್ನಾಟಕದ ಬನ್ನಾರಿ ಅಮ್ಮನ್ ಶುಗರ್ಸ್ (ಕೊಳ್ಳೇಗಾಲ), ಚಾಮುಂಡೇಶ್ವರಿ ಶುಗರ್ಸ್ ಲಿ (ಚನ್ನರಾಯಪಟ್ಟಣ), ಕೋರಮಂಡಲ ಶುಗರ್ಸ್ (ಕೆ.ಆರ್.ಪೇಟೆ), ಚಾಮುಂಡೇಶ್ವರಿ ಶುಗರ್ಸ್ ಲಿಮಿಟೆಡ್ (ಮದ್ದೂರು), ಎಂಆರ್ ಎನ್ ಕೇನ್ ಪವರ್ ಆ್ಯಂಡ್ ಬಯೋರಿಫೈನರೀಸ್ ಪ್ರೈ.ಲಿ (ಪಾಂಡವಪುರ), ಎನ್ ಎಸ್ ಎಲ್ ಶುಗರ್ಸ್ ಲಿ. (ಮದ್ದೂರು), ಬನ್ನಾರಿ ಅಮ್ಮನ್ ಶುಗರ್ಸ್ ಲಿಮಿಟೆಡ್ (ನಂಜನಗೂಡು) ಎಂಬ ಖಾಸಗಿ ಕಾರ್ಖಾನೆಗಳ ಹಠಮಾರಿ ಧೋರಣೆ ಮತ್ತು ಕಾನೂನು ಸಂಘರ್ಷದಿಂದ ರೈತರಿಗೆ ತೊಂದರೆಯಾಗಿದೆ ಎಂದು ಆರೋಪಿಸಿದ್ದಾರೆ.
ರಾಜ್ಯದ ಒಟ್ಟು 81 ಕಾರ್ಖಾನೆಗಳ ಪೈಕಿ ಉತ್ತರ ಕರ್ನಾಟಕದ 73 ಕಾರ್ಖಾನೆಗಳು ಸರ್ಕಾರದ ಆದೇಶಕ್ಕೆ ಬದ್ಧವಾಗಿ ರೈತರಿಗೆ ಸಕಾಲದಲ್ಲಿ ಪ್ರತಿ ಟನ್‌ಗೆ ಹೆಚ್ಚುವರಿ 100 ರು.ಗಳನ್ನು ಪಾವತಿ ಮಾಡುತ್ತಿವೆ. ಆದರೆ, ದಕ್ಷಿಣ ಕರ್ನಾಟಕದ ಈ ಏಳು ಖಾಸಗಿ ಕಾರ್ಖಾನೆಗಳು ಸರ್ಕಾರದ ಆದೇಶ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿವೆ. ಅಲ್ಲದೆ, ಜಿಲ್ಲಾಡಳಿತಗಳ ಸಭೆ ಮತ್ತು ಸೂಚನೆಗಳನ್ನು ಕಿಂಚಿತ್ತೂ ಲೆಕ್ಕಿಸದೆ, ರೈತರಿಗೆ ಕೊಡಬೇಕಾದ ಹಣ ತಡೆಯುತ್ತಿವೆ ಎಂದು ದೂರಿದ್ದಾರೆ.