ಸ್ವಚ್ಛತೆ, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಿ: ಸಂಗ್ವಾರ

KannadaprabhaNewsNetwork | Published : Sep 29, 2024 1:37 AM

ಸಾರಾಂಶ

Take more care about cleanliness, health: Sangwara

-ಸ್ವಚ್ಛತೆಯ ಸೇವಾ ಕಾರ್ಯಕ್ರಮದ ಪ್ರಯುಕ್ತ ಉಚಿತ ಆರೋಗ್ಯ ಶಿಬಿರಕ್ಕೆ ಚಾಲನೆ

-----

ಕನ್ನಡಪ್ರಭ ವಾರ್ತೆ ವಡಗೇರಾ

ಸ್ವಚ್ಛತೆ, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು, ಅಸ್ಪಚ್ಛತೆಯಿಂದಲೇ ರೋಗರುಜಿನಗಳು ಹರಡುತ್ತಿವೆ ಎಂದು ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಸಂಗ್ವಾರ ಹೇಳಿದರು.

ಖಾಸಗಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಪಂಚಾಯ್ತಿ ಯಾದಗಿರಿ ಮತ್ತು ತಾಲೂಕು ಪಂಚಾಯ್ತಿ ವಡಗೇರಾ ಸಂಯೋಗದಲ್ಲಿ ನಡೆದ ಸ್ವಚ್ಛತೆಯ ಸೇವಾ ಕಾರ್ಯಕ್ರಮದ ಅಂಗವಾಗಿ ಉಚಿತ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶುದ್ಧ ನೀರು ಆಹಾರ ಸೇವನೆ ಪಾಲನೆ ಮಾಡಿ ಪ್ರತಿಯೊಬ್ಬರು 40 ವರ್ಷ ದಾಟಿದಾಗ, ವೈದ್ಯರನ್ನು ಸಂಪರ್ಕಿಸಿ ದೇಹದ ವಿವಿಧ ತಪಾಸಣೆಗಳನ್ನು ಮಾಡಿಸಿಕೊಂಡು ವೈದ್ಯರ ಸಲಹೆಯನ್ನು ಪಡೆಯಬೇಕು. ಅಂದಾಗ ಮಾತ್ರ ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವೆಂದರು.

ಸ್ವಚ್ಛತೆ ಸೇವೆ ಅಂಗವಾಗಿ ಎಸ್.ಬಿ.ಎಂ. ಸಂಯೋಜಕರಾದ ಶಿವಕುಮಾರ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಮಾನಸಿಕ ಆರೋಗ್ಯ ತಜ್ಞರಾದ ಶೀಬಾ ಆರೋಗ್ಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ತಾಲೂಕು ಆರೋಗ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ವಚ್ಛತಾ ಕಾರ್ಯಕರ್ತರಿಗೆ ರಕ್ತದೊತ್ತಡ ಸಕ್ಕರೆ ಕಾಯಿಲೆಯ ಅಸ್ತಮಾ ಇನ್ನಿತರ ಖಾಯಿಲೆಗಳ ತಪಾಸಣೆ ಮಾಡಿ ಸೂಕ್ತ ಸಲಹೆ ಔಷಧಿ ವಿತರಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನೆರವೇರಿಸಲಾಯಿತು. ಮಹತ್ವಾಕಾಂಕ್ಷಿ ಯೋಜನೆಯ ತಾಲೂಕು ಸಂಯೋಜಕ ಕಾವೇರಿ ರಸಾಳಕರ್ ಮಾತನಾಡಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಶೋಕ್ ಸಾಹು ಕರಣಗಿ, ತಾಲೂಕು ಪಂಚಾಯ್ತಿ ಸಹಾಯಕ ನಿರ್ದೇಶಕ ಶರಣಗೌಡ ಊಳ್ಳೆಸೂಗುರ, ಕೃಷಿ ಅಧಿಕಾರಿ ಗಣಪತಿ, ಅಂಗನವಾಡಿ ಮೇಲ್ವಿಚಾರಕಿ ನಾಗಮ್ಮ, ಕಸ್ತೂರಬಾ ಗಾಂಧಿ ಬಾಲಕಿಯರ ಮುಖ್ಯ ಶಿಕ್ಷಕಿ ಲಲಿತಾಬಾಯಿ ನಾಟೇಕಾರ ಇದ್ದರು.

------

28ವೈಡಿಆರ್1: ಸ್ವಚ್ಛತೆಯ ಸೇವಾ ಕಾರ್ಯಕ್ರಮದ ಪ್ರಯುಕ್ತ ಉಚಿತ ಆರೋಗ್ಯಶಿಬಿರಕ್ಕೆ ಚಾಲನೆ ನೀಡಲಾಯಿತು.

Share this article