ವೈಯಕ್ತಿಕ ಆರೋಗ್ಯಕ್ಕೆ ವಿಶೇಷ ಕಾಳಜಿ ವಹಿಸಿ

KannadaprabhaNewsNetwork |  
Published : Nov 06, 2025, 02:30 AM IST
5ಕೆಪಿಎಲ್23 ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದಲ್ಲಿ ಜನಜಾಗೃತಿ ಕಲಾರಂಗ ಸಂಸ್ಥೆಯ ಕಲಾತಂಡದವರಿಂದ ನಡೆದ ಬೀದಿ ನಾಟಕ ಪ್ರದರ್ಶನ | Kannada Prabha

ಸಾರಾಂಶ

ಸನ್ನಿವೇಶಗಳ ಮೂಲಕ ಅಭಿನಯಿಸಿದ ಬೀದಿನಾಟಕ, ಜಾಗೃತಿ ಗೀತೆಗಳ ಕಾರ್ಯಕ್ರಮವು ಜನಮನ ರಂಜಿಸಿತು.

ಕೊಪ್ಪಳ: ಜೀವನದಲ್ಲಿ ಬಂಗಾರ, ಬೆಳ್ಳಿ, ಮಹಡಿ, ವಸ್ತು-ಒಡವೆ ಏನೆಲ್ಲವೂ ಇದ್ದರೇನು?, ನಾವು ಸುಖ-ಸಂತೋಷದಿಂದ ಇರಬೇಕಾದರೆ ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಆರೋಗ್ಯದತ್ತ ವಿಶೇಷವಾಗಿ ಕಾಳಜಿವಹಿಸಿ,ಜಾಗೃತರಾಗಬೇಕು ಎಂದು ಗಂಗಾವತಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಆಶಾಬೇಗಂ ಕರೆ ನೀಡಿದರು.

ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಎನ್.ಎಚ್.ಎಂ.ಯೋಜನೆಗಳು ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಕುಷ್ಟಗಿಯ ಶರಣಪ್ಪ ವಡಿಗೇರಿ ನೇತೃತ್ವದ ಜನಜಾಗೃತಿ ಕಲಾರಂಗ ಸಂಸ್ಥೆಯ ಕಲಾತಂಡದವರಿಂದ ನಡೆದ ಬೀದಿ ನಾಟಕ ಪ್ರದರ್ಶನ ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ದುರುಗೇಶ್, ಶ್ರೀದೇವಿ, ಶೋಭಾ, ಗುರುರಾಜ ಮತ್ತು ವೀರೇಶ, ಆಶಾ ಉಮಾದೇವಿ, ಅಂಗನವಾಡಿ ಕಾರ್ಯಕರ್ತೆ ಅನ್ನಪೂರ್ಣ, ಸಣ್ಣ ಹುಲಿಗೆಮ್ಮ ಭಾಗವಹಿಸಿದ್ದರು.

ನಂತರ ತಂಡದವರಿಂದ ಆರೋಗ್ಯ ಯೋಜನೆಗಳಾದ ಕ್ಷಯರೋಗ, ಹಾವು ಕಡಿತ, ಹೃದಯಾಘಾತ, ಬಾಲ್ಯವಿವಾಹ, ತಾಯಿ-ಮಗುವಿನ ಆರೋಗ್ಯ, ಲಸಿಕಾ ಯೋಜನೆ, ಹದಿಹರೆಯದವರ ಸಮಸ್ಯೆಗಳು ಮಾನಸಿಕ ಕಾಯಿಲೆ ಮುಂತಾದ ವಿಷಯ ತಿಳಿಸುವ ಸನ್ನಿವೇಶಗಳ ಮೂಲಕ ಅಭಿನಯಿಸಿದ ಬೀದಿನಾಟಕ, ಜಾಗೃತಿ ಗೀತೆಗಳ ಕಾರ್ಯಕ್ರಮವು ಜನಮನ ರಂಜಿಸಿತು.

ಕಲಾತಂಡದಲ್ಲಿ ದುರಗಪ್ಪ ಅಡವಿಭಾವಿ, ವೀರಯ್ಯಸ್ವಾಮಿ, ಶರಣಯ್ಯ, ರೇಣುಕಾ ಮಡಿವಾಳರ, ಮಂಜುಳಾ ಬೆಟಗೇರಿ, ದೇವೇಂದ್ರಪ್ಪ, ರಾಜಣ್ಣ ಕ್ಯಾದಿಗುಪ್ಪ ಕಲಾವಿದರು ಭಾಗವಹಿಸಿದ್ದರು. ಕೊನೆಯಲ್ಲಿ ದುರುಗೇಶ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ